ಪ್ಲಾಸ್ಟಿಕ್ ಕೈಗಾರಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇನ್ನೆರಡು ವರ್ಷಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಸರ್ಕಾರ ಚಿಂತಿಸಿದೆ. ಪಾರ್ಕ್ಗಳ ಅವಶ್ಯಕತೆ ಬಗ್ಗೆ ಈಗಾಗಲೇ ಅಧ್ಯಯನ ಕೈಗೊಳ್ಳಲಾಗಿದ್ದು, 2-3 ತಿಂಗಳಲ್ಲಿ ಯೋಜನಾ ಆಯೋಗದಿಂದ ನಿರ್ಧಾರ ಹೊರಬೀಳಲಿದೆ. ಇದಕ್ಕೆ ಅನುಮತಿ ದೊರೆತಲ್ಲಿ ಅಮೆರಿಕದಂತಹ ರಾಷ್ಟ್ರಗಳಿಗೆ ಹೆಚ್ಚು ಪ್ಲಾಸ್ಟಿಕ್ ರಫ್ತು ಮಾಡಲು ಸಾಧ್ಯವಾಗುತ್ತದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀಕಾಂತ್ ಜೇನಾ ತಿಳಿಸಿದ್ದಾರೆ.