ತಿರುಪತಿ ದೇಗುಲದ ದರ್ಶನ ಸಂದರ್ಭ ಇನ್ನು ಮುಂದೆ ಲಡ್ಡು ಉಚಿತವಾಗಿ ಸಿಗುವುದಿಲ್ಲ. ಟಿಟಿಡಿ ನಡೆಸಿದ ಸಭೆಯಲ್ಲಿ ಪ್ರಸಾದ ರೂಪದ ಲಡ್ಡಿಗೂ ದರ ವಿಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಜನವರಿ 1ರಿಂದ ತಲಾ ರೂಪಾಯಿ 10 ದರದಲ್ಲಿ ಎರಡು ಲಡ್ಡು ಮಾರಾಟ ಮಾಡಲಾಗುವ ನಿರ್ಣಯ ಹೊರಬಿದ್ದಿದೆ.
ತಿರುಪತಿ ಬಾಲಾಜಿಯ ಲಡ್ಡು ಪ್ರಸಾದ ಜನವರಿ 1ರಿಂದ ದುಬಾರಿಯೂ ಆಗಲಿದೆ. ಒಂದು ಲಡ್ಡು ಬೆಲೆ ರೂ 5ರಿಂದ ರೂ 10ಕ್ಕೆ ಏರಿಕೆ ಆಗಲಿದೆ. ಅಂದರೆ, 25 ರೂ ಕೊಟ್ಟು ಪಡೆದ ಲಡ್ಡಿಗೆ 10 ರೂ ಹೆಚ್ಚಾಗಿದೆ. ಆ ಮೂಲಕ ಅಲ್ಲದೆ ಭಕ್ತರಿಗೆ ವಿತರಿಸುತ್ತಿದ್ದ ಉಚಿತ ಲಡ್ಡು ಪ್ರಸಾದದ ಸೌಲಭ್ಯ ಕೂಡ 2010ರ ಜ. 1ರಿಂದ ರದ್ದಾಗಲಿದೆ. ಜ.1ರವರೆಗೆ ಈಗಿನಿಂದಲೇ ಯಾತ್ರಾರ್ಥಿಗಳು ಒಂದು ಲಡ್ಡಿಗೆ 5 ರೂ ಕೊಟ್ಟು ಪಡೆಯಬಹುದು ಹಾಗೂ ಒಂದು ಲಡ್ಡು ಉಚಿತವಾಗಿ ದರ್ಶನದ ವೇಳೆ ಪಡೆಯಬಹುದು.
ಪ್ರಪಂಚದ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿ ದೇಗುಲ ಉಚಿತ ಲಡ್ಡಿಗೆ ಬೆಲೆ ವಿಧಿಸುವ ಉದ್ದೇಶವಾದರೂ ಏನು ಎಂದರೆ, ತಿರುಪತಿ ನೀಡುವ ಉಚಿತ ಲಡ್ಡಿನಿಂದ ದೇಗುಲಕ್ಕೆ ವಾರ್ಷಿಕವಾಗಿ 40 ಕೋಟಿ ಹೊರೆಯಾಗುತ್ತದೆ. ಅಷ್ಟೇ ಅಲ್ಲ, ಇದು ಸಾಕಷ್ಟು ಕಾಳಸಂತೆಯಲ್ಲೇ ಬಿಕರಿಯಾಗುತ್ತಿರುವುದರಿಂದ ಇಂಥ ಸಮಸ್ಯೆಗೆ ಅಂತಿಮ ಹಾಡುವುದು ಉದ್ದೇಶವಾಗಿತ್ತು. ಅದಕ್ಕಾಗಿ ಇಂತಹ ತೊಂದರೆ ನಿವಾರಣೆಗೆ ಲಡ್ಡಿಗೆ 10 ರೂ ಬೆಲೆ ವಿಧಿಸಲಾಗಿದೆ ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ಟಿ.ಕೆ.ಆದಿಕೇಶವಲು ತಿಳಿಸಿದ್ದಾರೆ.
ಟಿಟಿಡಿ ಪ್ರತಿ ದಿನ 2 ಲಕ್ಷ ಲಡ್ಡುಗಳನ್ನು ತಯಾರಿಸುತ್ತದೆ. ಪ್ರತಿ ದಿನ ಸರಾಸರಿ 30 ಸಾವಿರ ಯಾತ್ರಾರ್ಥಿಗಳು ಬಂದು ದರ್ಶನ ಪಡೆಯುತ್ತಾರೆ. ಟಿಟಿಡಿಯ ಈ ಹೊಸ ನಿರ್ಧಾರದಿಂದ ಯಾತ್ರಾರ್ಥಿಗಳಿಗೆ ಅತೀವ ಬೇಸರವಾಗಿದೆ.