ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸಿ ಗುಜರಾತ್ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಕ್ರಮ ಇದು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ನ ತೀವ್ರ ವಿರೋಧದ ನಡುವೆ ಗುಜರಾತ್ ಸ್ಥಳೀಯ ಪ್ರಾಧಿಕಾರಗಳ ಕಾನೂನು (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು.
ಈ ಮೂಲಕ ಗುಜರಾತ್ ಈ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯವೆನಿಸಿದೆ. ಈ ಬಗ್ಗೆ ಮಾತನಾಡಿದ ಗುಜರಾತ್ ರಾಜ್ಯ ನಗರಾಭಿವೃದ್ಧಿ ಸಚಿವ ನಿತಿನ್ ಪಟೇಲ್, ಈ ಮಸೂದೆಯ ಅಂಗೀಕಾರದಿಂದ ಪ್ರಜಾಪ್ರಭುತ್ವ ನೀತಿಗೆ ಬಲ ಬಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಅರ್ಥಪೂರ್ಣವಾಗಿಸಿದೆ ಎಂದರು.
ಈ ಹೊಸ ಕಾನೂನು ಎಲ್ಲ ಏಳು ನಗರಸಭೆಗಳು, 159 ಪುರಸಭೆ, 26 ಜಿಲ್ಲಾ ಪಂಚಾಯತ್‌ಗಳು, 223 ತಾಲೂಕು ಪಂಚಾಯತ್‌ಗಳು ಹಾಗೂ 13,713 ಗ್ರಾಮ ಪಂಚಾಯತ್‌ಗಳಿಗೆ ಅನ್ವಯಿಸಲಿದೆ.