ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ವಿರಸಕ್ಕೆ ಜ್ಯೋತಿ ಬಸು ಬೆಂಬಲವಿರಲಿಲ್ಲ: ಚಟರ್ಜಿ (Jyoti Basu | UPA | Somnath Chatterjee | West Bengal)
Bookmark and Share Feedback Print
 
ಭಾನುವಾರ ಇಹಲೋಕ ತ್ಯಜಿಸಿದ ಎಡರಂಗದ ಪ್ರಮುಖ ಜ್ಯೋತಿ ಬಸು ಅವರು, ಭಾರತ-ಅಮೆರಿಕಾ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿ ಬೆಂಬಲ ಹಿಂದಕ್ಕೆ ಪಡೆದುಕೊಂಡ ಸಿಪಿಐಎಂ ನಿರ್ಧಾರವನ್ನು ಬೆಂಬಲಿಸಿರಲಿಲ್ಲ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಬಹಿರಂಗಪಡಿಸಿದ್ದಾರೆ.

ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 95ರ ಬಸು ಕೊನೆಯುಸಿರೆಳೆದ ಬಳಿಕ ಅವರ ದೇಹವನ್ನು ಅಂತ್ಯಕ್ರಿಯೆ ನಡೆಸಲಾಗಿಲ್ಲ. ಬದಲಿಗೆ ನಾಳೆ ಇಲ್ಲಿನ ಆಸ್ಪತ್ರೆಯೊಂದಕ್ಕೆ ಹಸ್ತಾಂತರಿಸಲಾಗುತ್ತದೆ. ಬದುಕಿರುವಾಗಲೇ ಅವರು ತನ್ನ ದೇಹವನ್ನು ದಾನ ಮಾಡುವ ಸಂಬಂಧ ಆಸ್ಪತ್ರೆಯೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದರು.
PTI


ಸತತ 23 ವರ್ಷಗಳ ಕಾಲ ಐದು ಬಾರಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಸು, ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿದ್ದ ಬದಲಾವಣೆಗಳನ್ನು ಸಹಿಸಿಕೊಂಡಿರಲಿಲ್ಲ ಎಂದು ಪಕ್ಷದಿಂದ ಉಚ್ಛಾಟನೆಗೊಂಡಿರುವ ನಾಯಕ ಚಟರ್ಜಿ ತಿಳಿಸಿದ್ದಾರೆ.

ಮತೀಯ ಸಿದ್ಧಾಂತದ ಜತೆ ಜ್ಯೋತಿ ಬಸು ಯಾವತ್ತೂ ಸಾಗಿದವರಲ್ಲ. ಅವರು ದೆಹಲಿಯ ಈಗಿನ ನಾಯಕತ್ವವನ್ನು ಒಪ್ಪಿಕೊಂಡಿದ್ದರೇ ಎಂಬ ಪ್ರಶ್ನೆಗೆ ಚಟರ್ಜಿ, ಅವರು ಯಾವತ್ತೂ ತನ್ನ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡರಲ್ಲ; 1996ರ ಪ್ರಸಂಗ ನಿಮ್ಮೆದುರಿಗೇ ಇದೆ. ಪ್ರಧಾನಿಯಾಗುವ ಅವಕಾಶ ಕಾಲ ಬುಡಕ್ಕೆ ಬಂದಿದ್ದಾಗ ಪಕ್ಷವು ಅದನ್ನು ಸೈದ್ಧಾಂತಿಕ ಪ್ರಶ್ನೆಗಳನ್ನು ಮುಂದಿಟ್ಟು ತಳ್ಳಿ ಹಾಕಿತ್ತು. ಇದು ಪಕ್ಷ ಮತ್ತು ಜನತೆ ಅಪೂರ್ವ ಅವಕಾಶವೊಂದನ್ನು ಕೈ ಚೆಲ್ಲಿದಂತಾಗಿದೆ ಎಂದು ಅವರು ಭಾವಿಸಿದ್ದರು ಎಂದು ಚಟರ್ಜಿ ವಿವರಿಸಿದ್ದಾರೆ.

ಇಂತಹ ಇತಿಹಾಸಗಳು ಮತ್ತೆ ಪುನರಾವರ್ತನೆಯಾಗುವುದು ಕಷ್ಟ. ಅಲ್ಲದೆ ಇತ್ತೀಚಿನ ಯುಪಿಎ ಸರಕಾರದಲ್ಲಿ ಭಾಗಿಯಾಗಿದ್ದ ಸಿಪಿಐಎಂ ಅಮೆರಿಕಾ ಜತೆಗಿನ ಒಪ್ಪಂದವನ್ನು ವಿರೋಧಿಸಿ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡದ್ದು ಕೂಡ ಬಸು ಅವರಿಗೆ ಸಮಾಧಾನ ತಂದಿರಲಿಲ್ಲ ಎಂದರು.

ಜ್ಯೋತಿ ಬಸು ಎಂಬ ದೃಜ್ಯೋತಿಯನ್ನು ಮಾದರಿಯಾಗಿಟ್ಟುಕೊಂಡು ಪಕ್ಷವು ತನ್ನ ಕೆಲವು ನೀತಿಗಳು ಮತ್ತು ಕುರುಡು ನಂಬಿಕೆಗಳಿಂದ ಹೊರ ಬರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಚಟರ್ಜಿ, ಸಿಪಿಐಎಂ ಕುರಿತು ಯಾವುದೇ ಮಾತು ಹೇಳಲು ನನಗೆ ಅಧಿಕಾರವಿಲ್ಲ; ನಾನು ಆ ಪಕ್ಷದ ಸಲಹೆಗಾರನೂ ಅಲ್ಲ. ಆದರೆ ಪಕ್ಷದ ಮುಖಂಡರು ಬಸು ಅವರ ಜೀವನದ ಪಾಠಗಳನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ