ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಸು ಏಕತೆ ಹಾಗೂ ಒಮ್ಮತದ ವ್ಯಕ್ತಿ: ಪ್ರಧಾನಿ (Congress | Jyoti Basu | Manmohan Singh | CPI(M))
Bookmark and Share Feedback Print
 
ಪಶ್ಚಿಮ ಬಂಗಳಾದ ಮಾಜಿ ಮುಖ್ಯಮಂತ್ರಿ ದಿವಂಗತ ಜ್ಯೋತಿ ಬಸು, ರಾಷ್ಟ್ರದ ರಾಜಧಾನಿಯಲ್ಲಿ ಪ್ರಾದೇಶಿಕ ಧ್ವನಿಯಾಗಿದ್ದರು. ಒಮ್ಮತ ಹಾಗೂ ಪ್ರಾಮಾಣಿಕತೆಯ ಮೂರ್ತಿಯಾಗಿದ್ದ ಅವರು, ತಾವು ಹಲವಾರು ಮಹತ್ವದ ಸಮಸ್ಯೆಗಳಿಗೆ ಅವರಿಂದ ಸಲಹೆಯನ್ನು ಪಡೆದಿದ್ದು, ಪ್ರತಿಕ್ರಿಯೆ ಸದಾ ಪೂರಕವಾಗಿರುತ್ತಿತ್ತು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವರ್ಣಿಸಿದ್ದಾರೆ.

95 ವರ್ಷ ವಯಸ್ಸಿನ ಸಿಪಿಐ(ಎಂ) ನಾಯಕ ಬಸು, ಸಾವಿನಿಂದಾಗಿ ಭಾರತದ ರಾಜಕೀಯದಲ್ಲಿ ಯುಗವೊಂದು ಅಂತ್ಯಗೊಂಡಂತಾಗಿದೆ. ಅವರು ತಮ್ಮ ಜೀವನದಲ್ಲಿ ಶ್ರೇಷ್ಠ ಏಕತೆ ಹಾಗೂ ಆಳವಾದ ಜಾತ್ಯಾತೀತ ಮೌಲ್ಯಗಳನ್ನು ಹೊಂದಿದ್ದರು ಎಂದು ಪ್ರಧಾನಿ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

ಸುಮಾರು ಆರು ದಶಕಗಳ ಕಾಲದ ರಾಜಕೀಯ ಜೀವನದಲ್ಲಿ,ಪಕ್ಷವನ್ನು ಅಧಿಕಾರಕ್ಕೆ ತಂದು ತಮ್ಮ ಸುದೀರ್ಘ ನಾಯಕತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿದರು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಈದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಮಾಜಿ ಮುಖ್ಯಮಂತ್ರಿ ದಿವಂಗತ ಜ್ಯೋತಿ ಬಸು, ಭಾರತಾಂಬೆಯ ಶ್ರೇಷ್ಠ ಪುತ್ರರಾಗಿದ್ದರು ಎಂದು ಬಣ್ಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ