ಇಂದಿರಾಗಾಂಧಿ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ, ವಿಮಾನ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ, ಕನಿಷ್ಠ 30 ವಿಮಾನಗಳ ಹಾರಾಟವನ್ನು ತಡೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶಿಯ ಹಾರಾಟದ 12 ವಿಮಾನಗಳು ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ವಿಳಂಬವಾಗಲಿದ್ದು, ನಿನ್ನೆ ರಾತ್ರಿಯಿಂದ ಭುವನೇಶ್ವರ್ ಮುಂಬೈ ಸಿಮ್ಲಾ ಔರಂಗಾಬಾದ್ ಮತ್ತು ಲಕ್ನೋ ನಗರಗಳಿಗೆ ಸಂಚರಿಸುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದುಬೈ ಸಿಂಗಾಪೂರ್ ಮತ್ತು ಬೀಜಿಂಗ್‌ನಿಂದ ಆಗಮಿಸುವ ಅಂತಾರಾಷ್ಟ್ರೀಯ ಹಾರಾಟದ ವಿಮಾನಗಳು, ಕನಿಷ್ಛ ಮೂರು ಗಂಟೆಗಳ ಕಾಲ ವಿಳಂಬವಾಗಲಿವೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟ ಮಂಜಿನಿಂದಾಗಿ ಉತ್ತರ ಭಾರತ ತಲ್ಲಣಗೊಂಡಿದ್ದು, 42 ರೈಲುಗಳು ವಿಳಂಬವಾಗಿದ್ದು, 9 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.