ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಗಡಾಯಿಸಿದ ಬಸು ಆರೋಗ್ಯ; ಕ್ಷೀಣಿಸುತ್ತಿವೆ ಭರವಸೆಗಳು (CPM patriarch | Jyoti Basu | vital organs | heart)
Bookmark and Share Feedback Print
 
ಸಿಪಿಎಂ ಮುತ್ಸದ್ದಿ ಜ್ಯೋತಿ ಬಸು ಅವರ ಆರೋಗ್ಯ ಶನಿವಾರ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದು, ಅವರ ಎಲ್ಲಾ ಪ್ರಮುಖ ಅಂಗಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ; ಹಾಗಾಗಿ ಧನಾತ್ಮಕ ಫಲಿತಾಂಶದ ಭರವಸೆಗಳು ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

ಎಲ್ಲಾ ಐದು ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಮಿದುಳು ಮತ್ತು ಪಿತ್ತಜನಕಾಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಬಸು ಅವರ ಖಾಸಗಿ ವೈದ್ಯ ಹಾಗೂ ಎಎಂಆರ್ಐ ಆಸ್ಪತ್ರೆ ವೈದ್ಯಕೀಯ ಮಂಡಳಿಯ ಸದಸ್ಯ ಡಾ. ಅಜಿತ್ ಕುಮಾರ್ ಮೈಟೀ ತಿಳಿಸಿದ್ದಾರೆ.

95ರ ಹರೆಯದ ನಾಯಕ ಚೇತರಿಕೆ ಕಾಣುವ ಅವಕಾಶಗಳ ಕುರಿತು ಪ್ರಶ್ನಿಸಿದಾಗ, ಈ ವಯಸ್ಸಿನಲ್ಲಿ ಮತ್ತು ಅವರು ಹೊಂದಿರುವ ಸಮಸ್ಯೆಗಳಿಂದಾಗಿ ಧನಾತ್ಮಕ ಫಲಿತಾಂಶಗಳ ನಿರೀಕ್ಷೆ ಅಲ್ಪ ಮಾತ್ರ. ಆದರೂ ನಮ್ಮ ವೈದ್ಯರುಗಳು ತಮ್ಮಿಂದಾಗುವಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಬಸು ಅವರನ್ನು ಮಂದಗತಿಯ ಕ್ಷೀಣ ಸಾಮರ್ಥ್ಯದ ದಿನವಹೀ ಡಯಾಲಿಸಿಸ್‌ಗೆ (ಎಸ್ಎಲ್ಇಡಿಡಿ) ಅಪರಾಹ್ನ ಒಳಪಡಿಸಲಾಗಿದೆ. ಈ ಹಂತದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳದಿದ್ದರೆ ಎಂಟು ಗಂಟೆಗಳಷ್ಟು ಕಾಲ ಮುಂದುವರಿಸಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸಾಮಾನ್ಯ ಡಯಾಲಿಸಿಸ್‌ಗೆ ಸ್ಪಂದಿಸುವ ಸಾಮರ್ಥ್ಯವನ್ನು ರೋಗಿ ಕಳೆದುಕೊಂಡಾಗ ಎಸ್ಎಲ್ಇಡಿಡಿ ವಿಧಾನವನ್ನು ಅನುಸರಿಸಲಾಗುತ್ತದೆ.

ಬಸು ದಾಖಲಾಗಿರುವ ಆಸ್ಪತ್ರೆಗೆ ಇಂದು ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿಯವರು ಭೇಟಿ ನೀಡಿದ್ದಾರೆ.

ಬಸು ನನ್ನನ್ನು ಅಚ್ಚರಿಗೊಳಿಸುವುದನ್ನು ಮುಂದುವರಿಸಿದ್ದಾರೆ. ಅವರು ಯಾವತ್ತೂ ಅಂತಹ ಹೋರಾಟವನ್ನು ಮೈಗೂಡಿಸಿಕೊಂಡು ಬಂದವರು. ಈ ಹೋರಾಟದಲ್ಲೂ ಅವರು ಯಶಸ್ವಿಯಾಗುತ್ತಾರೆಂಬ ಭರವಸೆ ನನ್ನದು. ಅವರು ಗಂಭೀರ ಸ್ಥಿತಿಯಲ್ಲಿದ್ದರೂ, ಡಯಾಲಿಸಿಸ್ ಪೂರ್ಣಗೊಳಿಸುವ ಭರವಸೆಯಿದೆ ಎಂದು ಯೆಚೂರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ