ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀನಾಮೆ ಸ್ವೀಕರಿಸಿದ ಮುಲಾಯಂ; ಅಮರ್ ನಡೆ ಎತ್ತ? (Amar Singh | Samajwadi Party | Mulayam Singh Yadav | general secretary)
Bookmark and Share Feedback Print
 
ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೀಯ ಮಂಡಲಿ ಸೇರಿದಂತೆ ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ಅಮರ್ ಸಿಂಗ್ ನೀಡಿದ್ದ ರಾಜೀನಾಮೆಗಳನ್ನು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸ್ವೀಕರಿಸುವುದರೊಂದಿಗೆ, ಅಮರ್ ಮುಂದಿನ ನಿರ್ಧಾರ ಕುತೂಹಲ ಕೆರಳಿಸಿದೆ.

ಮೂಲಗಳ ಪ್ರಕಾರ ಅವರು ಸಮಾಜವಾದಿ ತತ್ವಗಳನ್ನು ಹೊಂದಿರುವ ಕೆಲವು ಪಕ್ಷಗಳ ಜತೆ ಸಂಪರ್ಕ ಹೊಂದಿದ್ದಾರೆ. ಪಕ್ಷವೊಂದನ್ನು ಹುಟ್ಟು ಹಾಕುವ ಕುರಿತೂ ಅವರು ಯೋಚಿಸಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಜಯಾ ಬಚ್ಚನ್, ಜಯಪ್ರದಾ ಮತ್ತು ಸಂಜಯ್ ದತ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

ಅಮರ್ ರಾಜೀನಾಮೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ದತ್ ಕೂಡ ರಾಜೀನಾಮೆ ನೀಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಈ ಬಳಿಕ ಮುಲಾಯಂ ಅವರು ತೀವ್ರ ಒತ್ತಡಕ್ಕೊಳಗಾಗಿ ಅಮರ್ ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಅಮರ್ ರಾಜೀನಾಮೆ ಹಿಂದಕ್ಕೆ ಪಡೆಯಲು ನಿರಾಕರಿಸಿದ್ದರಿಂದ ಅಂಗೀಕರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕಳೆದ ವರ್ಷ ಸಿಂಗಾಪುರದಲ್ಲಿ ಕಿಡ್ನಿ ಕಸಿ ಚಿಕಿತ್ಸೆಗೊಳಗಾಗಿದ್ದ ಅಮರ್, ಜನವರಿ 6ರಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ಮತ್ತು ಸಂಸದೀಯ ಮಂಡಲಿ ಸದಸ್ಯ ಹುದ್ದೆಗೆ ಆರೋಗ್ಯದ ಕಾರಣ ಮುಂದಿಟ್ಟು ರಾಜೀನಾಮೆ ಸಲ್ಲಿಸಿದ್ದರು.

ಆದರೆ ರಾಜೀನಾಮೆಯ ಹಿಂದಿನ ನಿಜವಾದ ಕಾರಣ ಮುಲಾಯಂ ಮತ್ತು ಅವರ ಸಹೋದರ ರಾಮ್ ಗೋಪಾಲ್ ಯಾದವ್ ಜತೆಗಿನ ಭಿನ್ನಾಭಿಪ್ರಾಯಗಳು ಎಂದು ಪಕ್ಷದ ಮೂಲಗಳು ಹೇಳಿದ್ದು, ಪಕ್ಷದೊಳಗಿನ ಗುಂಪೊಂದು ಅಮರ್ ಅವರನ್ನು ತೀವ್ರವಾಗಿ ವಿರೋಧಿಸುತ್ತಿರುವುದು ರಾಜೀನಾಮೆ ಸ್ವೀಕಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಆದರೆ ರಾಜೀನಾಮೆ ಪ್ರಹಸನದ ಬಳಿಕ ಅಮರ್ ಅಥವಾ ಮುಲಾಯಂ ಪರಸ್ಪರ ಸಾರ್ವಜನಿಕವಾಗಿ ಯಾವುದೇ ಹಾನಿಕರ ಹೇಳಿಕೆಗಳನ್ನು ನೀಡಿಲ್ಲ. ಅದಕ್ಕೂ ಮೊದಲು ಚುನಾವಣೆ ಸಂದರ್ಭದಲ್ಲಿ ಮುಲಾಯಂ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದ ಅಮರ್, ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ