ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದುರಂತ: ಮೃತರಲ್ಲಿ 60 ಮಂದಿ ಕೇರಳ, ಉಳಿದವರು ಕರ್ನಾಟಕ (Kerala | Karnataka | Mangalore | Air India | Air india Accident | Bajape)
ಇಲ್ಲಿನ ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಮಡಿದವರಲ್ಲಿ 60 ಪ್ರಯಾಣಿಕರು ಕೇರಳ ಹಾಗೂ ಕಾಸರಗೋಡಿಗೆ ಸೇರಿದ್ದು, ಉಳಿದವರು ಕರ್ನಾಟಕದವರು ಎಂದು ಏರ್ ಇಂಡಿಯಾ ಅಧಿಕಾರಿ ಅನೂಪ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಘಟನೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ಸಹ ಪೈಲಟ್ ಅಹ್ಲುವಾಲಿಯಾ ಸೇರಿದಂತೆ ವಿಮಾನ ಆರು ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಮಾತನಾಡಿದ ಗೃಹ ಸಚಿವ ವಿ.ಎಸ್. ಆಚಾರ್ಯ, ದುರಂತದಲ್ಲಿ ಎಂಟು ಮಂದಿ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದೇಶದ 11ನೇ ಅತಿ ದೊಡ್ಡ ದುರಂತ ಎಂದು ಪರಿಗಣಿಸಲಾಗಿದ್ದು, ಸ್ಥಳಕ್ಕೆ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಭೇಟಿ ನೀಡಿದ್ದಾರೆ. ನಂತರ ನಗರದ ವೆನ್‌ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದರು.