ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೀಸ್ತಾ ಸೆತಲ್ವಾಡ್‌ ಎನ್‌ಜಿಒಗೆ ಸುಪ್ರೀಂ ಕೋರ್ಟ್ ತಪರಾಕಿ (Supreme Court | Teesta Setalvad | Gujarat | Narendra Modi)
Bookmark and Share Feedback Print
 
ಗೋದ್ರೋತ್ತರ ಕೋಮುಗಲಭೆಯ ಬಲಿಪಶುಗಳಿಗೆ ನ್ಯಾಯ ಒದಗಿಸುವ ಸಂಬಂಧ 2002ರಿಂದ 'ಹೋರಾಟ' ನಡೆಸುತ್ತಾ ಬಂದಿರುವ ಸರಕಾರೇತರ ಸಂಸ್ಥೆ 'ಸಿಟಿಜನ್ ಫಾರ್ ಜಸ್ಟೀಸ್ ಎಂಡ್ ಪೀಸ್' ಮತ್ತು ಇದರ ಮುಖ್ಯಸ್ಥೆ ತೀಸ್ತಾ ಸೆತಲ್ವಾಡ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಗುಜರಾತ್ ಕೋಮುಗಲಭೆ ಸಂಬಂಧ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಆರೋಪ ಹೊತ್ತಿರುವ 'ಸಮಾಜ ಸೇವಕಿ' ತೀಸ್ತಾ ಸೆತಲ್ವಾಡ್ ನೇತೃತ್ವದ ಸರಕಾರೇತರ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಈ ಸಂಬಂಧ ದೂರು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯ, ನಮ್ಮ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳ ಮಧ್ಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
Teesta
PR

ಕೋಮುಗಲಭೆ ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆಯ ಕೊರತೆಯಿದೆ ಎಂದು 'ಸಿಟಿಜನ್ ಫಾರ್ ಜಸ್ಟೀಸ್ ಎಂಡ್ ಪೀಸ್' ಸಂಸ್ಥೆಯು ಸುಪ್ರೀಂ ಕೋರ್ಟ್ ನೇಮಿಸಿರುವ ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಸಿಟ್ ತನಿಖಾ ತಂಡಕ್ಕೆ ಪತ್ರ ಬರೆದು ದೂರಿಕೊಂಡಿತ್ತು. ದೂರಿನ ಪ್ರತಿಯನ್ನು ವಿಶ್ವಸಂಸ್ಥೆಯ ಜಿನೇವಾದಲ್ಲಿರುವ ಮಾನವ ಹಕ್ಕುಗಳ ಸಮಿತಿಗೂ ಕಳುಹಿಸಿಕೊಟ್ಟಿತ್ತು ಎಂದು ನ್ಯಾಯಾಲಯದ ಸಲಹೆಗಾರ ಮತ್ತು ಹಿರಿಯ ವಕೀಲ ಹರೀಶ್ ಸಾಲ್ವೆಯವರು ತಿಳಿಸಿದರು.

ಸಾಕ್ಷಿಗಳ ರಕ್ಷಣೆಯ ಕುರಿತ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದ ಮತ್ತು ಸೂಕ್ಷ್ಮವಾಗಿರುವ ಒಂಬತ್ತು ಗಲಭೆ ಪ್ರಕರಣಗಳ ತನಿಖೆಯ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್ ನೋಡಿಕೊಳ್ಳುತ್ತಿದ್ದ ಹೊತ್ತಿನಲ್ಲಿ ಅಕ್ಟೋಬರ್ 5 ಮತ್ತು 7ರಂದು ತೀಸ್ತಾ ಸೆತಲ್ವಾಡ್ ಅವರ ಎನ್‌ಜಿಒ ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯು ಭಾಗಿಯಾಗಬೇಕೆಂದು ಬಯಸಿರುವುದು ದುರದೃಷ್ಟಕರ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ನಿಮಗೆ ನೂರಾರು ಸಂಘಟನೆಗಳ ಜತೆ ಸಖ್ಯವಿರಬಹುದು. ಆದರೆ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅವರಿಗೆ ಮಾಹಿತಿ ಅಥವಾ ದೂರು ನೀಡುವ ಅಗತ್ಯವೇನಿದೆ? ಇದು ತಕ್ಷಣಕ್ಕೆ ನಿಲ್ಲಬೇಕು. ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗಬಾರದು ಎಂದು ಕಟ್ಟಪ್ಪಣೆ ವಿಧಿಸಿತು.

ಇದು ನಮಗೆ ಸಂಬಂಧಪಟ್ಟ ವಿಚಾರ. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಂಘಟನೆ ಜತೆ ನಿಮಗೇನು ವ್ಯವಹಾರವಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಜೈನ್ ನೇತೃತ್ವದ ವಿಶೇಷ ಪೀಠವು ಪ್ರಶ್ನಿಸಿತು.

ಕೋರ್ಟ್ ಆದೇಶದಿಂದ ತೀವ್ರ ನಿರಾಸೆಗೊಂಡ ಸೆತಲ್ವಾಡ್ ವಕೀಲೆ ಕಾಮಿನಿ ಜೈಸ್ವಾಲ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಸಲ್ಲಿಸುವ ವಿಶ್ವಸಂಸ್ಥೆಗೆ ಪತ್ರ ಬರೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇದರಿಂದ ಮತ್ತಷ್ಟು ಅಸಮಾಧಾನಗೊಂಡ ನ್ಯಾಯಾಲಯವು, ನೀವು ನಿಮ್ಮ ಕಾರ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದಲ್ಲಿ ನಾವು ಇದನ್ನು ಬೇರೆಯೇ ಆದ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ ಎಂದಿತು.
ಸಂಬಂಧಿತ ಮಾಹಿತಿ ಹುಡುಕಿ