ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರಿ ಶಾಸಕ ರಾಕ್ಷಸ: ಹಂತಕಿ ಸ್ಕೂಲ್ ಟೀಚರ್ ಕಿಡಿ (Bihar MLA | Raj Kishore Kesri | Rupam Pathak | BJP)
Bookmark and Share Feedback Print
 
PR

ನನಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದ ಬಿಜೆಪಿ ಶಾಸಕ ಮನುಷ್ಯನೇ ಅಲ್ಲ, ಆತ ರಾಕ್ಷಸ. ಹೀಗೆಂದು ಕಿಡಿ ಕಾರಿರುವುದು ಆತನನ್ನು ಚೂರಿಯಿಂದ ಇರಿದೇ ಕೊಂದು ಹಾಕಿದ ಶಾಲಾ ಶಿಕ್ಷಕಿ ರೂಪಮ್ ಪಾಠಕ್. ಒಂದು ರೀತಿಯಲ್ಲಿ ವ್ಯವಸ್ಥೆಯಿಂದ ಅನ್ಯಾಯಕ್ಕೊಳಗಾಗಿ ತನ್ನದೇ ರೀತಿಯಲ್ಲಿ ನ್ಯಾಯ ಕಂಡುಕೊಂಡ ಪ್ರಕರಣವಿದು.

ಮೊನ್ನೆಯಷ್ಟೇ ಪಾಠಕ್ ಚೂರಿಗೆ ಬಲಿಯಾದವನು ಬಿಹಾರದ ಪೂರ್ಣಿಯಾ ಕ್ಷೇತ್ರದ ಶಾಸಕ ರಾಜ್ ಕಿಶೋರ್ ಕೇಸರಿ. ಕೊಲೆ ಮಾಡಿದ ಹೆಣ್ಣು ಮಗಳು 45ರ ಹರೆಯ ಶಾಲಾ ಶಿಕ್ಷಕಿ. ಸ್ನಾತಕೋತ್ತರ ಪದವೀಧರೆ. ಹತ್ಯೆಗೆ ಕಾರಣ ಲೈಂಗಿಕ ಕಿರುಕುಳ-ಅತ್ಯಾಚಾರ.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಕೇಸರಿ, ಸುದೀರ್ಘಾವಧಿಯಿಂದ ಪಾಠಕ್‌ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕನಿಷ್ಠ ಮೂರು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ. ಇದನ್ನು ತನ್ನಿಂದಾದ ರೀತಿಯಲ್ಲಿ ಪ್ರತಿಭಟನೆ ನಡೆಸಿದರೂ, ನ್ಯಾಯಾಲಯದ ಮೊರೆ ಹೋದರೂ, ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಶಿಕ್ಷಕಿಗೆ ನ್ಯಾಯ ದೊರಕಿರಲಿಲ್ಲ. ಆ ನಿಟ್ಟಿನಲ್ಲಿ ಆಕೆ ನಿರ್ಧರಿಸಿದ ಕೊನೆಯ ಆಯ್ಕೆ ದುಷ್ಟನ ಸಂಹಾರ.

ತನ್ನ ಗಂಡ ಅಶೋಕ್ ಪಾಠಕ್ ಜತೆ ಸೇರಿ 2007ರಲ್ಲಿ ಖಾಸಗಿ ಶಾಲೆಯೊಂದನ್ನು ರೂಪಮ್ ಪಾಠಕ್ ತೆರೆದಿದ್ದರು. ಇದರ ಕಾರ್ಯಕ್ರಮವೊಂದಕ್ಕಾಗಿ ಶಾಸಕ ಕೇಸರಿಯನ್ನು ಆಹ್ವಾನಿಸಲಾಗಿತ್ತು. ಆ ಬಳಿಕ ಆತನ ಕಿರುಕುಳ ಆರಂಭವಾಗಿತ್ತು. ಇದು ಇತ್ತೀಚಿನವರೆಗೂ ನಡೆದುಕೊಂಡು ಬಂದಿತ್ತು.

2010ರ ಏಪ್ರಿಲ್ 18ರಂದು ಈ ಸಂಬಂಧ ಶಾಸಕ ಕೇಸರಿ ಮತ್ತು ಆತನ ಆಪ್ತ ಸಹಾಯಕ ಬಿಪಿನ್ ರೈ ಎಂಬಾತನ ಮೇಲೆ ರೂಪಮ್ ಪಾಠಕ್ ದೂರು ನೀಡಿದ್ದರು. ಕಳೆದ ಮೂರು ವರ್ಷಗಳಿಂದ ಇವರು ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಎರಡನೇ ಪುಟದಲ್ಲಿ ಮುಂದುವರಿದಿದೆ - ಇಲ್ಲಿ ಕ್ಲಿಕ್ ಮಾಡಿ


 
ಸಂಬಂಧಿತ ಮಾಹಿತಿ ಹುಡುಕಿ