ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲ್ವೆ ಬಜೆಟ್; ಕರ್ನಾಟಕಕ್ಕೆ ದೀದಿಯ 'ಮಮತೆ' ಎಷ್ಟು?
(Railway budget 2011-12 | Mamata Banerjee | Trinamool Congress | Karnataka)
ರೈಲ್ವೆ ಬಜೆಟ್; ಕರ್ನಾಟಕಕ್ಕೆ ದೀದಿಯ 'ಮಮತೆ' ಎಷ್ಟು?
ನವದೆಹಲಿ, ಶುಕ್ರವಾರ, 25 ಫೆಬ್ರವರಿ 2011( 19:39 IST )
ಕರ್ನಾಟಕದ ನಿರೀಕ್ಷೆಗಳು ಈ ಬಾರಿಯೂ ಬಹುಮಟ್ಟಿಗೆ ಈಡೇರಿಲ್ಲ ಎಂಬ ದೂರುಗಳಿದ್ದರೂ, ಹಲವು ರೈಲುಗಳು- ಯೋಜನೆಗಳು ರಾಜ್ಯಕ್ಕೆ ಸಂದಿವೆ. ಅವುಗಳಲ್ಲಿ ಮುಖ್ಯವಾದುವು ಕರ್ನಾಟಕದಿಂದ ಹೊರಡುವ ಅಥವಾ ಬಂದು ಸೇರುವ ಏಳು ಎಕ್ಸ್‌ಪ್ರೆಸ್ ರೈಲುಗಳ ಸಹಿತ ಒಟ್ಟು 18 ಹೊಸ ರೈಲುಗಳು, ಬೆಂಗಳೂರು-ಮಂಗಳೂರು ರೈಲು ಕಾರವಾರಕ್ಕೆ ವಿಸ್ತರಣೆಗೊಂಡಿರುವುದು ಪ್ರಮುಖವಾದುವು.
ಇಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿದ 2011-12ರ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಮತ್ತು ಸಿಗಲಿರುವ ರೈಲು ಯೋಜನೆಗಳ ವಿವರವಿದು. ಬ್ಯಾನರ್ಜಿಯವರು ಪಶ್ಚಿಮ ಬಂಗಾಲಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವಂತೆ, ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೂಡ ತನ್ನೂರು ಕೋಲಾರಕ್ಕೆ ಕೆಲವು ಯೋಜನೆಗಳನ್ನು ತಂದಿದ್ದಾರೆ.
ಹೊಸದಾಗಿ ಘೋಷಿಸಲಾಗಿರುವ ಎಕ್ಸ್‌ಪ್ರೆಸ್ ರೈಲುಗಳು: * ಗೊಂಡಿಯಾ, ಆಡಿಲಾಬಾದ್ ಮೂಲಕ ಹೌರಾ - ಮೈಸೂರು ಎಕ್ಸ್‌ಪ್ರೆಸ್ - ವಾರಕ್ಕೊಂದು ಬಾರಿ * ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್ - ಪ್ರತಿದಿನ * ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ - ವಾರಕ್ಕೊಮ್ಮೆ * ಹುಬ್ಬಳ್ಳಿ, ವಿಜಾಪುರ ಮೂಲಕ ಅಹಮದಾಬಾದ್-ಯಶವಂತಪುರ ಎಸಿ ಎಕ್ಸ್‌ಪ್ರೆಸ್ - ವಾರಕ್ಕೊಮ್ಮೆ * ಎರ್ನಾಕುಲಂ-ಬೆಂಗಳೂರು ಎಕ್ಸ್‌ಪ್ರೆಸ್ - ವಾರಕ್ಕೊಮ್ಮೆ * ಮಂಗಳೂರು - ಪಾಲಾಕ್ಕಾಡ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ - ಪ್ರತಿದಿನ * ಗೋರಖ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ - ವಾರಕ್ಕೊಮ್ಮೆ * ಬೆಂಗಳೂರು ಮೂಲಕ ಚೆನ್ನೈ-ಶಿರ್ಡಿ ಎಕ್ಸ್‌ಪ್ರೆಸ್ - ವಾರಕ್ಕೊಂದು ಬಾರಿ.
ವಿಶೇಷ ರೈಲುಗಳು: * ಬೆಂಗಳೂರು - ಮೈಸೂರು - ಹಾಸನ (ಬೇಲೂರು, ಹಳೇಬೀಡು, ಶ್ರವಣಬೆಳಗೊಳ) - ಹುಬ್ಬಳ್ಳಿ - ಗದಗ (ಹಂಪಿ) - ಬಿಜಾಪುರ (ಗೋಲ ಗುಮ್ಮಟ) - ಬೆಂಗಳೂರನ್ನು ಸುತ್ತು ಹಾಕುವ 'ಜನ್ಮಭೂಮಿ ಗೌರವ' ವಿಶೇಷ ಪ್ರವಾಸಿ ರೈಲು. * ರಾಜ್ಯಗಳ ರಾಜಧಾನಿಗಳು, ಪ್ರಮುಖ ನಗರಗಳನ್ನು ಸಂಪರ್ಕಿಸುವ 'ರಾಜ್ಯ ರಾಣಿ ಎಕ್ಸ್‌ಪ್ರೆಸ್'. ಇದು ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ - ಪ್ರತಿದಿನ ಸಂಚರಿಸಲಿದೆ. * ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಅಂಗವಾಗಿ 'ವಿವೇಕ್ ಎಕ್ಸ್‌ಪ್ರೆಸ್' ರೈಲು. ಇದು ಪಾಲಕ್ಕಾಡ್ ಮೂಲಕ ಹೌರಾ - ಮಂಗಳೂರು ಎಕ್ಸ್‌ಪ್ರೆಸ್ - ವಾರಕ್ಕೊಮ್ಮೆ ಸಂಚರಿಸಲಿದೆ.
ವಿಸ್ತರಣೆಗೊಂಡಿರುವ ರೈಲುಗಳು: * ಸೋಲಾಪುರ-ಗದಗ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಗೆ. * ಮೈಸೂರು-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ. * ಯಶವಂತಪುರ-ಮಂಗಳೂರು ರೈಲು ಕಾರವಾರಕ್ಕೆ. * ಹುಬ್ಬಳ್ಳಿ-ವಿಜಾಪುರ ರೈಲು ಸೋಲಾಪುರಕ್ಕೆ. * ಹೈದರಾಬಾದ್-ವಾಡಿ ರೈಲು ಗುಲ್ಬರ್ಗಾಕ್ಕೆ.
ಪ್ರಮುಖ ವಿದ್ಯುತ್ ಮಾರ್ಗವನ್ನು ಹೊಂದಿರುವ ರೈಲು (MEMU): * ಬಂಗಾರಪೇಟ-ಕುಪ್ಪಂ ನಡುವೆ ಸೇವೆ.
ಡೀಸೆಲ್-ವಿದ್ಯುತ್ ಚಾಲಿತ ರೈಲು (DEMU): * ರತ್ಲಾಂ-ಚಿತ್ರದುರ್ಗ * ಬೆಂಗಳೂರು ಕಂಟೋನ್ಮೆಂಟ್-ಬಂಗಾರಪೇಟೆ * ಧರ್ಮಪುರಿ-ಬೆಂಗಳೂರು * ಮಾರಿಕುಪ್ಪಂ-ಬಂಗಾರಪೇಟೆ * ಕಾಚಿಗುಡ-ರಾಯಚೂರು * ರಾಯಚೂರು-ಗದ್ವಾಲ್ * ಕೋಲಾರ-ಬೆಂಗಳೂರು
ಇತರೆ ಬದಲಾವಣೆ-ಮಾರ್ಪಾಡುಗಳು: * ಹೌರಾ-ಯಶವಂತಪುರ ತುರಂತೊ ಎಕ್ಸ್‌ಪ್ರೆಸ್ - ವಾರದಲ್ಲಿ ನಾಲ್ಕರಿಂದ ಐದು ದಿನಕ್ಕೆ ವಿಸ್ತರಣೆ
ಕರ್ನಾಟಕಕ್ಕೆ ರೈಲು ಸವಲತ್ತುಗಳು: * ಕೋಲಾರ, ಕೇರಳದ ಅಳಪ್ಪುರ ಮತ್ತು ಬುನೈದಾಪುರದಲ್ಲಿ ವಾಗನ್ ಘಟಕ. * ಹುಬ್ಬಳ್ಳಿ, ಬೆಂಗಳೂರು, ಯಶವಂತಪುರಗಳಲ್ಲಿ ಯಾಂತ್ರೀಕೃತ ಲಾಂಡ್ರಿ ಘಟಕ ಸ್ಥಾಪನೆ ಪ್ರಸ್ತಾವನೆ. * ಚಿಂತಾಮಣಿ, ಹುಬ್ಬಳ್ಳಿ, ಕೋಲಾರ ರೈಲು ನಿಲ್ದಾಣಗಳ ಸುಧಾರಣೆ, ಮೇಲ್ದರ್ಜೆಗೆ. * ಬಂಗಾರಪೇಟೆ, ಅರಸೀಕೆರೆ, ಬೀರೂರುಗಳಲ್ಲಿ ಬಹು ಸೇವಾ ಸಂಕೀರ್ಣಗಳ ಜತೆ ಕಡಿಮೆ ದರದ ಹೊಟೇಲುಗಳ ನಿರ್ಮಾಣ. * ಆಧುನಿಕ ಟ್ರಾಲಿಗಳ ಜತೆಗೆ 'ರೈಲ್ ಯಾತ್ರಿ ಸೇವಕ್' ಯೋಜನೆ ಬೆಂಗಳೂರಿಗೂ ವಿಸ್ತರಣೆ. * ಚಲನೆಯಲ್ಲಿರುವ ರೈಲುಗಳ ಕುರಿತು ಮಾಹಿತಿ ಒದಗಿಸುವ ರೈಲು ನಿರ್ವಹಣಾ ವ್ಯವಸ್ಥೆ ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ವಿಸ್ತರಣೆ. * ಗಂಟೆಗೆ 160-200 ಕಿಲೋ ಮೀಟರ್ ವೇಗದಲ್ಲಿ ಚೆನ್ನೈ-ಬೆಂಗಳೂರು ನಡುವೆ ಪ್ರಯಾಣಿಕರ ರೈಲಿಗಾಗಿ ಹೊಸದಾದ ಗೋಲ್ಡನ್ ಕಾರಿಡಾರ್ ಮಾರ್ಗ ಸ್ಥಾಪನೆಗಾಗಿ ಅಧ್ಯಯನ. * ಕೌಶಲ್ಯಾಭಿವೃದ್ಧಿಗಾಗಿ ಮಾನವ ಸಂಪನ್ಮೂಲ ಸಚಿವಾಲಯದ ತಿಳುವಳಿಕೆ ಒಪ್ಪಂದದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಟೆಕ್ನಿಕ್ ಸ್ಥಾಪನೆ.
ಪ್ರಗತಿಯಲ್ಲಿರುವ ಕಾಮಗಾರಿಗಳು: * ಆನಂದಪುರಂ-ತಾಳಗುಪ್ಪ ನಡುವಿನ ಗೇಜ್ ಪರಿವರ್ತನೆ ಕಾರ್ಯ ಇದೇ ವರ್ಷ ಮುಕ್ತಾಯ. * ನೇತ್ರಾವತಿ-ಕಂಕನಾಡಿ (ಮಂಗಳೂರು), ಮೈಸೂರು-ನಾಗನಹಳ್ಳಿ, ದೇವನೂರು-ಬಲ್ಲಕೆರೆ (ಕಡೂರು), ಗುಂತಕಲ್-ರಾಯಚೂರು ನಡುವಿನ ಡಬ್ಲಿಂಗ್ ಕಾರ್ಯ ಇದೇ ವರ್ಷ ಪೂರ್ಣ. * ರಾಯಚೂರು-ಪಾಂಡುರಂಗ ಸ್ವಾಮಿ, ಕಣಿವೇಹಳ್ಳಿ-ಚಿಕ್ಕಮಗಳೂರು, ಹಿರಿಸಾವೆ-ಶ್ರವಣ ಬೆಳಗೊಳ, ಸಖರಾಯಪಟ್ಟಣ-ಕಣಿವೇಹಳ್ಳಿ ನಡುವಿನ ಹೊಸ ಮಾರ್ಗ ಸಂಪೂರ್ಣ. * ಕೋಲಾರ-ಚಿಂತಾಮಣಿ ನಡುವಿನ ಗೇಜ್ ಪರಿವರ್ತನೆ ಕಾರ್ಯ 2011-12ರಲ್ಲಿ ಪೂರ್ಣಗೊಳಿಸುವ ಗುರಿ. * ಗದಗ-ಹರಿಹರ, ತುಮಕೂರು-ದಾವಣಗೆರೆ, ಚಿಕ್ಕಬಳ್ಳಾಪುರ- ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಗದಗ-ಹಾವೇರಿ, ಗದಗ-ವಾಡಿ, ಶಿವಮೊಗ್ಗ-ಹರಿಹರ, ಆಲಮಟ್ಟಿ-ಯಾದಗಿರಿ, ಆಲಮಟ್ಟಿ-ಕೊಪ್ಪಳ, ಆನೇಕಲ್ ರಸ್ತೆ-ಬಿಡದಿ, ಯಾದಗಿರಿ- ಶಹಾಪುರ- ಶೋರಾಪುರ- ಮುದ್ದೇಬಿಹಾಳ- ಆಲಮಟ್ಟಿ, ನಾಂದೇಡ್-ಬೀದರ್ ನಡುವೆ ಹೊಸ ಮಾರ್ಗ ಅಥವಾ ಗೇಜ್ ಪರಿವರ್ತನೆ ಅಥವಾ ಡಬ್ಲಿಂಗ್ ಕುರಿತ ಸಮೀಕ್ಷೆಗಳು ಮುಗಿದಿವೆ ಅಥವಾ ಈ ವರ್ಷದೊಳಗೆ ಮುಗಿಸಲಾಗುತ್ತದೆ. * 2011-12ರಲ್ಲಿ ಬಲ್ಲಕೆರೆ-ಬಿರೂರು, ಮದ್ದೂರು-ಹಣಕೆರೆ, ಬೀರೂರು-ಅಜ್ಜಂಪುರ ನಡುವಿನ ಹಳಿ ದ್ವಿಗುಣ ಪ್ರಸ್ತಾವನೆ. * ಪ್ರವಾಸೋದ್ಯಮ ಸಚಿವಾಲಯದ ಸಹಕಾರದೊಂದಿಗಿನ ರೈಲು ಪ್ರವಾಸೋದ್ಯಮವು ಈ ವರ್ಷ ಯಶಸ್ವಿಯಾದರೆ, ಮುಂದುವರಿಸಲಾಗುತ್ತದೆ. ಅದಕ್ಕಾಗಿ ಹೊಸಪೇಟೆ, ಬೇಲೂರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ಶೇ.50ರ ಪಾಲನ್ನು ಪ್ರವಾಸೋದ್ಯಮ ಸಚಿವಾಲಯ ನೀಡಲಿದೆ.
ರೈಲ್ವೆ ಸಚಿವಾಲಯದ ಮುಂದಿರುವ ಪ್ರಸ್ತಾವನೆಗಳು: * ಬೀರೂರು-ಶಿವಮೊಗ್ಗ, ಹುಬ್ಬಳ್ಳಿ-ಬೆಂಗಳೂರು ನಡುವೆ ಡಬ್ಲಿಂಗ್ ಸಮೀಕ್ಷೆ. * ದ್ರೋಣಾಚಲಂ-ಬಳ್ಳಾರಿ, ತುಮಕೂರು-ಚಾಮರಾಜನಗರ, ಕೊಲ್ಲಾಪುರ-ಧಾರವಾಡ, ತಲಚ್ಚೇರಿ-ಮೈಸೂರು, ಕೊಪ್ಪಳ-ಸಿಂಗನೂರು, ನಂಜನಗೂಡು-ನೀಲಾಂಬೂರ್ ರೋಡ್, ನಿಪ್ಪಾಣಿ ಮೂಲಕ ಕಾರಾಡ್-ಬೆಳಗಾವಿ ನಡುವೆ ಹೊಸ ರೈಲು ಮಾರ್ಗಗಳ ಸಮೀಕ್ಷೆ. * ತೋರಣಗಲ್ಲು-ರಣಜಿತ್‌ಪುರ, ಶಿವಾನಿ-ಹೊಸದುರ್ಗ ರಸ್ತೆ ನಡುವೆ ಡಬ್ಲಿಂಗ್. * ತುಮಕೂರು-ದಾವಣಗೆರೆ, ವೈಟ್‌ಫೀಲ್ಡ್-ಕೋಲಾರ, ಶಿವಮೊಗ್ಗ-ಹರಿಹರ ಹೊಸ ರೈಲು. * ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ಆರು ದಿನ ಇದ್ದದ್ದು ಪ್ರತಿದಿನ - ಪ್ರಸ್ತಾವನೆ * ಮುಂಬೈ ಸಿಎಸ್‌ಟಿ-ಮಂಗಳೂರು ಎಕ್ಸ್‌ಪ್ರೆಸ್ ಮೂರು ದಿನ ಇದ್ದದ್ದು ಪ್ರತಿದಿನ- ಪ್ರಸ್ತಾವನೆ