ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿ ಇಂದೂ ರಾಜೀನಾಮೆ ಇಲ್ಲ
NRB
ಸಹ ಪಕ್ಷ ಭಾರತೀಯ ಜನತಾ ಪಕ್ಷ ಹಾಕಿದ ಅಂತಿಮ ಗಡುವಿನಿಂದ ಕುಪಿತರಾಗಿರುವ ಕುಮಾರಸ್ವಾಮಿ ಇಂದೂ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ.

ಇದು ಅಲ್ಲದೇ ಜೆಡಿಎಸ್ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ತನಗೂ ಮತ್ತು ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದ್ದು, ಇಪ್ಪತ್ತು ತಿಂಗಳ ಹಿಂದೆ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಒಪ್ಪಂದವಾಗಿದೆ ವಿನಃ ಜೆಡಿಎಸ್‌ನೊಂದಿಗೆ ಅಲ್ಲ ಎಂದು ಹೇಳಿರುವುದರಿಂದ ಅಧಿಕಾರ ಹಸ್ತಾಂತರ ಸುಲಭವಾಗಿ ಪರಿಹಾರಗೊಳ್ಳುವಂತಿಲ್ಲ ಎಂಬ ಊಹೆ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಕೂಡ ಒಪ್ಪಂದ ನಾನು ಮತ್ತು ಕೆಲ ಬಿಜೆಪಿ ನಾಯಕರ ನಡುವೆ ಆಗಿದೆ. ಅಧಿಕಾರ ಹಸ್ತಾಂತರದ ಒಪ್ಪಂದದಲ್ಲಿ ಪಕ್ಷಗಳ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವುದು ಮತ್ತಷ್ಟು ಶಂಕೆಗೆ ಕಾರಣವಾಗಿದ್ದು, ಇಂತಹ ವಿಚಾರಗಳಲ್ಲಿ ಸಂಯಮದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ವಿನಃ ಅವಸರದಲ್ಲಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಅಕ್ಟೋಬರ್ ಐದರಂದು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ದೆಹಲಿಯಲ್ಲಿ ಸಭೆ ಸೇರಲಿದ್ದು, ಅಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ರಾಜಕೀಯ ಸಮಿತಿಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೆಗೌಡ ಹೇಳಿದ್ದಾರೆ.

ಇದೇ ಸಮಯದಲ್ಲಿ ಬಿಜೆಪಿ ಕೂಡ ನೀಡಿರುವ ಅಕ್ಟೋಬರ್ 3 ರ ಅಂತಿಮ ದಿನಕ್ಕೆ ಬದ್ದವಾಗಿದ್ದು, ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿ, ಬಿಜೆಪಿಗೆ ಬೆಂಬಲ ನೀಡುವ ಪತ್ರವನ್ನು ಗವರ್ನರ್ ಅವರಿಗೆ ಸಲ್ಲಿಸಬೇಕು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಡಿ. ವಿ. ಸದಾನಂದಗೌಡ ಹೇಳಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮಿರಾಜುದ್ದಿನ್ ಪಟೇಲ್ ಅವರು ಪಕ್ಷಕ್ಕೂ ಅಧಿಕಾರ ಹಸ್ತಾಂತರದ ಒಪ್ಪಂದಕ್ಕೂ ಯಾವುದೇ ಸಂಬಂಧವಿಲ್ಲ. ಒಪ್ಪಂದ ಕುಮಾರಸ್ವಾಮಿ ಮತ್ತು ಬಿಜೆಪಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ಪಕ್ಷಗಳು ತಮ್ಮ ಶಾಸಕಾಂಗ ಸದಸ್ಯರ ಸಭೆ ಕರೆದಿದ್ದು, ಕ್ಷೀಪ್ರ ವೇಗದಲ್ಲಿ ಸಾಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಶಾಸಕರ ಅಭಿಪ್ರಾಯ ಪಡೆಯುವ ನಿರೀಕ್ಷೆ ಇದೆ. ಆದರೆ ಬಹುತೇಕ ಜೆಡಿ ಎಸ್ ಶಾಸಕರು ಅಧಿಕಾರ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು
ಜೆಡಿಎಸ್‌ಗೆ ಕಾಂಗ್ರೆಸ್ ಬಾಹ್ಯ ಬೆಂಬಲ?
ಬೆಂಗಳೂರಿನ ಯೋಧನ ಆತ್ಮಹತ್ಯೆ
ಕರುಣಾನಿಧಿ ವಿರುದ್ಧ ರಾಜ್ಯದಲ್ಲೂ ಕೇಸು ದಾಖಲು
ಬಳ್ಳಾರಿ ನೆಪ: ಬಿಗಡಾಯಿಸಿದ ಪರಿಸ್ಥಿತಿ
ಅಧಿಕಾರ ಹಸ್ತಾಂತರ ಅವಾಂತರ
ಕರ್ನಾಟಕದಲ್ಲಿ ಜೆಡಿಎಸ್ ಅಧಿಪತ್ಯ