ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರ್ನಾಟಕದಲ್ಲಿ ಜೆಡಿಎಸ್ ಅಧಿಪತ್ಯ
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು ಜೆಡಿಎಸ್ ಅಚ್ಚರಿಯೆಂಬಂತೆ ಫಲಿತಾಂಶ ದಾಖಲಿಸಿದ್ದು ಬಹುತೇಕ ಕಡೆ ತನ್ನ ಅಧಿ ಪತ್ಯ ಸಾಧಿಸಿದೆ.
.
ಆದರೆ ಕಾಂಗ್ರೆಸ್‌ಗೆ ಬಹುತೇಕ ಕಡೆ ನಿರಾಶಾದಾಯಕ ಪ್ರತಿಕ್ರಿಯೆ ಸಿಕ್ಕಿದೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರ ಗುರುಮಿಠಕಲ್, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪ್ರತಿನಿಧಿಸುತ್ತಿದ್ದ ಜೇವರ್ಗಿ, ಮೈಸೂರಿನಲ್ಲಿ ಸಿದ್ಧರಾಮಯ್ಯ ಕಾರ್ಯಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಬಳ್ಳಾರಿಯಲ್ಲಿ ಜೆಡಿಎಸ್ ನ್ನು ಬಿಜೆಪಿ ಸದೆಬಡಿದಿದೆ.

ಈ ನಡುವೆ ಮಂಗಳೂರು ಪಾಲಿಕೆಯಲ್ಲಿ ಪ್ರಪ್ರಥಮವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಕರಾವಳಿಯ ಬಹುತೇಕ ಕಡೆ ಬಿಜೆಪಿ ತನ್ನ ಪಾರುಪತ್ಯ ಮೆರೆದಿದೆ. ಚುನಾವಣೆ ನಡೆದ 4992 ವಾಡ್ ರ್ಗಳ ಪೈಕಿಶೇ 98 ಫಲಿತಾಂಶ ಲಭ್ಯವಾಗಿದ್ದು ಜೆಇಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟವನ್ನು ಜನ ಬೆಂಬಲಿಸಿದ್ದಾರೆ.

ಬೆಳಗಾವಿಯಲ್ಲಿ ಎಂ.ಇ.ಎಸ್ ಧುರೀಣರಿಗೆ ಭಾರೀ ಮುಖಭಂಗ ಉಂಟಾಗಿದೆ. ಹುಬ್ಬಳ್ಳಿ -ಧಾರವಾಡದಲ್ಲೂ ಬಿಜೆಪಿ ತನ್ನ ಮೇಲುಗೈ ಸಾಧಿಸಿದೆ. ಚುನಾವಣೆ ನಡೆದ ಆರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ 3 ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ.
ಮತ್ತಷ್ಟು
ಜೆಡಿಎಸ್ ರಾಗ ಬದಲು
ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ?
ವಿದ್ಯುತ್ ಬೇಡಿಕೆ ಪೂರೈಕೆಗೆ ಹೊಸ ಯೋಜನೆ
ಜಯ್ನಾ ಕೊಠಾರಿಗೆ ಪಾವಟೆ ಫೆಲೋಶಿಪ್
ವಾರ್ತಾ ಸೌಧ ಉದ್ಘಾಟನೆ
ಅಧಿಕಾರದಲ್ಲಿರುವುದರಿಂದಲೇ ಜೆಡಿಎಸ್‌ಗೆ ಹೆಚ್ಚು ಸ್ಥಾನ: ಖರ್ಗೆ