ಪಕ್ಷಪಾತ ಮಾಡಿಲ್ಲ: ಕುಮಾರಸ್ವಾಮಿ
|
|
|
ಬೆಂಗಳೂರು, ಶನಿವಾರ, 15 ಡಿಸೆಂಬರ್ 2007( 12:49 IST )
|
|
|
|
|
|
|
|
ಗಣಿಗಾರಿಕೆಗೆ ಸಂಬಂಧಿಸಿ ಎಲ್ಲಾ ಪಕ್ಷದವರಿಗೂ ಅನುಮತಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇವಲ ಜೆಡಿಎಸ್ ಮುಖಂಡರಿಗೆ ಮಾತ್ರ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆರೋಪಕ್ಕೆ ಉತ್ತರಿಸುತ್ತಾ ಕುಮಾರಸ್ವಾಮಿ ಹೀಗೆ ಸ್ಪಷ್ಟೀಕರಣ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಗಣಿ ಇಲಾಖೆ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ಸಮಿತಿ ವರದಿ ಆಧಾರದ ಮೇಲೆ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಯಾವುದೇ ಪಕ್ಷಪಾತ ನಡೆಸಿಲ್ಲ ಎಂದು ತಿಳಿಸಿದರು.
ತಮ್ಮ 20 ತಿಂಗಳ ಅಧಿಕಾರಾವಧಿಯಲ್ಲಿ ಕಾನೂನುಬಾಹಿರವಾಗಿ ಯಾವುದೇ ನಿರ್ಧಾರಗಳನ್ನು ಕೈಗೊಂಡಿದ್ದರೆ ಈ ಬಗೆಗಿನ ಯಾವುದೇ ತನಿಖೆಗೆ ಸಿದ್ಧ ಎಂದ ಕುಮಾರಸ್ವಾಮಿಯವರು, ತಾವು ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿರುವುದರಿಂದ ಹಾಗೂ ತಲೆ ತಗ್ಗಿಸುವಂತಹ ಕೆಲಸವನ್ನೇನೂ ಮಾಡಿಲ್ಲವಾದ್ದರಿಂದ ಜನರ ಬಳಿಗೆ ಹೋಗಲು ಯಾವುದೇ ಅಂಜಿಕೆ ಇಲ್ಲ ಎಂದು ತಿಳಿಸಿದರು.
|
|
|
|