| ಬಳ್ಳಾರಿ ಗಣಿಧಣಿಗಳಿಗೆ ಆಂಧ್ರ ಸಿಎಂ ಕುಮ್ಮಕ್ಕು? | | | ಬೆಂಗಳೂರು, ಬುಧವಾರ, 3 ಜೂನ್ 2009( 16:00 IST ) | | | |
| | |
| ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು ಎಂಬ ಬಿಜೆಪಿ ನಾಯಕರ ಹೇಳಿಕೆ ಇದೀಗ ಹುಸಿಯಾಗತೊಡಗಿದ್ದು, ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಏಕಾಏಕಿ ಬಹಿರಂಗವಾಗತೊಡಗಿದೆ. ಆದರೆ ಪಕ್ಷದೊಳಗಿನ ಈ ಬಂಡಾಯದ ಹಿಂದೆ ಆಂಧ್ರದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಮತ್ತು ಪುತ್ರ ಜಗಮೋಹನ್ ರೆಡ್ಡಿ ಅವರ ಕೈವಾಡ ಇದೆ ಎಂಬ ಗಾಳಿಸುದ್ದಿ ರಾಜ್ಯರಾಜಕಾರಣದ ವಲಯದಲ್ಲಿ ಹರಿದಾಡುತ್ತಿದೆ.ರಾಷ್ಟ್ರರಾಜಕಾರಣದಲ್ಲಿ ಎನ್‌ಡಿಎ ಅಧಿಕಾರದ ಗದ್ದುಗೆಗೆ ಏರುತ್ತದೆ, ಅದರಿಂದ ತಮ್ಮ ಗಣಿ ವ್ಯವಹಾರ, ಅಕ್ರಮಗಳಿಗೆ ಯಾವುದೇ ಧಕ್ಕೆ ಇಲ್ಲ ಎಂಬ ರೆಡ್ಡಿ ಸಹೋದರರ ಲೆಕ್ಕಚಾರ ತಲೆಕಳೆಗಾಗಿರುವ ಹಿನ್ನೆಲೆಯಲ್ಲಿ ಇದೀಗ ರೆಡ್ಡಿ ಸಹೋದರರು ಆಂಧ್ರದ ಸಿಎಂ ರೆಡ್ಡಿಯತ್ತ ರಹಸ್ಯ ಒಪ್ಪಂದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.ಅಲ್ಲದೇ ಗಡಿವಿವಾದ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜಂಟಿ ಸಮೀಕ್ಷೆ ಹಸಿರು ನಿಶಾನೆ ತೋರಿಸಿರುವುದರಿಂದ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆಲೋಚಿಸಿರುವ ಗಣಿಧಣಿಗಳು ನೇರವಾಗಿ ಕೈಜೋಡಿಸಿರುವುದು ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿಯ ಜೊತೆಗೆ. ಆಂಧ್ರ ಮುಖ್ಯಮಂತ್ರಿ ಪುತ್ರ, ಕಾಂಗ್ರೆಸ್ ಪಕ್ಷದ ಕಡಪ ಕ್ಷೇತ್ರದ ಸಂಸದ ಜಗಮೋಹನ್ ರೆಡ್ಡಿ ಕೂಡ ಬಳ್ಳಾರಿ ಗಣಿ ವ್ಯವಹಾರದ ಪಾಲುದಾರನಾಗಿರುವುದರಿಂದ ಬಳ್ಳಾರಿ ರೆಡ್ಡಿಗಳ ಚಿತ್ತ ಆಂಧ್ರದತ್ತ 'ಕೈ' ಚಾಚುವಂತೆ ಮಾಡಿದೆ. ಅಲ್ಲದೇ ಆಂಧ್ರ ರೆಡ್ಡಿಗಳ ಮಾರ್ಗಸೂಚಿಯಂತೆ ಬಳ್ಳಾರಿ ರೆಡ್ಡಿಗಳು ರಾಜ್ಯರಾಜಕಾರಣದಲ್ಲಿ ಯಾವ ರೀತಿಯಲ್ಲಿ ಮುಂದುವರಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.ಇತ್ತೀಚೆಗಷ್ಟೇ ಶಾಸಕ ರೇಣುಕಾಚಾರ್ಯ ಕೂಡ ತಮ್ಮ ಅಸಮಾಧಾನವನ್ನು ಸುದ್ದಿಗೋಷ್ಠಿಯಲ್ಲಿ ತೋಡಿಕೊಂಡಿದ್ದರು. ಪಕ್ಷದಲ್ಲಿದ್ದ ಹಿರಿಯರನ್ನು ಕಡೆಗಣಿಸಿ, ವಲಸಿಗರಿಗೆ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ತಮ್ಮ ಬೆಂಬಲಿಗ ಶಾಸಕರೊಂದಿಗೆ ರಹಸ್ಯವಾಗಿ ಸಭೆಯನ್ನೂ ನಡೆಸಿದ್ದರು. ಬಿಜೆಪಿಯಿಂದ ಬಂಡಾಯವೆದ್ದ ಬಸವನಗೌಡ ಯತ್ನಾಳ್ ಕೂಡ ಶೀಘ್ರದಲ್ಲೇ ರಾಜ್ಯರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂಬ ಭವಿಷ್ಯ ನುಡಿದಿದ್ದರು.ಯತ್ನಾಳ್ ಅವರು ಈ ಹಿಂದೆ ಕೆಲವು ಹೇಳಿಕೆ ನೀಡಿದಾಗ ಗಂಭೀರವಾಗಿ ಪರಿಗಣಿಸದ ಬಿಜೆಪಿ ಈ ಬಾರಿ ಮಾತ್ರ ಕಟ್ಟಾ, ಅಶೋಕ್ ಸೇರಿದಂತೆ ಗಣ್ಯರು ಸೇರಿ ಸುದ್ದಿಗೋಷ್ಠಿಯನ್ನು ನಡೆಸಿ, ಯತ್ನಾಳ್ ಹೇಳಿಕೆಗೆ ಮನ್ನಣೆ ನೀಡಬೇಕಾಗಿಲ್ಲ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ತಿಳಿಸಿದ್ದರು.ಈ ಎಲ್ಲಾ ರಾಜಕೀಯ ಡೋಲಾಯಮಾನ ಬೆಳವಣಿಗೆಯ ನಡುವೆಯೇ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮುಖ್ಯಮಂತ್ರಿ ವಿರುದ್ಧವೇ ಅಪಸ್ವರ ಎತ್ತುವ ಮೂಲಕ ಪಕ್ಷದೊಳಗಿನ ಭಿನ್ನಮತ ಭುಗಿಲೇಳತೊಡಗಿದೆ. |
| |
| | |
| | | |
|
| | |
|
|
| | |
|
|
| |
|  | |