| ಸಾಂತ್ವನ ಹೇಳ್ಲಿಕ್ಕೂ ಬಿಬಿಎಂಪಿಗೆ ಏನು ತೊಂದ್ರೆ: ಲೋಕಾಯುಕ್ತ | | | ಬೆಂಗಳೂರು, ಶುಕ್ರವಾರ, 5 ಜೂನ್ 2009( 16:08 IST ) | | | |
| | |
| ' ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಅಭಿಷೇಕ್‌ನನ್ನು ಕಳೆದುಕೊಂಡ ಕುಟುಂಬಕ್ಕೆ ಮಾನವೀಯತೆಯಿಂದ ಎರಡು ಸಾಂತ್ವನದ ಮಾತು ಹೇಳುವುದಕ್ಕೆ ಏನು ತೊಂದರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.ಭಾನುವಾರ ರಾತ್ರಿ ಬಂದ ಭಾರೀ ಮಳೆಯಿಂದಾಗಿ ಲಿಂಗರಾಜಪುರದ ಮೋರಿ ನೀರಿನಲ್ಲಿ ಕೊಚ್ಚಿ ಹೋದ ಅಭಿಷೇಕ್ ಮನೆಗೆ ಗುರುವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.ದೊಡ್ಡ ಸ್ಥಾನದಲ್ಲಿ ಕುಳಿತಿದ್ದೇವೆ ಎಂದು ಮಾನವೀಯತೆ ಮರೆಯುವುದು ತಪ್ಪು, ಮಾತನಾಡುವುದು ಸರಿ ಇಲ್ಲ ಎಂದ ಮೇಲೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದಕ್ಕೆ ಏನು ಕಷ್ಟ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಾನು ಲೋಕಾಯುಕ್ತನಾಗಿ ಇಲ್ಲಿಗೆ ಬಂದಿಲ್ಲ, ಸಾಮಾನ್ಯ ಪ್ರಜೆಯಾಗಿ ಸಾಂತ್ವನ ಹೇಳಲು ಬಂದಿದ್ದೇನೆ ಎಂದ ಹೆಗ್ಡೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದ ಮೇಲೆ ಬಿಬಿಎಂಪಿ ಎಂದು ಯಾಕೆ ಮಾಡಬೇಕು?ಎಂದು ಖಾರವಾಗಿ ಪ್ರಶ್ನಿಸಿದರು. |
| |
| | |
| | | |
|
| | |
|
|
| | |
|
|
| |
|  | |