| ಜೇಟ್ಲಿ ಅಗತ್ಯವಿಲ್ಲ;ನಾನೇ ಬಗೆಹರಿಸುವೆ: ಯಡಿಯೂರಪ್ಪ | | | ಬೆಂಗಳೂರು, ಸೋಮವಾರ, 8 ಜೂನ್ 2009( 12:03 IST ) | | | |
| | |
| ಆಡಳಿತಾರೂಢ ಬಿಜೆಪಿಯಲ್ಲಿ ಆರಂಭಗೊಂಡಿರುವ ಭಿನ್ನಮತ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅತೃಪ್ತರ ನಡುವಿನ ಮುಸುಕಿನ ಗುದ್ದಾಟಕ್ಕೆ ಸಂಬಂಧಿಸಿದಂತೆ ಇದೀಗ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಗಳು ದಟ್ಟವಾಗಿದೆ.ದೆಹಲಿಯಿಂದ ಹಿರಿಯ ನಾಯಕರು ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನ ಮಾಡಲು ಆಗಮಿಸಬೇಕಾದ ಅಗತ್ಯವಿಲ್ಲ. ಖುದ್ದಾಗಿ ನಾನೇ ನಿಂತು ಬಗೆಹರಿಸಿಕೊಳ್ಳುವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ನಗರಕ್ಕೆ ಇನ್ನೆರಡು ದಿನಗಳಲ್ಲಿ ಆಗಮಿಸಬೇಕಾದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಕಾರ್ಯಕ್ರಮ ಬಹುತೇಕ ರದ್ದಾಗಿದೆ. ರೆಡ್ಡಿ ಸಹೋದರರ ಜೊತೆಯಲ್ಲಿ ನೇರ ಮಾತುಕತೆ ನಡೆಸಲು ಮುಖ್ಯಮಂತ್ರಿ ಯೋಜಿಸಿದ್ದು, ಮಾತುಕತೆಗೆ ಬಳ್ಳಾರಿ ಗಣಿ ಧಣಿಗಳಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಅವರುಗಳನ್ನು ಆಹ್ವಾನಿಸಿದ್ದಾರೆ.ಇದೇ ವೇಳೆ ಈ ಕ್ರಮವನ್ನು ವಿರೋಧಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರದ ವರಿಷ್ಠರು ನೀಡಿರುವ ವಾಗ್ದಾನದಂತೆ ರಾಜ್ಯಕ್ಕೆ ಅರುಣ್ ಜೇಟ್ಲಿ ಬರಲೇ ಬೇಕು. ವರಿಷ್ಠರ ಮುಂದೆ ಹೇಳಬೇಕಾದ್ದು ಬಹಳಷ್ಟಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಇದರಿಂದ ಹಾನಿಯುಂಟಾಗಬಹುದು ಎಂದು ಭಿನ್ನರಾಗ ಹಾಡತೊಡಗಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |