ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿಧಣಿಗಳ ನಡುವಿನ ಜಟಾಪಟಿ ಶಮನಗೊಳ್ಳದ ಪರಿಣಾಮ ಅದಕ್ಕೆ ಪೂರಕ ಎಂಬಂತೆ ಅಧಿಕಾರಿಗಳ ಮೊಬೈಲ್‌ಗಳಲ್ಲಿ 'ಗುಡ್ ನ್ಯೂಸ್ ಬಿ ಹ್ಯಾಪಿ, ಜೆಡಿಎಸ್-ಬಿಜೆಪಿ ಫಾರಮ್ ದಿ ಗವರ್ನ್‌ಮೆಂಟ್' ಎಂಬ ಸಂದೇಶ ಹರಿದಾಡತೊಡಗಿದೆ.
ಇಂಥದ್ದೊಂದು ಸಂದೇಶ ಪ್ರಮುಖ ಜಾತಿಗೆ ಸೇರಿದ ಐಎಎಸ್ ಮತ್ತು ಕೆಎಎಸ್ ವಲಯದ ಅಧಿಕಾರಿಗಳ ಮೊಬೈಲ್‌ನಲ್ಲಿ ರಿಂಗಣಿಸುತ್ತಿದೆ.
ಇಂತಹ ಸಂದೇಶವೇ ಆಯಕಟ್ಟಿನ ಸ್ಥಳವಿಲ್ಲದೆ ಒದ್ದಾಡಿ ಸೊರಗುತ್ತಿರುವ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಪುಳಕಿತಗೊಳಿಸಿದೆ. ಬಿಜೆಪಿ ಜತೆ ಜೆಡಿಎಸ್ ಒಂದಾಗಿ ಸರ್ಕಾರ ರಚಿಸಲಿದೆ ಎಂಬ ಈ ಸಂದೇಶ ಅಧಿಕಾರಿಗಳ ವಲಯದಲ್ಲಿ ಹೊಸದೊಂದು ಆಶಾಭಾವ ಹುಟ್ಟಿಸಿದೆ.
ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಂದಲ್ಲಿ ಆಯಕಟ್ಟಿನ ಸ್ಥಳದಲ್ಲಿ ನೇಮಕವಾಗಬಹುದು ಎಂಬ ಆಸೆಯನ್ನು ಈ ಸಂದೇಶ ಹುಟ್ಟು ಹಾಕಿದೆಯಂತೆ!