'ಭಾರತೀಯ ಜನತಾಪಕ್ಷ ಚುನಾವಣಾ ಅಕ್ರಮಗಳ ಜನಕ' ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಸಂಸದ ಎಚ್.ವಿಶ್ವನಾಥ್ ಗಂಭೀರವಾಗಿ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಮೇಲ್ಮನೆಗೆ ಪ್ರಬುದ್ಧ ಜನಪ್ರತಿನಿಧಿಗಳನ್ನು ಕಳುಹಿಸಬೇಕಾಗಿದ್ದ ಈ ಚುನಾವಣೆಯಲ್ಲಿ ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ವ್ಯಯಿಸಲಾಗಿದೆ. ಆಪರೇಶನ್ ಕಮಲದಂತಹ ಹೇಯಕೃತ್ಯಕ್ಕೆ ಇಳಿದ ಬಿಜೆಪಿಯೇ ಈ ಚುನಾವಣಾ ಅಕ್ರಮಗಳ ತಂದೆ-ತಾಯಿ ಎಂದು ಹೇಳಿದರು.
ಆದರೆ ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಮಾನ ಸ್ಥಾನದಲ್ಲಿ ನಿಲ್ಲುತ್ತವೆ. ಚುನಾವಣಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಲು ಎಲ್ಲಾ ಪಕ್ಷಗಳ ಪಾಲು ಇದೆ. ಅದರಲ್ಲಿ ಬಿಜೆಪಿ ಮಾತ್ರ ಅಕ್ರಮಗಳ ಜನಕ ಎಂದರು ಬಣ್ಣಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲು ನೀಡುತ್ತಿರುವ ಬಿ ಫಾರಂಗೂ ಕೂಡ ಹಣ ತೆಗೆದುಕೊಂಡು ಹಂಚಲಾಗಿದೆ. ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.