ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಷ್ಟವಿಲ್ಲದವರು ಪಕ್ಷ ಬಿಡಲಿ: ವೆಂಕಯ್ಯನಾಯ್ಡು ತಿರುಗೇಟು (Venkaiyya Naidu | BJP | Renukacharya | Yeddyurappa)
Bookmark and Share Feedback Print
 
NRB
ಪಕ್ಷದಲ್ಲಿ ಶಿಸ್ತು ಮುಖ್ಯ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪಕ್ಷಕ್ಕೆ ಮುಜುಗರ ಉಂಟು ಮಾಡುವವರು ತಮ್ಮ ಹಾದಿಯನ್ನು ನೋಡಿಕೊಳ್ಳಬಹುದು ಎಂದು ಪಕ್ಷದೊಳಗೆ ಅಪಸ್ವರ ಎತ್ತುತ್ತಿರುವ ಶಾಸಕರಿಗೆ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯನಾಯ್ಡು ಅವರು ಎಚ್ಚರಿಕೆ ನೀಡಿದ್ದಾರೆ.

ಪಕ್ಷದಲ್ಲಿದ್ದುಕೊಂಡು ಲಕ್ಷ್ಮಣರೇಖೆ ದಾಟಬಾರದು. ವೈಯಕ್ತಿಕ ಸಮಸ್ಯೆಗಳಿದ್ದಲ್ಲಿ ತನ್ನ ಹಾದಿಯನ್ನು ನೋಡಿಕೊಳ್ಳಬಹುದು ಎಂದು ಹೇಳಿದರು. ಪಕ್ಷದಲ್ಲಿ ತಲೆದೋರಿದ್ದ ಬಂಡಾಯವನ್ನು ಶಮನಗೊಳಿಸಲಾಗಿದೆ. ಎಲ್ಲರಿಗೂ ಹೊಂದಾಣಿಕೆಯಾಗುವಂತೆ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ. ಹಾಗಿದ್ದೂ ಆಗಾಗ್ಗೆ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ ಎಂದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಗರದಲ್ಲಿ ಶುಕ್ರವಾರ ಮತಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಆರಂಭವಾಗಿರುವ ಭಿನ್ನಮತೀಯ ಚಟುವಟಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ