ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಬಿಜೆಪಿ ಪಕ್ಷ ಚಿನ್ನದ ಉಂಗುರ ಎಂದು ನಂಬಿಸಿ ನಕಲಿ ಉಂಗುರ ನೀಡಿರುವ ಘಟನೆ ರಾಯಚೂರು ಕ್ಷೇತ್ರದಲ್ಲಿ ನಡೆದಿದೆ.
ವಿಧಾನಪರಿಷತ್ ಆಭ್ಯರ್ಥಿ ಪರ ಉಂಗುರ ವಿತರಿಸಿದ ಪಕ್ಷದ ಮುಖಂಡರೊಬ್ಬರು ಅಸಲಿ ಬಂಗಾರದ ಬದಲು ನಕಲಿ ಉಂಗುರ ನೀಡಿರುವುದು ಬೆಳಕಿಗೆ ಬಂದಿದೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಈ ಪ್ರದೇಶದಲ್ಲಿ ಚಿರಪರಿಚಿತರಾದ ಪಕ್ಷದ ಮುಖಂಡರೊಬ್ಬರಿಗೆ ಚಿನ್ನ(ನಕಲಿ)ದ ಉಂಗುರ ಹಂಚುವ ಹೊಣೆಯನ್ನು ನೀಡಲಾಗಿತ್ತು. ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಾಲಪ್ಪ ಆಚಾರ್ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ಮುಂದೆ ತಮಗೆ ಅಡ್ಡಗಾಲು ಆಗುವ ಸಾಧ್ಯತೆ ಹೆಚ್ಚು ಎಂದು ಅರಿತ ಆ ಮುಖಂಡರು ಕೊನೆಗಳಿಗೆಯಲ್ಲಿ ಇಂಥ ಕೆಲಸಕ್ಕೆ ಮುಂದಾಗಿರುವುದಾಗಿ ಪಕ್ಷದ ವಲಯದಲ್ಲಿಯೇ ದೂರು ಕೇಳಿ ಬರತೊಡಗಿದೆ.
ಇದೀಗ ಬಿಜೆಪಿಯವರು ಉಂಗುರ ವಾಪಸ್ ಮಾಡಿ ಬದಲಿಗೆ ದುಡ್ಡು ತಗೊಳ್ಳಿ ಅಂತ ಮತದಾರರಿಗೆ ಮತ್ತೊಂದು ಆಮೀಷವೊಡ್ಡಿದೆ ವಿಷಯವೂ ಬಯಲಾಗಿದೆ!