ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಟಿಗೆ ಕಪಾಳಮೋಕ್ಷ: ನಿರ್ದೇಶಕನಿಗೆ ನಿಷೇಧ
ಸುದ್ದಿ/ಗಾಸಿಪ್
Feedback Print Bookmark and Share
 
WD
ಶೂಟಿಂಗ್ ವೇಳೆ ನಟಿಯೊಬ್ಬಳ ಕಪಾಳಮೋಕ್ಷ ಮಾಡಿದಲ್ಲಿ, ಆಕೆಯಿಂದ ಅತ್ಯುತ್ತಮ ನಟನೆ ನಿರೀಕ್ಷಿಸಬಹುದು ಎಂಬ ಚಿತ್ರ ನಿರ್ದೇಶಕರೊಬ್ಬರ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.

ಈ ಘಟನೆ ನಡೆದದ್ದು ಮಿರುಗಂ (ಮೃಗಂ) ಚಿತ್ರದ ಚಿತ್ರೀಕರಣದ ಸಂದರ್ಭ ಎನ್ನುವುದು ಮಾತ್ರ ಕಾಕತಾಳೀಯ.

ನವನಟಿ ಪದ್ಮಪ್ರಿಯಾ ಎಂಬಾಕೆಗೆ ಹೊಡೆದಿದ್ದಕ್ಕಾಗಿ ಚಿತ್ರ ನಿರ್ದೇಶಕ ಸಾಮಿ ಎಂಬವರು ಒಂದು ವರ್ಷ ಕಾಲ ಯಾವುದೇ ಚಿತ್ರ ನಿರ್ದೇಶಿಸುವುದನ್ನು ತಮಿಳು ಚಿತ್ರೋದ್ಯಮ ನಿಷೇಧಿಸಿದೆ.

ಚಿತ್ರೋದ್ಯಮ ನೌಕರರ ಫೆಡರೇಶನ್, ತಮಿಳು ಚಿತ್ರ ನಿರ್ಮಾಪಕರ ಮಂಡಳಿ ಮತ್ತು ದಕ್ಷಿಣ ಭಾರತ ಕಲಾವಿದ ಒಕ್ಕೂಟ ಸೋಮವಾರ ರಾತ್ರಿ ನಡೆಸಿದ ಸಭೆಯಲ್ಲಿ ಸಾಮಿಗೆ ನಿಷೇಧ ವಿಧಿಸುವ ನಿರ್ಣಯ ಅಂಗೀಕರಿಸಿತು.

ಪದ್ಮ ಪ್ರಿಯಾಳ ಇತ್ತೀಚಿನ ಚಿತ್ರ "ಸದ್ದಂ ಪೋಡಾದೆ" (ಸದ್ದು ಮಾಡಬಾರದು) ಹಿಟ್ ಆಗಿತ್ತು.

ಸಿನಿಮೀಯ ಕಾರಣಗಳಿಗಾಗಿ ತಾನು ಆಕೆಗೆ ಹೊಡೆದೆ ಎಂಬ ಸಾಮಿಯ ಸಮರ್ಥನೆಯು ಹಾಜರಿದ್ದ ಯಾರ ಗಮನವನ್ನೂ ಸೆಳೆಯಲಿಲ್ಲ.

ನಟಿಗೆ ಹೊಡೆದಿರುವುದನ್ನು ಒಪ್ಪಿಕೊಂಡಿರುವ ಸಾಮಿ, ಆದರೆ ಈ ಕಲಾವಿದೆ ಬಗ್ಗೆ ತನಗೆ ಯಾವುದೇ ಕೆಟ್ಟ ಅಭಿಪ್ರಾಯ ಇಲ್ಲ ಅಥವಾ ದುರುದ್ದೇಶ ಇರಲಿಲ್ಲ ಎಂದಿದ್ದಾರಲ್ಲದೆ, ಆಕೆಯಿಂದ ಉತ್ತಮ ನಟನೆಯನ್ನು ಹೊರಹೊಮ್ಮಿಸಲು ಈ ರೀತಿ ಮಾಡಿರುವುದಾಗಿ ಹೇಳಿದರು.

ಜಂಟಿ ಸಭೆಯಲ್ಲಿ ಸಾಮಿಯು ನಟಿಯ ಬಳಿ ಬಹಿರಂಗ ಕ್ಷಮೆ ಯಾಚಿಸಿದ್ದರೂ, ಒಕ್ಕೂಟಗಳು ಅದಕ್ಕೆ ಸೊಪ್ಪು ಹಾಕದೆ, ನಿಷೇಧ ನಿರ್ಧಾರ ಕೈಗೊಂಡವು.

ಈ ನಿರ್ದೇಶಕರು ತನಗೆ ಕಿರುಕುಳ ನೀಡುತ್ತಿದ್ದರು. ಕಳೆದ ವಾರ ಮದುರೈ ಸಮೀಪ ನಡೆದ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ಸಂದರ್ಭ ಕೆನ್ನೆಗೆ ಬಾರಿಸಿದರು ಎಂದು ಪದ್ಮಪ್ರಿಯಾ ಆರೋಪಿಸಿದ್ದರು.

ಚಿತ್ರ ನಿರ್ದೇಶಕರೊಬ್ಬರಿಗೆ ಈ ರೀತಿ ನಿಷೇಧ ವಿಧಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎಂದು ಚಿತ್ರೋದ್ಯಮ ಮೂಲಗಳು ತಿಳಿಸಿವೆ.