ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪತ್ನಿ ನನ್ನನ್ನು ನಂಬುತ್ತಾಳೆ: ಶೈನಿ ಅಂತರಂಗ (Shiney Ahuja | Anupam Ahuja | Rape Case | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja, Soha Ali Khan
IFM
ನನ್ನ ಹೆಂಡತಿ ನನ್ನನ್ನು ಸಂಪೂರ್ಣ ನಂಬುತ್ತಾಳೆ. ಹೀಗೆ ಹೇಳಿರುವುದು ಕೆಲಸದಾಕೆಯ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಬಾಲಿವುಡ್ ನಟ ಶೈನಿ ಅಹುಜಾ.

ಈವರೆಗೆ ಬಾಲಿವುಡ್‌ನಲ್ಲಿ ತನ್ನ ಸಹನಟಿಯರೊಂದಿಗೆ ಹಲವು ಬಾರಿ ಶೀತಲ ಸಮರ ಹೊಂದಿದ್ದ ಶೈನಿ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಎಲ್ಲಿಂದ ಆ ದೂರುಗಳನ್ನು ಆರಂಭಿಸಿದರು ನನಗೆ ಗೊತ್ತಿಲ್ಲ. ಅವರು ಈ ಹೇಳಿಕೆಗಳನ್ನು ಎಲ್ಲಿ ನಿಲ್ಲಿಸುತ್ತಾರೆ ಎಂಬ ಬಗ್ಗೆಯೂ ನಾನು ತಲೆಕೆಡಿಸುವುದಿಲ್ಲ ಎಂದರು. ಶೈನಿಯ ವೃತ್ತಿ ಬದುಕಿನಲ್ಲಿ ಸಹನಟಿಯರು ಹಲವು ಬಾರಿ ಶೈನಿ ಅಹಂಕಾರಿ, ಗರ್ವಿಷ್ಟ ಎಂದು ದೂರಿದ್ದರು.

ನನ್ನ ಜೀವನದಲ್ಲಿ ಅತಿ ಮುಖ್ಯವಾದ ಹೆಣ್ಣು ಎಂದರೆ ಅದು ನನ್ನ ಹೆಂಡತಿಯಲ್ಲ. ನನ್ನ ಮಗಳು ಆರ್ಶಿಯಾ. ಅವಳು ಒಂದುವರೆ ವರ್ಷದ ಪುಟ್ಟ ಹುಡುಗಿ. ಈಗಷ್ಟೆ ಆಕೆ ಪುಟ್ಟ ನಡಿಗೆ ಶುರುಮಾಡಿದ್ದಾಳೆ. ಮಾತನಾಡಲೂ ಶುರುಮಾಡಿದ್ದಾಳೆ. ನನಗೆ ಅವಳೇ ಎಲ್ಲ. ನನ್ನ ಹೆಂಡತಿ ನನಗೆ ಎರಡನೇ ಪ್ರಾತಿನಿಧ್ಯ. ಆಕೆಗೂ ಆಕೆ ಎರಡನೇ ಪ್ರಾತಿನಿಧ್ಯದವಳು ಎಂದರೆ ಬೇಸರವಿಲ್ಲ ಎನ್ನುತ್ತಾರೆ ಶೈನಿ.

Shiney Ahuja, Esha Deol
IFM
ಮಗಳು ಆರ್ಶಿಯಾ ತನ್ನ ತುಂಟಾಟದಿಂದಲೇ ಎಲ್ಲವನ್ನೂ ಮಾತಾಡುತ್ತಾಳೆ. ಬೆಳಿಗ್ಗೆ ಎಲ್ಲರು ಏಳುವ ಮೊದಲೇ ಆಟ ಶುರುಮಾಡುತ್ತಾಳೆ. ಅವಳಿಂದಾಗಿ ನಾನೀಗ ಮನೆಯಲ್ಲೇ ಹೆಚ್ಚು ಸಮಯ ಕಳೆಯಲು ಆರಂಭಿಸಿದ್ದೇನೆ. ಸಂಜೆಯ ವೇಳೆಯಂತೂ ಕುಟುಂಬದ ಜತೆಗೇ ಇರುತ್ತೇನೆ ಎನ್ನುತ್ತಾರೆ ಶೈನಿ.

ನಾನು ವೃತ್ತಿಬದುಕಿನಲ್ಲಿ ಗಟ್ಟಿಯಾಗಿ ನಿಂತ ಮೇಲೆ ಪತ್ನಿ ಅನು ಅಮೆರಿಕದಲ್ಲಿದ್ದ ತನ್ನ ಕೆಲಸ ತ್ಯಜಿಸಿ ನನ್ನೊಂದಿರಲು ಬಂದಳು. ನನಗೆ ನನ್ನ ಹೆಂಡತಿಯ ಮೇಲೆ ತುಂಬ ಪ್ರೀತಿಯಿದೆ. ಆಕೆ ಮತ್ತು ನನ್ನ ಮಗಳು ನನ್ನ ಜತೆಗೆ ಹೆಚ್ಚು ಸಮಯ ವ್ಯಯಿಸಲು ನಾನು ಇಷ್ಟಪಡುತ್ತೇನೆ ಎಂದರು ಶೈನಿ.

ಇಶಾ ಡಿಯಾಲ್ ಹಾಗೂ ಸೋಹಾ ಅಲಿ ಖಾನ್ ನನ್ನ ನಡತೆ ಬಗ್ಗೆ ದೂರಿದ ಬಗ್ಗೆಯಾ ನೀವು ಮಾತನಾಡುತ್ತಿರುವುದು ಎಂದು ಕೋಪಗೊಳ್ಳುವ ಶೈನಿ, ಅವರಿಗೆ ನನ್ನ ವಿರುದ್ಧ ಮಾತನಾಡಲು ವಿಷಯವೇ ಇಲ್ಲ ಎಂದು ನನಗೆ ಗೊತ್ತು. ವೃತ್ತಿಯಲ್ಲಿ ನನ್ನ ಜತೆ ಕೆಲಸ ಮಾಡುವವರ ಜತೆಗೆ ನಾನು ಅಷ್ಟಾಗಿ ಸಂಬಂಧ ವೃದ್ಧಿಸುವುದೇ ಇಲ್ಲ. ಹಾಗಾಗಿ ನನ್ನ ಸಹನಟ, ನಟಿಯರ ಜತೆಗೆ ನನಗೆ ಪ್ರಾಬ್ಲಂ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

ಹಾಗಾದರೆ, ಕಂಗನಾ ರಾಣಾವತ್ ಹಾಗೂ ಪ್ರೀತಿ ಜಿಂಟಾ ಶೈನಿ ವ್ಯಕ್ತಿತ್ವದ ಬಗ್ಗೆ ದೂರಿದ್ದರಲ್ಲವೇ ಎಂದರೆ, ಶೈನಿ, ಹೌದು. ಆದರೆ ಕಂಗನಾ ಜತೆಗೆ ಶೂಟಿಂಗ್ ವೇಳೆ ನನಗೆ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಆಕೆಯ ದೂರನ್ನು ಓದಿ ಗೊತ್ತಾಯಿತು. ನನಗೆ ಅನ್ನಿಸುವ ಹಾಗೆ ಆಕೆಯ ಹೇಳಿಕೆಯನ್ನು ತಿರುಚಲಾಗಿತ್ತು ಅಷ್ಟೇ. ನಂತರ ನನಗೆ ಕಂಗನಾ ಸಿಕ್ಕಾಗ ಆಕೆ ತುಂಬ ಚೆನ್ನಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ. ಒಂದು ಪ್ರೀತಿ-ವಿಶ್ವಾಸದ ಅಪ್ಪುಗೆಯ್ನನೂ ನೀಡಿದ್ದರು. ಆದರೆ ಪ್ರೀತಿ ಜಿಂಟಾಳೂ ನನ್ನನ್ನು ದೂರಿದ್ದು ಗೊತ್ತಾಯಿತು. ಆಕೆಯೊಂದಿಗೆ ನಾನು ಅಷ್ಟಾಗಿ ಬೆರೆಯುವುದೂ ಇಲ್ಲ. ವಿಚಿತ್ರವೆಂದರೆ, ನನ್ನ ಸಹನಟಿಯರ ಜತೆಗೆ ನನ್ನನ್ನು ಯಾರೂ ಲಿಂಕ್ ಮಾಡುವುದೇ ಇಲ್ಲ. ನನಗೆ ತುಂಬ ಸಂತೋಷದ ವಿಷಯವೆಂದರೆ, ನನ್ನ ಪತ್ನಿ ನನ್ನನ್ನು ಸಂಪೂರ್ಣ ನಂಬುತ್ತಾಳೆ ಎಂದರು ಶೈನಿ.

ಶೈನಿ ಸದ್ಯ ಪ್ರೀತೀಶ್ ನಂದಿ ಅವರ ಆಕ್ಸಿಡೆಂಟ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅವರೀಗ ಸದ್ಯ ಅಮೆರಿಕನ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಮೆರಿಕನ್ ಚಿತ್ರವೊಂದರಲ್ಲಿ ಅಮೆರಿಕನ್ ಪ್ರಜೆಯ ಪಾತ್ರವನ್ನೇ ನಾನು ನಿಭಾಯಿಸುತ್ತಿದ್ದೇನೆ. ಅಮೆರಿಕದ ಚಿತ್ರದಲ್ಲಿ ಅಮೆರಿಕನ್ ಆಗಿ ನಟಿಸುತ್ತಿರುವ ಮೊದಲ ಭಾರತೀಯ ನಾನು ಎಂದು ಹೇಳುವ ಶೈನಿ, ನಾನು ಅಮೆರಿಕನ್ ಆಗಿ ಕಾಣುತ್ತೇನೆ ಎಂಬ ನಂಬಿಕೆಯಿದೆ. ಆದರೆ ನಾನು ಅಮೆರಿಕನ್ನರ ಸಾಂಪ್ರದಾಯಿಕ ಮನೋಸ್ಥಿತಿಯ್ನನು ಕಲಿತುಕೊಳ್ಳಬೇಕಿದೆ ಎಂದಿದ್ದಾರೆ.
Shiney Ahuja, Kangana
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅನುಪಮ್ ಅಹುಜಾ, ಬಾಲಿವುಡ್, ಅತ್ಯಾಚಾರ