ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 11 ಐಐಎಫ್‌ಎ ಪ್ರಶಸ್ತಿಗಳನ್ನು ಬಾಚಿದ ಜೋಧಾಅಕ್ಬರ್ (Jodhaa Akbar | IIFA Awards | A R Rahman | Fashion)
ಸುದ್ದಿ/ಗಾಸಿಪ್
Feedback Print Bookmark and Share
 
Jodha Akbar
IFM
ಐತಿಹಾಸಿಕ ಚಿತ್ರಕಥೆಯುಳ್ಳ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ, ಹೃತಿಕ್ ರೋಷನ್ ಅಭಿನಯದ ಜೋಧಾ ಅಕ್ಬರ್ ದಿ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ 10ನೇ ವಾರ್ಷಿಕ ಪ್ರಶಸ್ತಿ- 2009ರಲ್ಲಿ ಅಕ್ಷರಶಃ ಮಿಂಚಿದೆ. ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಸೇರಿದಂತೆ ಒಟ್ಟು 11 ಪ್ರಶಸ್ತಿಗಳನ್ನು ಜೋಧಾ ಕೊಳ್ಳೆಹೊಡೆದಿದೆ.

ಚೀನಾದ ಮಕಾವೋ‌ನಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರೆಬಿದ್ದಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಚಿತ್ರಗಳ ಪ್ರತಿಷ್ಟಿತ ಪ್ರಶಸ್ತಿಯಾದ ಐಐಎಫ್‌ಎ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಾಲಿವುಡ್ ಘಟಾನುಘಟಿಗಳೂ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಫ್ಯಾಷನ್ ಷೋ, ಚಿತ್ರಪ್ರದರ್ಶನ, ವಿವಿಧ ಗೋಷ್ಟಿಗಳೂ ಸೇರಿದಂತೆ ವಿಜ್ರಂಬಣೆಯಿಂದ ನಡೆದ ಸಮಾರಂಭದಲ್ಲಿ ಜೋಧಾ ಅಕ್ಬರ್ ಹೊರತುಪಡಿಸಿದರೆ, ಘಜ್ನಿ ಚಿತ್ರ ನಾಲ್ಕು, ರಾಕ್ ಆನ್ ಚಿತ್ರ 3 ಸೇರಿದಂತೆ, ಎ ವೆಡ್‌ನೆಸ್ ಡೇ 2, ರೇಸ್ 2, ಫ್ಯಾಷನ್ 2 ಹಾಗೂ ದೋಸ್ತಾನಾ, ಸಿಂಗ್ ಈಸ್ ಕಿಂಗ್, ಓಯೇ ಲಕ್ಕಿ ಚಿತ್ರಗಳು ತಲಾ ಒಂದೊಂದು ಪ್ರಶಸ್ತಿ ಬಾಚಿಕೊಂಡವು.

ಅತ್ಯುತ್ತಮ ಚಿತ್ರವಾಗಿ ಜೋಧಾ ಅಕ್ಬರ್ ಹೊರಹೊಮ್ಮಿದರೆ, ಎ.ಆರ್.ರೆಹಮಾನ್ ಅವರು ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ, ಅತ್ಯುತ್ತಮ ಸಂಗೀತ ನಿರ್ದೇಶನ ಹಾಗೂ ವೀಡಿಯೋಕಾನ್ ದಶಮಾನದ ಸಂಗೀತ ಸಾಧನೆ ಪ್ರಶಸ್ತಿ ಎಂಬ ಮೂರು ಪ್ರಶಸ್ತಿಗಳಿಗೆ ಭಾಜನರಾದರು. ಹೃತಿಕ್ ರೋಷನ್ ಐಡಿಯಾ ಸ್ಟೈಲ್ ಐಕಾನ್ ಪ್ರಶಸ್ತಿ ಹಾಗೂ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಗೆದ್ದುಕೊಂಡರು. ಬಾಲಿವುಡ್ ಕಿಂಗ್ ಖಾನ್ ಶಾರುಖ್ ದಶಮಾನದ ನಟನಾ ಸಾಧನೆ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಪಡೆದರೆ, ಮಹಿಳಾ ವಿಭಾಗದಲ್ಲಿ ಈ ಗರಿಮೆಗೆ ಐಶ್ವರ್ಯಾ ರೈ ಪಾತ್ರರಾದರು. ಫ್ಯಾಷನ್ ಚಿತ್ರದ ಅತ್ಯುತ್ತಮ ನಟನೆಗೆ ಪ್ರಿಯಾಂಕಾ ಛೋಪ್ರಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ದಶಮಾನದ ಅತ್ಯುತ್ತಮ ಚಿತ್ರವಾಗಿ ಲಗಾನ್ ರೂಪುಗೊಂಡಿತು. ಜೀವಮಾನದ ಸಿನಿಮಾ ಸಾಧನೆಗೆ ರಾಜೇಶ್ ಖನ್ನಾ ವಿಶೇಷ ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ಪ್ರದಾನ ಸಮಾರಂಭ ಸ್ಟಾರ್ ಟಿವಿಯಲ್ಲಿ ಜು.5ರಂದು ಪ್ರಸಾರವಾಗಲಿದೆ.

Hrithik Roshan
IFM
ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಇಂತಿದೆ.
ಜೀವಮಾನದ ಸಾಧನೆ ಪ್ರಶಸ್ತಿ- ರಾಜೇಶ್ ಖನ್ನಾ
ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ- ಎ.ಆರ್.ರೆಹಮಾನ್ (ಜೋಧಾ ಅಕ್ಬರ್)
ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ- ಮನೋ ರಿಶಿಲ್ (ಓಯೇ ಲಕ್ಕಿ)
ಅತ್ಯುತ್ತಮ ಸಂಕಲನ- ಬಲ್ಲು ಸಾಲುಜಾ (ಜೋಧಾ ಅಕ್ಬರ್)
ಅತ್ಯುತ್ತಮ ಕಲಾ ನಿರ್ದೇಶನ- ನಿತಿನ್ ಚಂದ್ರಕಾಂತ್ ದೇಸಾಯಿ (ಜೋಧಾ ಅಕ್ಬರ್)
ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿ- ನೀತಾ ಲುಲ್ಲಾ (ಜೋಧಾ ಅಕ್ಬರ್)
ಅತ್ಯುತ್ತಮ ಮೇಕಪ್ ಪ್ರಶಸ್ತಿ- ಮಾಧವ್ ಕದಮ್ (ಜೋಧಾ ಅಕ್ಬರ್)
ಅತ್ಯುತ್ತಮ ಚಿತ್ರ ಪ್ರಶಸ್ತಿ- ಜೋಧಾ ಅಕ್ಬರ್
ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ- ನೀರಜ್ ಪಾಂಡೆ (ಎ ವೆಡ್‌ನೆಸ್ ಡೇ)
ಅತ್ಯುತ್ತಮ ಕಥೆ- ನೀರಜ್ ಪಾಂಡೆ (ಎ ವೆಡ್‌ನೆಸ್ ಡೇ)
ಅತ್ಯುತ್ತಮ ಸಂಗೀತ ಸಾಹಿತ್ಯ- ಜಾವೇದ್ ಅಖ್ತರ್ (ಜೋಧಾ ಅಕ್ಬರ್ ಚಿತ್ರದ ಜಶನ್ ಇ ಬಹಾರಾ... ಹಾಡಿಗಾಗಿ)
ಅತ್ಯುತ್ತಮ ಸಂಗೀತ ನಿರ್ದೇಶನ- ಎ.ಆರ್.ರೆಹಮಾನ್ (ಜೋಧಾ ಅಕ್ಬರ್)
ಅತ್ಯುತ್ತಮ ಹಾಸ್ಯ ನಟನೆ- ಅಭಿಷೇಕ್ ಬಚ್ಚನ್ (ದೋಸ್ತಾನಾ)
ಅತ್ಯುತ್ತಮ ಖಳನಾಯಕ- ಅಕ್ಷಯ್ ಖನ್ನಾ (ರೇಸ್)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಶ್ರೇಯಾ ಘೋಷಾಲ್ (ಸಿಂಗ್ ಈಸ್ ಕಿಂಗ್ ಚಿತ್ರದ ತೇರಿ ಓರೇ... ಹಾಡಿಗಾಗಿ)
ಅತ್ಯುತ್ತಮ ಹಿನ್ನೆಲೆ ಗಾಯಕ- ಜಾವೇದ್ ಅಲಿ (ಜೋಧಾ ಅಕ್ಬರ್ ಚಿತ್ರದ ಜಶನ್ ಇ ಬಹಾರಾ... ಹಾಡಿಗಾಗಿ)
ಅತ್ಯುತ್ತಮ ಶಬ್ದ ಮರುಸಂಕಲನ- ಲೀಸ್ಲೀ ಫೆರ್ನಾಂಡಿಸ್ (ರೇಸ್)
Fashion
IFM
ಅತ್ಯುತ್ತಮ ಶಬ್ದಗ್ರಹಣ- ರೀಸಲ್ ಪೂಕುಟ್ಟಿ ಹಾಗೂ ಅಮೃತ್ (ಘಜ್ನಿ)
ಅತ್ಯುತ್ತಮ ಸಾಹಸ- ಪೀಟರ್ ಸ್ಟೀನ್ಸ್ ಹಾಗೂ ಸ್ಟನ್ ಸಿವಾ (ಘಜ್ನಿ)
ಸ್ಪೆಷಲ್ ಎಫೆಕ್ಟ್ಸ್ ಪ್ರಶಸ್ತಿ- ಘಜ್ನಿ
ಶಬ್ದ ರೆಕಾರ್ಡಿಂಗ್ ಪ್ರಶಸ್ತಿ- ರಾಕ್ ಆನ್
ಐಡಿಯಾ ಸ್ಟೈಲ್ ಐಕಾನ್ ಪ್ರಶಸ್ತಿ (ಮಹಿಳಾ ವಿಭಾಗ)- ಬಿಪಾಶಾ ಬಸು
ಐಡಿಯಾ ಸ್ಟೈಲ್ ಐಕಾನ್ ಪ್ರಶಸ್ತಿ (ಪುರುಷರ ವಿಭಾಗ)- ಹೃತಿಕ್ ರೋಷನ್
ಅತ್ಯುತ್ತಮ ಚೊಚ್ಚಲ ನಟನಾ ಪ್ರಶಸ್ತಿ (ಮಹಿಳಾ ವಿಭಾಗ)- ಆಸಿನ್ (ಘಜ್ನಿ)
ಅತ್ಯುತ್ತಮ ಚೊಚ್ಚಲ ನಟನಾ ಪ್ರಶಸ್ತಿ (ಪುರುಷರ ವಿಭಾಗ)- ಫರ್ಹಾ ಅಖ್ತರ್ (ರಾಕ್ ಆನ್)
ಅತ್ಯುತ್ತಮ ನಿರ್ದೇಶಕ- ಅಶುತೋಷ್ ಗೌರೀಕರ್ (ಜೋಧಾ ಅಕ್ಬರ್)
ಅತ್ಯುತ್ತಮ ಸಹನಟಿ ಪ್ರಶಸ್ತಿ- ಕಂಗನಾ ರಾಣಾವತ್ (ಫ್ಯಾಷನ್)
ಅತ್ಯುತ್ತಮ ಸಹನಟ ಪ್ರಶಸ್ತಿ- ಅರ್ಜುನ್ ರಾಂಪಾಲ್ (ರಾಕ್ ಆನ್)
ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ- ಪ್ರಿಯಾಂಕಾ ಛೋಪ್ರಾ (ಫ್ಯಾಷನ್)
ಅತ್ಯುತ್ತಮ ನಾಯಕ ನಟ ಪ್ರಶಸ್ತಿ- ಹೃತಿಕ್ ರೋಷನ್ (ಜೋಧಾ ಅಕ್ಬರ್)
ವೀಡಿಯೋಕಾನ್ ದಶಮಾನದ ಸಂಗೀತ ಸಾಧನೆ ಪ್ರಶಸ್ತಿ- ಎ.ಆರ್.ರೆಹೆಮಾನ್
ವೀಡಿಯೋಕಾನ್ ದಶಮಾನದ ನಟನಾ ಸಾಧನೆ ಪ್ರಶಸ್ತಿ (ಮಹಿಳಾ ವಿಭಾಗ)- ಐಶ್ವರ್ಯಾ ರೈ
ವೀಡಿಯೋಕಾನ್ ದಶಮಾನದ ನಟನಾ ಸಾಧನೆ ಪ್ರಶಸ್ತಿ (ಪುರುಷರ ವಿಭಾಗ)- ಶಾರುಖ್ ಖಾನ್
ವೀಡಿಯೋಕಾನ್ ದಶಮಾನದ ಅತ್ಯುತ್ತಮ ಚಿತ್ರ- ಲಗಾನ್
ವೀಡಿಯೋಕಾನ್ ದಶಮಾನದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ- ರಾಕೇಶ್ ರೋಷನ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೋಧಾ ಅಕ್ಬರ್, ಐಐಎಫ್ಎ ಪ್ರಶಸ್ತಿ, ಎಆರ್ರೆಹೆಮಾನ್, ಹೃತಿಕ್ ರೋಷನ್, ಫ್ಯಾಷನ್