ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರೈಮಾ- ಭೂಪತಿ ನಡುವೆ ಕುಚ್ ಕುಚ್...! (Raima Sen | Mahesh Bhupathi | Riya | Mirch)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ನಟೀಮಣಿಯರು ಚಿತ್ರದ ಮೂಲಕ ಸುದ್ದಿ ಮಾಡದಿದ್ದರೂ ಗಾಸಿಪ್ ಕಾಲಂಗಳಲ್ಲಿ ಮಿಂಚುವುದರಲ್ಲಿ ಸಿದ್ಧಹಸ್ತರು. ಅದರಲ್ಲೂ ಆಟಗಾರರ ಜತೆ ಹೆಸರು ಕಾಣಿಸಿಕೊಳ್ಳೋದಂತೂ ಈಗ ತೀರಾ ಸಾಮಾನ್ಯ ಎಂಬಂತಾಗಿದೆ. ಈಗ ಗಾಸಿಪ್ ಕಾಲಂಗಳಿಗೆ ಸುಲಭವಾಗಿ ತುತ್ತಾಗಿರುವುದು ರೈಮಾ ಸೇನ್.

ರೈಮಾ ಸೇನ್ ಇತ್ತೀಚೆಗೆ ಸಹೋದರಿ ರಿಯಾ ಸೇನ್‌ಳಿಂದಾಗಿ ಹಾಗೂ ಸಲ್ಮಾನ್ ರಸ್ದಿ ಜತೆಗೆ ಸುದ್ದಿಯಾಗಿದ್ದೇ ಹೆಚ್ಚು. ಈಗ ಈಕೆ ಇವೆಲ್ಲವುಗಳಿಂದ ದೂರ ಉಳಿದು ಟೆನಿಸ್ ಜಗತ್ತಿನ ಮಹೇಶ್ ಭೂಪತಿ ಜತೆಗೆ ಗಾಸಿಪ್ಪಿಗರಿಗೆ ಆಹಾರವಾಗಿದ್ದಾಳೆ.

ಮಹೇಶ್ ಜತೆ ಇತ್ತೀಚೆಗೆ ನೀವು ಕಾಣಿಸಿಕೊಳ್ಳುತ್ತಿದ್ದೀರಂತೆ, ನಿಜವಾ ಎಂದರೆ ಈ ಹಾಟ್ ಕನ್ಯೆ ಸೌತೆಕಾಯಿಯಂತೆ ತಣ್ಣಗೆ ಏನೂ ಆಗಿಲ್ಲವೆಂಬಂತೆ ಉತ್ತರ ನೀಡುತ್ತಾಳೆ. ಮಹೇಶ್ ಭೂಪತಿಯವರ ಕಂಪನಿ ನನ್ನ ಕೆಲಸಗಳನ್ನು ವಹಿಸಿಕೊಳ್ಳುತ್ತದೆ. ಮಹೇಶ್ ಆ ಕಂಪನಿಯ ಬಾಸ್. ನಾನು ಆತನನ್ನು ಒಮ್ಮೆಯೇ ಭೇಟಿಯಾಗಿದ್ದು. ಆತನೂ ತನ್ನೆಲ್ಲಾ ಸಹುದ್ಯೋಗಿಗಳೊಂದಿಗೆ ನನ್ನನ್ನು ಭೇಟಿಯಾದರೆ, ನಾನು ನನ್ನ ಗೆಳೆಯ ವರ್ಗದವರೊಂದಿಗೆಯೇ ಆತನನ್ನು ಭೇಟಿಯಾಗಿದ್ದೆ ಎನ್ನುತ್ತಾಳೆ.

ಭೂಪತಿ ಸದ್ಯವಷ್ಟೆ ಫ್ರೆಂಚ್ ಓಪನ್‌ನಿಂದ ಹಿಂತಿರುಗಿದ್ದಾರೆ. ಭೂಪತಿ ಹೇಳುವಂತೆ, ನಾನು ಮೊನ್ನೆಯಷ್ಟೆ ಭಾರತಕ್ಕೆ ಮರಳಿದೆ. ನೈಟ್‌ಕ್ಲಬ್ಬಿನಲ್ಲಿ ಕೆಲವು ನನ್ನ ಗೆಳೆಯರನ್ನು ಭೇಟಿಯಾದೆ. ಆಗ ರೈಮಾ ಸೇನ್ ಕೂಡಾ ತನ್ನ ಗೆಳೆಯರೊಂದಿಗೆ ಅಲ್ಲಿದ್ದಳು. ನನ್ನ ಕಂಪನಿ ಅವಳ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಹಾಗಾಗಿ ನಾನು ಅವಳನ್ನು ಮೊದಲಿನಿಂದಲೇ ಬಲ್ಲೆ ಎನ್ನುತ್ತಾರೆ.

ರೈಮಾ ಮಾತ್ರ ಇಷ್ಟಕ್ಕೇ ನಿಲ್ಲಿಸುವುದಿಲ್ಲ. ನಾನು, ಮಹೇಶ್ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಹೀಗೆ ಗಾಸಿಪ್ಗೆ ತುತ್ತಾಗೋದು ಸಾಮಾನ್ಯವೇ. ಆದರೆ, ನಾನು ಯಾವತ್ತೂ ನನ್ನ ಜೀವಮಾನದಲ್ಲಿ ಮದುವೆಯಾದ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸಿಯೇ ಇಲ್ಲ. ಇಂಥ ಗಾಸಿಪ್ಪುಗಳಿಗೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ತಂದೆ ತಾಯಿಯರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲು ನಾನು ಬಿಡುವುದಿಲ್ಲ. ಅದೃಷ್ಟವಶಾತ್ ಅವರು ನನ್ನ ಮೇಲೆ ತುಂಬ ನಂಬಿಕೆಯಿಟ್ಟಿದ್ದಾರೆ ಎನ್ನುತ್ತಾಳೆ ಈ ಸೇನ್.

ಅಂದಹಾಗೆ, ರೈಮಾ ಮೇಲೆ ತಂದೆತಾಯಿಯರನ್ನು ಬಿಟ್ಟರೆ ಅತಿ ಹೆಚ್ಚು ನಂಬಿಕೆಯಿಟ್ಟವರು ಇನ್ನೂ ಒಬ್ಬರಿದ್ದಾರೆ. ಅವರು ಮತ್ಯಾರೂ ಅಲ್ಲ. ನಿರ್ದೇಶಕ ವಿನಯ್ ಶುಕ್ಲ. ವಿನಯ್ ಶುಕ್ಲ ಅವರ ಮಿರ್ಚ್ ಚಿತ್ರಕ್ಕೆ ಸಹಿ ಹಾಕಿರುವ ರೈಮಾ, ಈ ಚಿತ್ರ ಹಾಸ್ಯಾಸ್ಪದ ಮಹಿಳಾ ಚಿತ್ರ. ನಾನು ಹಾಗೂ ಶುಕ್ಲಾ ಒಳ್ಳೆಯ ಗೆಳೆಯರು. ನಮ್ಮ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ನಾನು ನನ್ನ ಯೋಚನೆಗಳನ್ನೂ ಈ ಚಿತ್ರದಲ್ಲಿ ಶುಕ್ಲಾ ಅವರಿಗೆ ತಿಳಿಸಿದ್ದು, ಅವರು ಚಿತ್ರವನ್ನು ಇನ್ನೂ ಹೆಚ್ಚು ಚೆನ್ನಾಗಿ ಮೂಡಿಬರಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾಳೆ.

ಅಬ್ಬಬ್ಬಾ ರೈಮಾ...!
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೈಮಾ ಸೇನ್, ಮಹೇಶ್ ಭೂಪತಿ, ಮಿರ್ಚ್, ರಿಯಾ ಸೇನ್, ವಿನಯ್ ಶುಕ್ಲಾ