ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನನ್ನನ್ನು ಅಶ್ಲೀಲವಾಗಿ ನಡೆಸಿಕೊಂಡರು: ಕೃಷಿಕಾ ಗುಪ್ತಾ (Neetu Chandra | Lesbian | Krrishika Gupta | The Man)
ಸುದ್ದಿ/ಗಾಸಿಪ್
Feedback Print Bookmark and Share
 
IFM
ನೀತುಚಂದ್ರದ ದಿ ಮ್ಯಾನ್ ಮ್ಯಾಗಜಿನ್‌ನ ಲೆಸ್ಬಿಯನ್ ಫೋಟೋ ಶೂಟ್‌ ವಿವಾದ ಈಗ ವಿಚಿತ್ರ ತಿರುವು ಪಡೆದುಕೊಂಡಿದೆ. ಈ ಬಾರಿ ವಿವಾದದ ಕೇಂದ್ರಬಿಂದುವಾದುದು ನೀತು ಅಂತೂ ಖಂಡಿತ ಅಲ್ಲ. ಬದಲಾಗಿ, ನೀತುವಿನ ಜತೆಗೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಕೃಷಿಕಾ ಗುಪ್ತ!

ಈವರೆಗೆ ಎಲೆಮರೆ ಕಾಯಿಯಂತಿದ್ದ ಫ್ಯಾಷನ್ ಲೋಕದ ಕೃಷಿಕಾ ಈ ಲೆಸ್ಬಿಯನ್ ಫೋಟೋ ಶೂಟ್ ಮೂಲಕ ಸುದ್ದಿ ಮಾಡಿ, ಈಗ ಮತ್ತೂ ಸುದ್ದಿ ಮಾಡುವತ್ತ ಹೆಜ್ಜೆಯಿಟ್ಟಿದ್ದಾಳೆ. ಆಕೆ ಈಗ ನೇರವಾಗಿ ಫೋಟೋಶೂಟ್ ಆಯೋಜಕರನ್ನೇ ತರಾಟೆಗೆ ತೆಗೆದುಕೊಂಡಿರುವ ಕೃಷಿಕಾ ತಕರಾರನ್ನು ಅವಳ ಮಾತಲ್ಲೇ ಕೇಳಿದರೆ ಆಕೆಯ ಸಮಸ್ಯೆ ಸಂಪೂರ್ಣ ಅರ್ಥವಾದೀತು.

''ಈ ಫೋಟೋಶೂಟ್‌ನಲ್ಲಿ ನನ್ನನ್ನು ಕೇವಲ ಅವರ ಕಾರ್ಯಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಫೋಟೋಶೂಟ್ ಸಂದರ್ಭ ನನ್ನನ್ನು ನಿಜಕ್ಕೂ ಹಿಂಸಿಸಿದರು. ನಿಂದಿಸಿದರು. ಮೈಮೇಲೆ ಬಿದ್ದು ಪೀಡಿಸಿದರು. ನನ್ನ ಹಿಂಭಾಗವನ್ನು ಗಿಲ್ಲಿದರು. ಆದರೆ ನೀತು ಚಂದ್ರರಿಗೆ ರಕ್ಷಣಾ ಸಿಬ್ಬಂದಿಗಳನ್ನು ಅವರೇ ನೀಡಿದ್ದರು. ಆದರೆ ನನ್ನನ್ನು ಮಾತ್ರ ಅನಾಥರಾಗಿಸಿದರು.''

''ನನಗೆ ಈ ಶೂಟಿಂಗ್‌ನಲ್ಲಿ ಯಾವ ರಕ್ಷಣೆಯನ್ನೂ ನೀಡಲಿಲ್ಲ. ನನ್ನ ರಕ್ಷಣಾ ಸಿಬ್ಬಂದಿಗಳನ್ನೇ ಕರೆದುಕೊಂಡು ಬರಲು ಹೇಳಿದರು. ಜತೆಗೆ ಶೂಟಿಂಗ್ ಸಂದರ್ಭದಲ್ಲಿ ಪ್ರತ್ಯೇಕ ರಕ್ಷಣಾ ಸಿಬ್ಬಂದಿ ನೀಡುತ್ತೇವೆ ಎಂದರು. ಆದರೆ ನೀಡಲಿಲ್ಲ. ಜತೆಗೆ, ಈ ಫೋಟೋಶೂಟ್‌ನ್ನು ತುಂಬ ಕಲಾತ್ಮಕವಾಗಿ ತೆಗೆಯಲಾಗುತ್ತದೆ ಎಂದು ಹೇಳಿದರು. ಜತೆಗೆ ಅದೊಂದು ಬಹು ಪ್ರತಿಷ್ಠೆಯಿರುವ ಮ್ಯಾಗಜಿನ್‌ಗೆ ಎಂದರು. ಆದರೆ ನನಗೆ ಶೂಟಿಂಗ್ ಪ್ರದೇಶಕ್ಕೆ ಬಂದಾದಮೇಲೆ ತಿಳಿಯಿತು. ಆಯೋಜಕರು ಬಿಟ್ಟಿದ್ದು ಬರೀ ರೈಲು ಎಂದು.''

IFM
''ಶೂಟಿಂಗ್ ಸಂದರ್ಭದಲ್ಲಿ ಜುಹುವಿನ ತೆರೆದ ಬೀಚ್‌ನಲ್ಲಿ ಕೇವಲ ಬಿಕಿನಿಯಲ್ಲಿ ನಾವಿಬ್ಬರೂ ಪೋಸ್ ಕೊಡಬೇಕಿತ್ತು. ಅದು ಜುಹುವಿನ ಪಂಚತಾರಾ ಹೋಟೆಲ್‌ಗೆ ತಾಕಿಕೊಂಡಿರುವ ಬೀಚೇನೋ ನಿಜ. ಆದರೆ, ಕೆಲವರು ಅಲ್ಲಿ ನನ್ನನ್ನು ಮುಟ್ಟಿದರು. ಜತೆಗೆ ಇನ್ನೂ ಕೆಲವರು ಶೂಟಿಂಗ್ ಸಂದರ್ಭ ಬಿಕಿನಿ ಮೇಲೆ ಧರಿಸಿದ್ದ ಸ್ನಾನದ ಉಡುಗೆಯನ್ನು ಎಳೆದುಕೊಂಡು ಹೋಗಲು ನೋಡಿದರು. ಈ ಬಗ್ಗೆ ನಾನು ಆಯೋಜಕರಿಗೆ ದೂರು ನೀಡಿದರೆ, ಅವರು ಏನೂ ನಡೆಯದಂತೆ ಸುಮ್ಮನಿದ್ದುಬಿಟ್ಟರು. ಅವರು ಶೂಟಿಂಗ್ ಅವರ ಇಷ್ಟಕ್ಕೆ ತಕ್ಕಂತೆ ನಡೆದುದು ಹಾಗೂ ಚಿತ್ರ ಚೆನ್ನಾಗಿ ಬಂದ ಬಗ್ಗೆ ಭಾರೀ ಖುಷಿಯಲ್ಲಿದ್ದರು.''

''ನಾನು ಸಂಪೂರ್ಣ ಅನ್ಯಾಯಕ್ಕೆ ಒಳಗಾಗಿದ್ದೇನೆ. ನನ್ನನ್ನು ಮೋಸ ಮಾಡಿದ್ದಾರೆ. ನನ್ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲು ನೋಡಿದ ಅವರ ಮೇಲೆ ನಾನು ಖಂಡಿತ ದಾವೆ ಹೂಡುತ್ತೇನೆ. ಶೂಟಿಂಗ್ ವೇಳೆ ನಮಗೆ ಯಾವುದೇ ಭದ್ರತೆಯಿರಲಿಲ್ಲ. ಮೇಲಾಗಿ ಓಪನ್ ಬೀಚ್‌ನಲ್ಲಿ ನಡೆಸಿದ ಈ ಶೂಟಿಂಗ್‌ಗೆ ಪೊಲೀಸರ ಅನುಮತಿಯೇ ಪಡೆದಿರಲಿಲ್ಲ. ಜತೆಗೆ ಯಾವೊಬ್ಬ ಪೊಲೀಸನೂ ಅಲ್ಲಿ ಹಾಜರಿರಲಿಲ್ಲ.''

'ಶೂಟಿಂಗ್ ಸಮಯದಲ್ಲಿ ಸೂಕ್ತ ಭದ್ರತೆ ಒದಗಿಸದ ಕಾರಣ ಗುಂಪುಗೂಡಿದ್ದ ಮಂದಿ ತನ್ನನ್ನು ಅಶ್ಲೀಲವಾಗಿ ಮುಟ್ಟಿದರು ಹಾಗೂ ಹಿಂಭಾಗವನ್ನು ಚಿಗುಟಿದರು' ಎಂದು ಕೃಷಿಕಾ ಶೀಘ್ರವೇ ತನ್ನ ವಕೀಲರನ್ನು ಭೇಟಿಯಾದ ನಂತರ ಪೊಲೀಸ್ ಮೊಕದ್ದಮೆ ಹೂಡಲಿದ್ದಾರೆ ಎಂದು ಕೃಷಿಕಾರ ವ್ಯವಸ್ಥಾಪಕ ಹಾಗೂ ಪ್ರಚಾರಕರಾದ ಫ್ಲಿನ್ ತಿಳಿಸಿದ್ದಾರೆ.

''ಗುಂಪಿನಲ್ಲಿ ಒಬ್ಬರು ಆಕೆಯ ಹಿಂಭಾಗವನ್ನು ಗಿಲ್ಲಿದ್ದಾರೆ. ಜತೆಗೆ ಕೆಲವರು ಈ ಸಂದರ್ಭ ಆಕೆಯನ್ನು ಕೆಲವು ಕೆಟ್ಟ ಪದಗಳಿಂದ ಅಶ್ಲೀಲವಾಗಿ ಛೇಡಿಸಿದ್ದಾರೆ. ಜತೆಗೆ ಕೆಲವು ಅಶ್ಲೀಲ ಸಂಜ್ಞೆಗಳನ್ನೂ ಆಕೆಯೆಡೆಗೆ ತೋರಿದ್ದಾರೆ. ಇದರಿಂದ ಆಕೆಗೆ ತುಂಬ ಬೇಸರವಾಗಿದೆ'' ಎಂದು ಫ್ಲಿನ್ ತಿಳಿಸಿದರು.

ಅಷ್ಟೇ ಅಲ್ಲದೆ, ಆ ಸಮಯದಲ್ಲಿ ಪರಿಸ್ಥಿತಿ ಕೈಮೀರಿ ಹೊಗದಿದ್ದುದಕ್ಕೆ ದೇವರನ್ನೂ ನೆನೆಯುತ್ತಾಳಂತೆ. ಈ ಹಿಂದೆ ಈ ವರ್ಷದ ಹೊಸವರ್ಷಾಚರಣೆ ಸಂದರ್ಭ ಇಬ್ಬರು ಯುವತಿಯರ್ನನು ಗುಂಪು ಯುವಕರು ಅದೇ ಜುಹು ಬೀಚ್‌ನಲ್ಲಿ ಅತ್ಯಾಚಾರ ಮಾಡಿದ್ದರು ಎಂದು ಕೃಷಿಕಾ ನೆನಪಿಸುತ್ತಾರೆ.

''ಈ ಹಿಂದೆಯೇ ತಾನು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಸಂಕೋಚವಾಯಿತು. ಹಾಗೂ ಇದು ತನ್ನ ಕುಟುಂಬಕ್ಕೆ ಬೇಸರ ತರುತ್ತದೆ ಎಂಬ ಕಾರಣಕ್ಕೆ ಹೇಳಿರಲಿಲ್ಲ. ಆದರೆ ಈಗ ಹೇಳದೆ ವಿಧಿಯಿಲ್ಲ. ಇಂತಹ ಬೇಜವಾಬ್ದಾರಿಯುತ ಶೂಟಿಂಗ್‌ನಿಂದ ತಾನು ತೀವ್ರ ನೊಂದಿದ್ದೇನೆ'' ಎಂದೂ ಕೃಷಿಕಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೃಷಿಕಾ ಗುಪ್ತಾ, ನೀತುಚಂದ್ರ, ಲೆಸ್ಬಿಯನ್, ದಿ ಮ್ಯಾನ್