ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಿಪಾಶಾ, ಧೋನಿ ಇಲ್ಲಿ! ಜಾನ್ ಅಬ್ರಹಾಂ ಎಲ್ಲಿ? (Bipasha Basu | MS Dhoni | Hexride | Reebok)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಿಪಾಶಾ ಬಸು ಹಾಗೂ ಮಹೇಂದ್ರಸಿಂಗ್ ಧೋನಿ. ಆಹಾ, ಎಂಥಾ ಕಾಂಬಿನೇಶನ್ನು! ಬಾಲಿವುಡ್‌ನ ಹಾಟ್ ಸೆಕ್ಸೀ ನಟಿ ಹಾಗೂ ಕ್ರಿಕೆಟ್ ಜಗತ್ತಿನ ಸುಂದರಿಯರ ನಿದ್ದೆಕೆಡಿಸಿದ ಧೋನಿ. ಈಗ ಈ ಇಬ್ಬರೂ ಒಂದಾಗಿದ್ದಾರೆ!

ಆಶ್ಚರ್ಯಪಡಬೇಡಿ. ಬಿಪಾಶಾ ಧೋನಿ ಹತ್ತಿರ ಹೋದರೆ ಜಾನ್ ಅಬ್ರಹಾಂ ಗತಿ ಏನಾಗಬೇಡ. ಅಮೋಘ ಏಳು ವರ್ಷಗಳಿಂದ ಪ್ರೀತಿಸುತ್ತಿರುವ ಜಾನ್‌ನ ಜಾನ್‌ನಲ್ಲೇ ಇದೆ ಬಿಪಾಶಾ ಉಸಿರು. ಹಾಗಿರುವಾಗ ಇದೆಲ್ಲಾ ಸಾಧ್ಯವಾ ಅಂತ ಪ್ರಶ್ನಿಸಿದರೆ ನಿಮ್ಮ ಪ್ರಶ್ನೆಯೂ ಸುಳ್ಳಲ್ಲ ಬಿಡಿ. ಬಿಪಾಶಾ ಹಾಗೂ ಧೋನಿ ಒಂದಾಗಿದ್ದು ಕೇವಲ ಒಂದು ಜಾಹಿರಾತಿನಲ್ಲಿ. ರೀಬಾಕ್ ಸ್ಪೋರ್ಟ್ಸ್ ಶೂಗೆ ಜಾಹಿರಾತು ರೂಪದರ್ಶಿಗಳಾಗಿರುವ ಬಿಪಾಶಾ ಹಾಗೂ ಧೋನಿ ಈವರೆಗಿನ ಟಿವಿ ಜಾಹಿರಾತಿನಲ್ಲೇ ಮೊತ್ತ ಮೊದಲ ಬಾರಿಗೆ ಸುದ್ದಿ ಮಾಡಿದ್ದಾರೆ.

ಧೋನಿ ಹಾಗೂ ಬಿಪಾಶಾ ರೀಬಾಕ್‌ನ ಹೆಕ್ಸ್‌ರೈಡ್ ಎಂಬ ಹೆಸರಿನ ಹೊಸ ಸ್ಪೋರ್ಟ್ಸ್ ಶೂ ಮೆಟ್ಟಿಕೊಂಡು ಓಡುತ್ತಿರುವ ದೃಶ್ಯವಿರುವ ಜಾಹಿರಾತು ಪೋಸ್ಟರ್‌ಗಳು ಈಗ ಹಾಟ್ ಸುದ್ದಿಯಾಗಿಯಾಗಿದೆ. ಇದರಲ್ಲಿ ಕೇವಲ ಧೋನಿ ಮಾತ್ರವಲ್ಲ. ಬಿಪಾಶಾ ಕೂಡಾ ತುಂಬ ಸುಂದರವಾಗಿ ಥೇಟ್ ಅಥ್ಲೀಟ್ ತರಹನೇ ಕಂಗೊಳಿಸಿದ್ದಾಳಂತೆ. ಅಷ್ಟೇ ಅಲ್ಲ. ಬಿಪಾಶಾ ಇದಕ್ಕೆ ಜಿಮ್‌ಗೆ ಹೋಗಿ ತನ್ನ ದೇಹವನ್ನು ಹದಗೊಳಿಸಿ ಅಥ್ಲೀಟ್ ಲುಕ್ ಪಡೆದುಕೊಂಡಿದ್ದಾಳಂತೆ.

IFM
ಈ ಜಾಹಿರಾತಿನಲ್ಲಿ ಧೋನಿ, ಬಿಪಾಶಾ ಇಬ್ಬರೂ ಚೆನ್ನಾಗೇ ನಟಿಸಿದ್ದಾರಂತೆ. ನಿಜವಾದ ಸ್ಪೋರ್ಟ್ಸ್ ಜೋಡಿಗಳಂತೆ ಇದರಲ್ಲಿ ಕಂಡಿದ್ದಾರಂತೆ. ಇನ್ನೂ ಇದು ಟಿವಿಗಳಿಗೆ ಲಗ್ಗೆಯಿಟ್ಟಿಲ್ಲ. ಅಷ್ಟಾಗಲೇ ಸುದ್ದಿ ಮಾಡಿದೆ. ಜತೆಗೆ ಈ ಸ್ಪೋರ್ಟ್ಸ್ ಶೂ ಹಾಕಿಕೊಂಡು ಓಡಿದ ಅನುಭವವನ್ನು ಬಿಪಾಶಾ ಹಂಚಿಕೊಳ್ಳೋದು ಹೀಗೆ- ''ನಾನು ಜಾಗಿಂಗ್, ಜಿಮ್‌ನಲ್ಲಿ ಅಭ್ಯಾಸ ಸೇರಿದಂತೆ ಹಲವು ಫಿಟ್‌ನೆಸ್ ಮಂತ್ರಗಳನ್ನು ಈ ಜಾಹಿರಾತಿಗಾಗಿ ಅನುಸರಿಸಿದ್ದೆ. ಆದರೆ ಈ ಸ್ಪೋರ್ಟ್ಸ್ ಶೂ ಮಾತರ ಅದ್ಭುತವಾಗಿದೆ. ನನಗೆ ಇದನ್ನು ಹಾಕಿ ನಡೆಯುವಾಗ ತುಂಬ ಹಿತವೆನಿಸಿತು'' ಎನ್ನುತ್ತಾಳೆ.

ಧೋನಿ ಹೇಳುವ ಪ್ರಕಾರ, ''ಈ ಶೂಟಿಂಗ್ ನನಗೆ ತುಂಬ ಇಷ್ಟವಾಯಿತು. ಜತೆಗೆ ನಾನು ತುಂಬ ಎಂಜಾಯ್ ಮಾಡಿದೆ. ಬಿಪ್ಸ್ ಜತೆ ಓಡಿದ್ದು ತುಂಬ ವಂಡರ್‌ಫುಲ್ ಎಕ್ಸ್‌ಪೀರಿಯನ್ಸ್.''

ಕೆಲವೇ ದಿನಗಳಲ್ಲಿ ಈ ಜಾಹಿರಾತು ನಿಮ್ಮ ಮನೆಯ ಟಿವಿಗಳಿಗೂ ಅಪ್ಪಳಿಸಲಿದೆ. ಕಾದು ನೋಡಿ. ಎಂಜಾಯ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಪಾಶಾ ಬಸು, ಜಾನ್ ಅಬ್ರಹಾಂ, ಧೋನಿ, ರೀಬಾಕ್