ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರಣ್‌: ವರ್ಮಾಗೆ ಸುಪ್ರೀಂಕೋರ್ಟ್ ಮಂಗಳಾರತಿ (Ram Gopal Varma | Supreme Court | Jana Gana Mana Rann)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಯಾಕೋ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗತಿ ನೆಟ್ಟಗಿಲ್ಲ ಅನಿಸುತ್ತದೆ. ಅಥವಾ ನೆಟ್ಟಗಿಲ್ಲದೆ ಸೊಟ್ಟಗಿದ್ದೇ ಜಗತ್ತನ್ನು ಚುಂಬಕದಂತೆ ಸೆಳೆಯುವುದೇ ಈ ನಿರ್ದೇಶಕನ ಜಾಯಮಾನ ಅನಿಸುತ್ತದೆ. ಒಟ್ಟಾರೆ ಕನ್ನಡಿಗ ಸುದೀಪ್ ನಟಿಸಿರುವ ರಣ್ ಚಿತ್ರದ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. 'ನಮ್ಮ ಹಾಡು ಸರಿಯಾಗೇ ಇದೆ. ನಾವು ದೇಶವನ್ನು ಹೇಗೆ ವಿದ್ರೋಹಿಗಳಿಂದ ರಕ್ಷಿಸಬೇಕೆಂದು ಈ ಹಾಡಿನ ಮೂಲಕ ಕರೆಕೊಟ್ಟಿದ್ದೇವೆ' ಎಂದು ಹೇಳಿಕೊಂಡಿದ್ದ ನಿರ್ದೇಶಕ ವರ್ಮಾ ಸೆನ್ಸಾರ್ ಮಂಡಳಿ ವಿರುದ್ಧ ಸುಪ್ರೀಕೋರ್ಟ್ ಮೆಟ್ಟಿಲು ಹತ್ತಿದ್ದು ಹಳೇ ಕಥೆ. ಈಗ ಹೊಸ ಕಥೆ ಎಂದರೆ ಸುಪ್ರೀಂಕೋರ್ಟಿನಿಂದಲೂ ಮಂಗಳಾರತಿ ಮಾಡಿಸಿಕೊಂಡಿದ್ದು!

'ಚಿತ್ರದ ಹಾಡು ರಾಷ್ಟ್ರಗೀತೆಯನ್ನು ತಿರುಚಿ ಬರೆದಂತಿರುವುದು ಹೌದು. ಇದರಿಂದ ತಪ್ಪು ಅಭಿಪ್ರಾಯ ಮೂಡುತ್ತದೆ ಹಾಗೂ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ' ಎಂದು ಸುಪ್ರೀಕೋರ್ಟ್ ಹೇಳಿದೆ. ಅಲ್ಲದೆ, ಈ ಹಾಡಿನಲ್ಲಿರುವ ಕೆಲ ಪದಗಳನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ನೀಡಿದ್ದ ಆಜ್ಞೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ವರ್ಮಾ ಇಷ್ಟಕ್ಕೇ ಸುಮ್ಮನಿದ್ದರೆ ಸರಿ. ಈಗ ಹೊಸತೊಂದು ಅಭಿಯಾನ ಶುರು ಹಚ್ಚಿದ್ದಾರೆ. ಜಪ್ಪಯ್ಯ ಅಂದರೂ ಈ ಹಾಡನ್ನು ಚಿತ್ರದಿಂದ ತೆಗೆದುಹಾಕಲಾರೆ ಎಂದು ಭೀಷ್ಮ ಪ್ರತಿಜ್ಞೆ ತೊಟ್ಟಿರುವ ರಣ್‌ನ ವರ್ಮಾ ಬಳಗ ಈಗ ಜನ ಗಣ ಮನ ರಣ್... ಗೀತೆಯ 500 ಸಿಡಿ ಪ್ರತಿಗಳ್ನು ತಯಾರಿಸಿದೆ. ತಯಾರಿಸಿ ಇಟ್ಟುಕೊಂಡು ಮನೆಯಲ್ಲೇನು ಪೂಜೆ ಮಾಡುತ್ತಿಲ್ಲ. ಬದಲಾಗಿ ಭಾರತದ 500 ಸಂಸದರಿಗೆ ಈ ಸಿಡಿ ಪ್ರತಿಯನ್ನು ರವಾನಿಸಿಯೂ ಬಿಟ್ಟಿದೆ.

ರಣ್ ಚಿತ್ರದ ಸಹ ನಿರ್ಮಾಪಕರಾದ ಮಧು ಮಂಟೇನಾ ಹಾಗೂ ಶೀತಲ್ ತಲ್ವಾರ್ ಅವರಿಬ್ಬರೂ 500 ಸಿಡಿಗಳನ್ನು ತಯಾರಿಸಿ 500 ಸಂಸದರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಮಂಟೇನಾ ಹೇಳುವುದು ಹೀಗೆ- ''ಭಾರತವನ್ನು ಮುನ್ನಡೆಸುವ ನಾಯಕರು ನಾವು ರಣ್‌ನಲ್ಲಿ ಏನು ಮಾಡಿದ್ದೇವೆ ಎಂದು ಸ್ವತಃ ಪ್ರತ್ಯಕ್ಷವಾಗಿ ನೋಡಿ ಅರಿಯಲಿ. ದೇಶದಲ್ಲಿ ಆಗುತ್ತಿರುವ ಅಧಃಪತನವನ್ನು ಸರಿದಾರಿಗೆ ತರುವ ದ್ಯೋತಕವಾಗಿ ಈ ಹಾಡನ್ನು ನಾವು ಬರೆದರೆ, ನಾವು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದೇವೆ ಎಂದರು. ದೇಶದಲ್ಲಿ ನಡೆಯುವ ಅನಾಚಾರಗಳ ವಿರುದ್ಧ ಪ್ರತಿಭಟನೆ ಮಾಡುತ್ತಾ ಕೂತರೆ, ಇನ್ನು ನಡೆಯುವುದಿಲ್ಲ. ಅದು ತೀರಾ ಅಲಕ್ಷ್ಯಕ್ಕೆ ಒಳಗಾಗಿದೆ. ದೇಶ ಬದಲಾಗಬೇಕು. ಆ ಬದಲಾವಣೆಗೆ ಪ್ರತಿಭಟನೆಯ ರೂಪವಾಗಿ ಈ ಹಾಡು ಹೊರಬಂದಿದೆ.''

''ನಾವು ಸಂಸದರಿಗೆ ಈ ಸಿಡಿಯನ್ನು ಅವರು ಸುಪ್ರೀಂಕೋರ್ಟಿನಲ್ಲಿ ಇನ್‌ಫ್ಲುಯೆನ್ಸ್ ಮಾಡಲಿ ಎಂಬ ಉದ್ದೇಶದಿಂದ ಕಳುಹಿಸಿಕೊಟ್ಟಿಲ್ಲ. ಅವರು ನೋಡಿ ಅರ್ಥಮಾಡಿಕೊಳ್ಳಲಿ. ಒಮ್ಮೆ ಇದ್ನನು ನೋಡಿದರೆ, ಖಂಡಿತ ಇದರಲ್ಲಿ ರಾಷ್ಟ್ರಗೀತೆಯನ್ನು ಅವಮಾನ ಮಾಡಿಲ್ಲ ಎಂದು ತಿಳಿಯುತ್ತದೆ. ಅದು ಎಲ್ಲರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಕಳುಹಿಸಿದ್ದೇವೆ.'' ಎನ್ನುತ್ತಾರೆ ಮಂಟೇನಾ

ಅಂದಹಾಗೆ ಈ ಚಿತ್ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ. ಇನ್ನೂ ಅಕ್ಟೋಬರ್‌ವರೆಗೆ ಏನೇನು ವರ್ಮಾ ರೂಪಗಳನ್ನು ನೋಡಲಿದೆಯೋ...
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುಪ್ರೀಂಕೋರ್ಟ್, ರಾಮ್ಗೋಪಾಲ್ ವರ್ಮಾ, ಜನ ಗಣ ಮನ ರಣ್, ಸುದೀಪ್