ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ವಿವಾದವೆಬ್ಬಿಸಿದ ನೀತುವಿನ ಹಾಟ್ ಫೋಟೋಶೂಟ್ (Neetu Chandra | Lesbian | The Man | Raj Thackeray)
ಸುದ್ದಿ/ಗಾಸಿಪ್
Feedback Print Bookmark and Share
 
IFM
ನೀತುಚಂದ್ರ ಎಂಬ ಪಾಟ್ನಾದ ಬೆಡಗಿ ಬಾಲಿವುಡ್ಡಿನಲ್ಲಿ ಇನ್ನೂ ಸರಿಯಾಗಿ ನೆಟ್ಟಗೆ ನಿಂತಾಗಿಲ್ಲ. ಅಷ್ಟಾಗಲೇ ಭಾರೀ ಸುದ್ದಿ ಮಾಡಿದ್ದಾಳೆ. ಮಾಡಿದ ಸುದ್ದಿಯೂ ಅಂತಿಂಥದ್ದಲ್ಲ. ಸದ್ಯಕ್ಕೀಗ ಬಾಲಿವುಡ್ಡಿನಲ್ಲಿರುವ ಅತೀ ಹಾಟ್ ಸುದ್ದಿಯೆಂದರೆ ಅದು ನೀತು ಚಂದ್ರ.

ಅಂದಹಾಗೆ ಈಕೆ ತನ್ನ ಅದ್ಭುತ ಪ್ರತಿಭೆಯನ್ನು ಚಿತ್ರದಲ್ಲಿ ತೋರಿ ಇಷ್ಟೊಂದು ಸುದ್ದಿ ಮಾಡಿದ್ದಾಳೆ ಎಂದರೆ ಅದು ಶುದ್ಧ ಮೂರ್ಖತನದ ಪರಮಾವಧಿ. ಆಕೆ ಸುದ್ದಿಯಾಗಿದ್ದು ಮೈಚಳಿ ಬಿಟ್ಟು ಸರ್ವ-'ಅಂಗಿ' ಪರಿತ್ಯಾಗಿಯಾಗಿ ಕೇವಲ ಟು ಪೀಸ್‌ನಲ್ಲಿ ಪೋಸ್ ಕೊಟ್ಟಿದ್ದು. ಈಗಿನ ಕಾಲದಲ್ಲಿ ಬರೀ ಟು ಪೀಸ್‌ನಲ್ಲಿ ಪೋಸ್ ಕೊಟ್ಟಿದ್ದು ಅಂತಹ ಮಹಾನ್ ಸುದ್ದಿಯೇನೂ ಅಲ್ಲ. ಆದರೆ ಇಲ್ಲಿ ಸುದ್ದಿ ಮಾಡಿದ್ದು ನೀತುವಿನ ಟು ಪೀಸ್ ಅಲ್ಲ. ಬದಲಾಗಿ ಆಕೆಯ ಪ್ರಣಯದ ದೃಶ್ಯ. ಅದೂ ಕೂಡ ಇನ್ನೊಬ್ಬನ ಜತೆಗೆ ಅಲ್ಲ. 'ಇನ್ನೊಬ್ಬಳ' ಜತೆಗೆ ಅನ್ನೋದೇ ಮಹತ್ವದ ಸುದ್ದಿ!

ಈಕೆ ಮಾಡ ಹೊರಟಿದ್ದು, ಪುರುಷರ ಮ್ಯಾಗಜಿನ್ 'ದಿ ಮ್ಯಾನ್‌'ಗೆ ಲೆಸ್ಬಿಯನ್ ಅರ್ಥಾತ್ ಸ್ತ್ರೀಸಲಿಂಗಕಾಮದ ಫೋಟೋಶೂಟ್‌ನಲ್ಲಿ ಅಭಿನಯ. ಹೇಳಿಕೇಳಿ ಭಾರತದಂತಹ ಸಾಂಪ್ರದಾಯಿಕ ಚೌಕಟ್ಟುಗಳಲ್ಲಿ ಇನ್ನೂ ಸಲಿಂಗಕಾಮ ಮಹಾಪರಾಧ. ಹೀಗಾಗಿ ನೀತುಗೆ ಸಿಕ್ಕಾಪಟ್ಟೆ ತೊಂದರೆ ತೊಂದರೆಯಾಗಿದೆ.

ಅಂದಹಾಗೆ, ನೀತುಗೆ ಮೊದಲು ಈ ಆಫರ್ ಬಂದಾಗ ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಅಂದುಕೊಂಡಿರಲಿಲ್ಲವಂತೆ. ಸ್ವಲ್ಪದಿನ ಸುದ್ದಿಯಾಗಬಹುದು. ಆಮೇಲೆ ಸುದ್ದಿ ನಿಂತುಹೋದರೂ ತನಗೆ ಪ್ರಸಿದ್ಧಿ ಸಿಗುತ್ತದೆ ಎಂಬುದು ಆಕೆಯ ಲೆಕ್ಕಾಚಾರ. ಹಾಗಾಗಿ 'ದಿ ಮ್ಯಾನ್‌'ನ ಹಾಟ್ ಹಾಗೂ ಸೆಕ್ಸೀ ಮುಖಪುಟಕ್ಕೆ ನೀತು ಪೋಸ್ ನೀಡಲು ನೀತು ಒಪ್ಪಿದಳು. ಇದಕ್ಕಾಗಿ ಆಕೆ ಮೂರು ನಾಲ್ಕು ಪ್ರಣಯದ ಭಂಗಿಗಳಲ್ಲಿ ಮಾಡಲ್ ಕೃಶಿಕಾ ಗುಪ್ತಾ ಜತೆಗೆ ಪಾಲ್ಗೊಳ್ಳಬೇಕಿತ್ತು.

ತ್ರಿ ಸ್ಟಾರ್ ಹೊಟೇಲೊಂದರ ಲಾಬಿಯಲ್ಲಿ ನಡೆಯಲಿರುವ ಶೂಟಿಂಗ್‌ಗೆ ನೀತು ತಯಾರಾದ ನೀತುವನ್ನು ಆಗಲೇ ಹೊಟೇಲಿಗೆ ಬಂದ ಗ್ರಾಹಕರು ನೋಡತೊಡಗಿದರು. ಕೆಲವರು ಕೈ ಬೀಸಿದರು. ಕೆಲವು ನಕ್ಕರು. ಶೂಟಿಂಗ್ ಆರಂಭವಾದ ತಕ್ಷಣ ಜೋರಾಗಿ ಗಲಾಟೆ ಮಾಡಿದ ಅನೇಕರ ಗುಂಪು ಶೂಟಿಂಗ್ ನಡೆಯುವ ಪ್ರದೇಶಕ್ಕೆ ದಾಳಿ ಮಾಡಿತು. 'ಜೈ ಮಹಾರಾಷ್ಟ್ರ' ಎಂಬ ಘೋಷಣೆಗಳೊಂದಿಗೆ ಬಂದ ಗುಂಪು ಎಷ್ಟು ಪ್ರಬಲವಾಗಿತ್ತೆಂದರೆ, ಶೂಟಿಂಗ್ ನಡೆಸಲು ಸಾಧ್ಯವಾಗಲೇ ಇಲ್ಲ. ಕ್ಯಾಮರಾ ಒಡೆದು ಹಲ್ಲೆಮಾಡಲು ಮುಂದಾದುದಕ್ಕೆ ಶೂಟಿಂಗ್ ಅರ್ಧಕ್ಕೇ ನಿಂತಿತು. ಹಾಗೆ ಶೂಟಿಂಗ್ ವೇಳೆಯಲ್ಲಿ ಅಡ್ಡಿ ಪಡಿಸಿದ್ದು ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವಿರ್ಮಾಣ ವೇದಿಕೆಯ ಗುಂಪು ಎಂದು ಹೇಳಲಾಗುತ್ತಿದೆ.

IFM
ಈ ಹಠಾತ್ ದಾಳಿಯಿಂದ ಕಂಗೆಟ್ಟ ನೀತು ಹೇಳುವುದು ಹೀಗೆ, ''ಎರಡು ಹುಡುಗಿಯರ ನಡುವಿನ ದೃಶ್ಯವಾದ್ದರಿಂದ ಇಂತಹ ಪ್ರತಿರೋಧ ಬಂತು. ಆದರೆ ನಾವು ಅದನ್ನು ಅಸಹ್ಯ ಹುಟ್ಟಿಸುವಂತೆ ಚಿತ್ರೀಕರಿಸುತ್ತಿರಲಿಲ್ಲ. ಕಲಾತ್ಮಕವಾಗಿ ಮಾಡಲು ಹೊರಟಿದ್ದೆವು. ಆದರೆ ಅಲ್ಲಿದ್ದ ಗಂಡಸರೆಲ್ಲ ಇದಕ್ಕೆ ವಿರೋಧಿಸಿದರು. ಮೊದಲು ನನಗೆ ಅರ್ಥವೇ ಆಗಲಿಲ್ಲ. ನಾನು ಶೂಟಿಂಗ್‌ನಲ್ಲಿದ್ದಾಗ ಕೆಲವರು ವಿಚಿತ್ರವಾಗಿ ನಕ್ಕರು. ನಾನು ಕ್ಷಮಿಸಿದೆ, ಜತೆಗೆ ಕೇರ್ ಮಾಡಲಿಲ್ಲ. ನಾನು ನನ್ನ ಕೆಲಸದಲ್ಲಿ ತೊಡಗಿದೆ. ಅದೇನಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಗಲಾಟೆ ಶುರುವಾಯಿತು. ಅವರೆಲ್ಲ ಈ ವಿಷಯವನ್ನು ರಾಜಕೀಯ ಮಾಡಲು ಹೊರಟರು. ಕ್ಯಾಮರಾಕ್ಕೂ ದಾಳಿ ಮಾಡಲು ಹೊರಟಾಗ ನಾವು ಶೂಟಿಂಗ್ ನಿಲ್ಲಿಸಲೇಬೇಕಾಯಿತು.''

ಆಗ ನಿಂತ ಶೂಟಿಂಗ್ ಮತ್ತೆ ಹೇಗೋ ಗ್ರಾಹಕರು ಇಲ್ಲದ ಸಮಯದಲ್ಲಿ ಹೋಟೇಲಿನಲ್ಲಿ ಮಾಡಲು 'ದಿ ಮ್ಯಾನ್' ನಿರ್ಧರಿಸಿ, ಎಲ್ಲಿ ಎಡವಟ್ಟಾಗುತ್ತದೋ ಎಂಬ ಭಯದಲ್ಲಿ ಕೊನೆಗೂ ಶೂಟಿಂಗ್ ಪೂರ್ಣಗೊಳಿಸಿದೆ. ಮ್ಯಾಗಜಿನ್‌ನಲ್ಲಿ ಪ್ರಕಟಗೊಳ್ಳುವ ಮೊದಲೇ ಈ ಚಿತ್ರಗಳೂ ಈಗ ಎಲ್ಲೆಡೆ ಹರಿದಾಡುತ್ತಿದೆ.

ಇವೇನೇ ಇರಲಿ. ಬಾಲಿವುಡ್ ಉದ್ಯಮ ಮಾತ್ರ ಇದಕ್ಕೆ ಪಾಸಿಟಿವ್ ಆಗಿಯೇ ಪ್ರತಿಕ್ರಿಯಿಸಿದೆ. ಕೆಲವರು ಇದೊಂದು ಇಂಟರೆಸ್ಟಿಂಗ್ ಕಾನ್ಸೆಪ್ಟ್ ಎಂದರೆ, ಇನ್ನೂ ಕೆಲವು ನೀತುವನ್ನು ಈ ಚಿತ್ರದಲ್ಲಿ ಹಾಟ್ ಆಗಿ ನೋಡಿ ಕಂಗಾಲಾಗಿಬಿಟ್ಟೆವು. ಫೋಟೋ ಸಕ್ಕತ್ತಾಗಿದೆ ಅಂತೆಲ್ಲ ಹೊಗಳಿದ್ದಾರೆ. ಮತ್ತೆ ಕೆಲವರು ಇಂತಹ ವಿವಾದವಾಗುವ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ ನೀತುವಿನ ಧೈರ್ಯವನ್ನು ಹೊಗಳಿದ್ದಾರೆ. ಇನ್ನೂ ಕೆಲವರು ತುಂಟತನದಿಂದ ನೀತು ತುಂಬ ಮಗ್ನಳಾಗಿದ್ದಂತೆ ಅನಿಸುತ್ತದೆ ಎಂದೆಲ್ಲ ಕೀಟಲೆ ಮಾಡಿದ್ದಾರೆ.

ಅಂತೂ ನೀತು ಧೈರ್ಯ ಮೆಚ್ಚಬೇಕಾ... ಗೊತ್ತಿಲ್ಲ. ಒಟ್ಟಾರೆ, ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದರೂ ಭರ್ಜರಿ ಖ್ಯಾತಿ ಗಳಿಸಲು ಇತರೆ ಬಾಲಿವುಡ್ ನಟಿಯರು ನೀತು ನೋಡಿ ಕಲಿಯಬೇಕಷ್ಟೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೀತು ಚಂದ್ರ, ಲೆಸ್ಬಿಯನ್, ರಾಜ್ ಠಾಕ್ರೆ, ದಿ ಮ್ಯಾನ್