ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೀಪಿಕಾ ಏಂಜಲೀನಾಗಿಂತಲೂ ಸುಂದರಿ! (Hollywood | Deepika Padukone | Angelina Jolie | Rob Cohen)
ಸುದ್ದಿ/ಗಾಸಿಪ್
Feedback Print Bookmark and Share
 
IFM
ದೀಪಿಕಾ ಏಂಜಲೀನಾ ಜೂಲಿಗಿಂತಲೂ ಸುಂದರಿಯಂತೆ! ಹಾಗಂತ ಹಾಲಿವುಡ್‌ನ ಖ್ಯಾತ ನಿರ್ದೇಶಕ ರಾಬ್ ಕೊಹೆನ್ ಹೇಳಿದ್ದಾರೆ.

ಭಾರತದ ಸೂಪರ್ ಮಾಡೆಲ್, ಮೇಲಾಗಿ ಕನ್ನಡತಿ ದೀಪಿಕಾ ಪಡುಕೋಣೆಯ ಬಗ್ಗೆ ಹೀಗೊಂದು ಹೇಳಿಕೆ ಹೊರಬೀಳುತ್ತಲೇ ಭಾರತದಿಂದ ಸಾಗರ ಜಿಗಿದು ಹಾಲಿವುಡ್‌ಗೆ ದೀಪಿಕಾ ಹಾರಿಬಿಡುತ್ತಾಳೆ ಎಂಬ ದಟ್ಟ ವದಂತಿ ಬಾಲಿವುಡ್ ತುಂಬೆಲ್ಲ ಹಬ್ಬಿದೆ. ಅಲ್ಲದೆ, ದಿ ವಿಚಸ್ ಆಫ್ ಈಸ್ಟ್‌ವಿಕ್, ದಿ ಫಾಸ್ಟ್ ಅಂಡ್ ಫ್ಯೂರಿಯಸ್, ದಿ ಸರ್ಪೆಂಟ್ ಅಂಡ್ ರೈನ್‌ಬೋ ಮತ್ತಿತರ ಪ್ರಸಿದ್ಧ ಚಿತ್ರಗಳ ನಿರ್ಮಾಪಕ, ನಿರ್ದೇಶಕರಾದ ಅಮೆರಿಕ ಮೂಲದ ರಾಬ್ ಅವರ ಮುಂದಿನ ಚಿತ್ರಕ್ಕೆ ದೀಪಿಕಾಳೇ ನಾಯಕಿ ಎಂಬ ಸುವಾಸನೆಯೂ ಹರಡತೊಡಗಿದೆ.

ಆಕೆಯ ಸೌಂದರ್ಯ ಕಂಡು ಮೂಕವಿಸ್ಮಿತರಾಗಿರುವ ರಾಬ್, ದೀಪಿಕಾ ಅದ್ಭುತ ಅಪರೂಪದ ಸುಂದರಿ. ಏಂಜಲೀನಾ ಜೂಲಿಗಿಂತಲೂ ನನಗೆ ದೀಪಿಕಾಳ ಸೌಂದರ್ಯ ಆಕರ್ಷಕವೆನಿಸಿತು. ನಾನು ಆಕೆಯನ್ನು ನಾಯಕಿಯನ್ನಾಗಿ ನನ್ನ ಮುಂದಿನ ಚಿತ್ರಗಳಿಗೆ ಬಳಸಲು ನಿರ್ಣಯಿಸಿ ಮಾತುಕತೆಯನ್ನೂ ನಡೆಸಿದ್ದೇನೆ. ಆದರೆ ಅದಿನ್ನೂ ಅಂತಿಮ ಹಂತಕ್ಕೆ ಬಂದಿಲ್ಲ ಎಂದು ರಾಬ್ ಖಚಿತಪಡಿಸಿದ್ದಾರೆ.

ದೀಪಿಕಾ ಭಾರತದ ಹೊಸ ಯುವ ಪ್ರತಿಭೆ. ಬಾಲಿವುಡ್‌ನಲ್ಲಿ ಈಕೆಯ ಮೊದಲ ಚಿತ್ರ ಓಂ ಶಾಂತಿ ಓಂ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ನಂತರ ಈಕೆ ಪ್ರಸ್ತುತ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಈಕೆಯೀಗ ಹಾಲಿವುಡ್ ಪ್ರವೇಶಿಸಿದರೆ, ಆಕೆ ಬಾಲಿವುಡ್‌ನಿಂದ ಹಾಲಿವುಡ್‌ಗೆ ಅತಿ ಬೇಗನೆ ಹಾರಿದ ಮೊದಲ ನಟಿ ಎಂಬ ಕೀರ್ತಿಯೂ ಅಂಟಿಕೊಳ್ಳುತ್ತದೆ. ಈಗಾಗಲೇ ಫ್ಯಾಷನ್ ಮ್ಯಾಗಜಿನ್‌ಗಳಾದ ವೋಗ್, ಎಲ್ಲೆ, ಕಾಸ್ಮೋಪಾಲಿಟನ್, ಲಾಫಿಶಿಯೆಲ್, ಮೇರಿ ಕ್ಲ್ಯಾರಿ ಮತ್ತಿತರ ಮ್ಯಾಗಜಿನ್‌ಗಳಲ್ಲಿ ಮುಖಪುಟಗಳಲ್ಲೂ ರಾರಾಜಿಸಿದ್ದಾಳೆ.

ಮ್ಯಾಕ್ಸಿಮ್ ಮ್ಯಾಗಜಿನ್ ಆಕೆಯನ್ನು ದಿ ಹಾಟೆಸ್ಟ್ ಗರ್ಲ್ ಆನ್ ಅರ್ಥ್ (ಭೂಮಿಯ ಮೇಲಿರುವ ಅತಿ ಹಾಟ್ ಹುಡುಗಿ). ಆಕೆ ಹಲವು ಜಾಹಿರಾತುಗಳ ಅಂತಾರಾಷ್ಟ್ರೀಯ ರಾಯಬಾರಿಯೂ ಆಗಿದ್ದು, ಫ್ಯಾಷನ್ ಜಗತ್ತಿನಲ್ಲಿ ವಿಶ್ವದಲ್ಲಿ ತ್ನನದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾಳೆ.

ರಾಬ್ ಹೇಳುವಂತೆ, ದೀಪಿಕಾಳದು ಕಣ್ಕುಕ್ಕುವ ಉಜ್ವಲ ಸೌಂದರ್ಯ. ಜತೆಗೆ ಅಸಾಮಾನ್ಯ ಪ್ರತಿಭೆಯೂ ಆಕೆಯ ಬೆನ್ನಿಗಿದೆ. ಆಕೆ ಒಬ್ಬ ಪ್ರತಿಭಾನ್ವಿತ, ಯುವ ಹಾಗೂ ಉಜ್ವಲ ಸೌಂದರ್ಯ ಹೊಂದಿದ ಅಪರೂಪದ ನಟಿ, ಫ್ಯಾಷನ್ ತಾರೆ. ಪೆಪ್ಸಿ, ಮೇಬೆಲೈನ್, ಟಿಸ್ಸಾಟ್, ಲೆವಿಸ್, ರಿಂಗ್ಲೇ, ಫಿಯಾಮಾ ಡಿ ವೆಲ್ಸ್ ಮತ್ತಿತರ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವ ದೀಪಿಕಾಗೆ ಮುಂದೆ ಉಜ್ವಲ ಭವಿಷ್ಯವಿದೆ ಎನ್ನುತ್ತಾರೆ. ಆದರೆ, ದೀಪಿಕಾ ಹಾಲಿವುಡ್‌ಗೆ ಹಾರುತ್ತಾಳಾ ಗೊತ್ತಿಲ್ಲ. ಕಾಲ ಮುಂದೆ ಸದ್ಯದಲ್ಲೇ ಉತ್ತರಿಸಲಿದೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಂಜಲೀನಾ ಜೂಲಿ, ದೀಪಿಕಾ ಪಡುಕೋಣೆ, ಹಾಲಿವುಡ್, ರಾಬ್ ಕೊಹೆನ್