ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 40 ಅಡಿ ನೀರಿಗೆ ಹಾರಿದ ಪ್ರಿಯಾಂಕಾ ಛೋಪ್ರಾ! (Priyanka Chopra | Pyaar Impossible | Uday Chopra | Yash Raj Films)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಮೊನ್ನೆ ಮೊನ್ನೆ ಪ್ರಿಯಾಂಕಾ ಛೋಪ್ರಾ ಎಂಬ ಫ್ಯಾಷನ್ ಬೆಡಗಿ 40 ಅಡಿ ಎತ್ತರದ ನಾಲ್ಕು ಮಹಡಿಗಳ ಕಟ್ಟಡದಿಂದ ಕೆಳಕ್ಕೆ ಹಾರಿದಳಂತೆ. ಅದೃಷ್ಟವಶಾತ್ ಏನೂ ಆಗಲಿಲ್ಲ!

ಕಟ್ಟಡದಿಂದ ನೆಗೆದುಬೀಳೋ ಹಾಗೆ ಪ್ರಿಯಾಂಕಾ ಛೋಪ್ರಾಗೆ ಏನಾಯಿತಪ್ಪ? ಶಾಹಿದ್ ಎಂಬ ಚೆಲುವಾಂಗ ಸುಂದರ ಕೈಕೊಟ್ಟನಾ.. ಅಂತೆಲ್ಲ ಪ್ರಶ್ನೆ ಹುಟ್ಟಿಕೊಂಡರೂ ಸ್ವಲ್ಪ ಕಾಲ ಅದುಮಿಟ್ಟುಕೊಂಡು ಪೂರ್ತಿಯಾಗಿ ಓದಿ. ಆಗ ನಿಮ್ಮಲ್ಲಿ ಅಬ್ಬಾ ಎಂಥ ಧೈರ್ಯಸ್ಥೆ! ಅಂತ ಉದ್ಗಾರ ಬರದಿದ್ದರೆ ಮತ್ತೆ ಕೇಳಿ.

ನಡೆದುದಿಷ್ಟು. ಪ್ರಿಯಾಂಕಾ ಛೋಪ್ರಾ ಯಶ್ ರಾಜ್ ಬ್ಯಾನರ್‌ನ ತನ್ನ ಪ್ಯಾರ್ ಇಂಪಾಸಿಬಲ್ ಚಿತ್ರದಲ್ಲಿ ಬ್ಯುಸಿ. ಚಿತ್ರದಲ್ಲಿ ಶೂಟಿಂಗ್‌ನಲ್ಲಿ ಕಟ್ಟಡದಿಂದ ಹಾರುವ ದೃಶ್ಯವೇನೂ ಇಲ್ಲ. ಆದರೂ, ಕೇವಲ ತಮಾಷೆಗಾಗಿ ಹಿಂದು ಮುಂದು ಯೋಚಿಸದ ಪ್ರಿಯಾಂಕಾ ಛೋಪ್ರಾ ಎಂಬ ಕೋಮಲ ಕನ್ಯೆ ನಿಜವಾಗಿಯೂ ಎತ್ತರದ ಕಟ್ಟಡದಿಂದ 40 ಅಡಿ ಕೆಳಕ್ಕಿರುವ ಈಜುಕೊಳಕ್ಕೆ ಧುಮುಕಿದಳಂತೆ. ಚಿತ್ರದ ಹೀರೋ, ನಿರ್ದೇಶಕರಿಗೆ ಎಲ್ಲರಿಗೂ ಶಾಕ್!

IFM
ಪ್ರಿಯಾಂಕಾ ಹಾಗೆಯೇ. ಭಾರೀ ಧೈರ್ಯಸ್ಥೆ. ಚಿತ್ರದಲ್ಲೂ. ನಿಜ ಜೀವನದಲ್ಲೂ. ತನ್ನ ಹಲವು ಸ್ಟಂಟ್‌ಗಳನ್ನು ತಾನೇ ಮಾಡುತ್ತಾಳೆ. ಆಕೆಯ ಕೆಲವು ಅದ್ಭುತ ಸ್ಟಂಟ್‌ಗಳು ದ್ರೋಣ ಚಿತ್ರದಲ್ಲಿ ಪ್ರಸಿದ್ಧಿ ಪಡೆದಿದ್ದವು. ಆದರೆ ಪ್ಯಾರ್ ಇಂಪಾಸಿಬಲ್ ಚಿತ್ರ ಒಂದು ರೊಮ್ಯಾಂಟಿಕ್ ಲವ್‌ ಸ್ಟೋರಿ. ಆದಿತ್ಯ ಛೋಪ್ರಾ ಚಿತ್ರದ ಹೀರೋ. ಶೂಟಿಂಗ್ ಸಮಯದಲ್ಲಿ ರಿಲ್ಯಾಕ್ಸ್ ಆಗಲು ಈಕೆ ನೀರಿನೊಳಕ್ಕೆ ಹಾರಿಯೇ ಬಿಟ್ಟಳು. ಸ್ವಲ್ಪ ಸಮಯದ ನಂತರ ಎದ್ದು ಬಂದಾಗ ಶಾಕ್ ಆಗಿದ್ದ ಎಲ್ಲರ ಮುಖದಲ್ಲೂ ನಗು.

ಈಕೆಯನ್ನೇ ಪಾಲೋ ಮಾಡಿದ ನಾಯಕ ಆದಿತ್ಯ ಛೋಪ್ರಾ ಕೂಡಾ ಈಕೆಯಂತೆಯೇ ನೆಗೆದಿದ್ದಾನೆ. ಆದರೆ ಪಾಪ, ಯಾವ ಶನಿ ಕಾಟವಿತ್ತೋ ಗೊತ್ತಿಲ್ಲ. ಕೈಗೆ ಅಲ್ಪಸ್ವಲ್ಪ ಪೆಟ್ಟಾಯಿತು. ತೊಂದರೆಯೇನೂ ಆಗಲಿಲ್ಲವಂತೆ.

ಇದು ಕೇವಲ ಫನ್ ಅಷ್ಟೇ. ಚಿತ್ರದ ಶೂಟಿಂಗ್ ವೇಳೆ ತಮಾಷೆಗಾಗಿ ಅವರೇ ಮಾಡಿದ್ದು ಎಂದು ಚಿತ್ರತಂಡದ ಮೂಲಗಳು ಹೇಳಿವೆ. ಇನ್ನು ಪ್ರಿಯಾಂಕ ನೀರಿಗೆ ಬಿದ್ದಳೆಂದು ಪಾಪ, ಅತ್ತ ಚಾಕೋಲೇಟ್ ಹುಡುಗ ಹಾಲುಕೆನ್ನೆಯ ಶಾಹಿದ್ ಏನೂ ಎಡವಟ್ಟು ಮಾಡದಿದ್ದರೆ ಸಾಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಯಾಂಕಾ ಛೋಪ್ರಾ, ಪ್ಯಾರ್ ಇಂಪಾಸಿಬಲ್, ಉದಯ್ ಛೋಪ್ರಾ, ಯಶ್ ರಾಜ್