ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಿರ್ಮಾಪಕರು-ಮಲ್ಟಿಪ್ಲೆಕ್ಸ್ ಸಹಮತ: ಮುಷ್ಕರ ಅಂತ್ಯ (Bollywood | Producers | Multiplex | Mukesh Bhatt)
ಸುದ್ದಿ/ಗಾಸಿಪ್
Feedback Print Bookmark and Share
 
ಆದಾಯ ಹಂಚಿಕೆ ಕುರಿತು ಚಿತ್ರ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳ ನಡುವೆ ಎದ್ದಿದ್ದ ಎರಡು ತಿಂಗಳ ವಿವಾದವು ಕೊನೆಗೂ ಬಗೆಹರಿದಿದ್ದು, ಈ ವಿಷಯದಲ್ಲಿ ಉಭಯ ಬಣಗಳೂ ಸಹಮತಕ್ಕೆ ಬಂದಿವೆ.

ಸಂಯುಕ್ತ ನಿರ್ಮಾಪಕರು ಮತ್ತು ವಿತರಕರ ರಂಗ (ಯುಪಿಡಿಎಫ್) ಹೆಸರಿನಲ್ಲಿ ಒಗ್ಗಟ್ಟಾಗಿದ್ದ ನಿರ್ಮಾಪಕರು ಮತ್ತು ಚಿತ್ರ ವಿತರಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಿಂದೀಚೆಗೆ ಹೊಸ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡಿರಲಿಲ್ಲ.

ಶುಕ್ರವಾರ ಮುಂಜಾನೆ ವೇಳೆಗೆ ಈ ವಿವಾದಕ್ಕೆ ಸಂಬಂಧಿಸಿ ಸಹಮತಕ್ಕೆ ಬರಲಾಯಿತು ಎಂದು ನಿರ್ಮಾಪಕ, ಯುಪಿಡಿಎಫ್ ಸಂಚಾಲಕ ಮುಖೇಶ್ ಭಚ್ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದಾರೆ.

ಟಿಕೆಟ್ ಮಾರಾಟದಲ್ಲಿ ಬಂದ ಆದಾಯವು ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಮವಾಗಿ ಹಂಚಿಕೆಯಾಗಲಿದೆ. ಚಿತ್ರದ ವಿಷಯದ ಆಧಾರದಲ್ಲಿ ನಿರ್ಮಾಪಕರು ಮತ್ತು ವಿತರಕರು ಚಿತ್ರವನ್ನು ಆರಿಸಿ ಬಿಡುಗಡೆ ಮಾಡುವ ಹಕ್ಕನ್ನು ನಿರ್ಮಾಪಕರು ಮತ್ತು ವಿತರಕರು ಹೊಂದಿರುತ್ತಾರೆ. ಅನ್ವಯವಾಗದಿರುವ ಕಡೆಗಳಲ್ಲಿ ಮನರಂಜನಾ ತೆರಿಗೆ ವಿಧಿಸುವಂತಿಲ್ಲ ಎಂದು ಮುಖೇಶ್ ಭಟ್ ವಿವರಿಸಿದರು.

ಜೂನ್ 12ರ ಬಳಿಕ ಎಲ್ಲ ಹೊಸ ಚಿತ್ರಗಳ ಬಿಡುಗಡೆಯಾಗಲಿದೆ. ಎರಡು ತಿಂಗಳ ಕಾಲ ಈ ಬಿಕ್ಕಟ್ಟಿನಿಂದಾಗಿ ನಿರ್ಮಾಪಕರು, ವಿತರಕರು ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಒಟ್ಟಾರೆಯಾಗಿ 200 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.

ಸಾಜಿದ್ ನಾಡಿಯಾದ್‌ವಾಲಾ ಅವರ 'ಕಂಭಕ್ತ್ ಇಷ್ಕ್', ಯಶ್ ಚೋಪ್ರಾ ಅವರ 'ನ್ಯೂಯಾರ್ಕ್', ವಿಷ್ಣು ಭಾಗ್ನಾನಿ ಅವರ 'ಕಲ್ ಕಿಸ್ನೇ ದೇಖಾ ಹೈ', ಸುಭಾಷ್ ಘಾಯ್ ಅವರ 'ಪೇಯಿಂಗ್ ಗೆಸ್ಟ್' ಮುಂತಾದ ದೊಡ್ಡ ಬಜೆಟಿನ ಚಿತ್ರಗಳ ಬಿಡುಗಡೆಯು ವಿಳಂಬವಾಗಿತ್ತು.

ಮಲ್ಟಿಪ್ಲೆಕ್ಸ್‌ಗಳು ಮನರಂಜನಾ ತೆರಿಗೆ ಅನ್ವಯವಾಗದ ಕಡೆಗಳಲ್ಲಿಯೂ ಗ್ರಾಹಕರಿಂದ ತೆರಿಗೆ ಸುಲಿಗೆ ಮಾಡುತ್ತಿದ್ದವು ಎಂಬುದು ನಿರ್ಮಾಪಕರು ಹಾಗೂ ವಿತರಕರ ಆರೋಪ. ಹಾಗೂ ಟಿಕೆಟ್ ಮಾರಾಟದಲ್ಲಿ ಸಮಾನ ಪಾಲು ದೊರೆಯಬೇಕೆಂಬುದು ನಿರ್ಮಾಪಕರ ಒತ್ತಾಯವಾಗಿತ್ತು. ಮಾತ್ರವಲ್ಲದೆ, ಚಿತ್ರಗಳ ವಿತರಣಾ ಕಾರ್ಯದ ಮೇಲೆ ತಮಗೆ ಸಂಪೂರ್ಣ ಹಿಡಿತ ಬೇಕು ಎಂಬುದು ಕೂಡ ನಿರ್ಮಾಪಕರು, ವಿತರಕರ ಬೇಡಿಕೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ಮಲ್ಟಿಪ್ಲೆಕ್ಸ್, ಚಿತ್ರ ವಿತರಣೆ, ಮನರಂಜನಾ ತೆರಿಗೆ, ಮುಖೇಶ್ ಭಟ್, ಕಂಭಕ್ತ್ ಇಷ್ಕ್, ನ್ಯೂಯಾರ್ಕ್, ಕಲ್ ಕಿಸ್ನೇ ದೇಖಾ ಹೈ, ಪೇಯಿಂಗ್ ಗೆಸ್ಟ್