ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಆಸಿನ್ ನಿಜ ಬಾಯ್‌ಫ್ರೆಂಡ್ ಯಾರು ಗೊತ್ತಾ? (Bollywood | Salman Khan | Asin | Archie)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಮಲಯಾಳಿ ಬಾಲೆ ಆಸಿನ್ ಬಾಲಿವುಡ್‌ಗೆ ಕಾಲಿರಿಸಿದ್ದು ಯಾವ ಘಳಿಗೆಯಲ್ಲೋ.... ಅಂದಿನಿಂದಲೇ ಆಕೆಯನ್ನು ವಿವಾದಗಳು ಮುತ್ತುತ್ತಲೇ ಇದೆ. ಇದೀಗ ಆಕೆಯ ಹೆಸರು ಮಾಚೋಮನ್ ಸಲ್ಮಾನ್ ಖಾನ್ ಜತೆಗೆ ತಳುಕು ಹಾಕಿಕೊಂಡಿದೆ.

ಸಲ್ಮಾನ್ ಹಾಗೂ ಆಸಿನ್ ನಡುವೆ ಏನೋ ಕುಚ್ ಕುಚ್ ನಡೀತಾ ಇದೆ ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ, ಆಸಿನ್ ಅವರ ಲಂಡನ್ ಕನಸುಗಳು ಹೆಚ್ಚೂ ಕಮ್ಮೀ ದುಸ್ವಪ್ನವಾಗಿ ಕಾಡುತ್ತಿದೆ.

ಸಲ್ಲು ಮತ್ತು ಕ್ಯಾಟ್ (ಕತ್ರಿನಾ ಕೈಫ್) ನಡುವಿನ ಪ್ರೀತಿಯ ಸೌಧ ಕುಸಿಯಲು ಆಸಿನ್ ಕಾರಣ ಎಂದು ಹೇಳುತ್ತಿರುವುದರಿಂದ ಈಯಮ್ಮಳಿಗೆ ಶ್ಯಾನೆ ಬೇಸರವಾಗಿದೆ. ಹಾಗಾಗಿ ಈ ಎಲ್ಲ ಅಂತೆಕಂತೆಗಳಿಗೆ ಇತಿ ಶ್ರೀ ಹಾಡಲು ಮುಂದಾಗಿರುವ ಆಸಿನ್, ತನ್ನ ಪ್ರಿಯಕರ ಯಾರೆಂಬುದನ್ನು ಬಯಲು ಮಾಡಿದ್ದಾರೆ.

ಆಸಿನ್ ತನ್ನ ಒಂಬತ್ತನೇ ಹರೆಯದಲ್ಲೇ ಈತನ ಮೋಹಕ್ಕೊಳಗಾಗಿದ್ದರಂತೆ. ಆದರೆ ಅದು ಸಲ್ಲುಮಿಯಾ ಅಲ್ಲ. ಆಕೆ ಆಳವಾಗಿ ಪ್ರೀತಿಸುತ್ತಿರುವುದು ಆರ್ಚಿ ಕಾಮಿಕ್ಸ್ ನಾಯಕ ಆರ್ಚಿ! ತಾನು ತನ್ನ ಒಂಬತ್ತನೆ ಹರೆಯದಿಂದ ಈ ಕಾಮಿಕ್ ಸರಣಿಯನ್ನು ಓದುತ್ತಿದ್ದು, ಇತರ ನಾಯಕ ಆಕೆಯ ಕನಸಿನ ಹೀರೋ ಅಂತೆ. ಆಕೆ ಈಗಲೂ ಈ ಕಾಮಿಕ್ಸ್ ಪುಸ್ತಕಗಳನ್ನು ಸೆಟ್‌ಗೆ ಒಯ್ಯುತ್ತಾರಂತೆ.

ಆದರೆ ಆಸಿನ್ ತನ್ನ ಮತ್ತು ಸಲ್ಮಾನ್ ನಡುವೆ ಏನೂ ಏನೂ ಇಲ್ಲವೇ ಇಲ್ಲ ಅಂದಿದ್ದರೂ, ಅಂತೆಕಂತೆಗಳ ಕಥೆ ಹೆಣೆದಿದ್ದರೂ ವದಂತಿಗಳಿಗೆ ತೆರೆ ಬೀಳಲಿದೆಯೇ? ಏನೋಪ್ಪಾ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಆಸಿನ್, ಬಾಲಿವುಡ್, ಕತ್ರಿನಾ ಕೈಫ್