ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಲ್ಮಾನ್‌-ಕತ್ರಿನಾ ಪ್ರೇಮಕಥೆ ಮುಗಿದೇ ಇಲ್ಲ?! (Katrina Kaif | Neil Nitin Mukesh | Salman Khan)
ಸುದ್ದಿ/ಗಾಸಿಪ್
Feedback Print Bookmark and Share
 
Katrina Kaif, Neil Nitin Mukesh
IFM
ಬಾಲಿವುಡ್ಡಿನ ಟಾಪ್‌ಲೆಸ್ ಸಲ್ಮಾನ್ ಖಾನ್‌ಗೂ ಕತ್ರಿನಾಗೂ ಸಂಬಂಧ ಮುರೀತು ಎಂದೆಲ್ಲ ಸುದ್ದಿಯಾಗುವಾಗ ಈಗ ಒಂದು ಇಂಟರೆಸ್ಟಿಂಗ್ ಸುದ್ದಿ ಬಂದಿದೆ. ಈ ಸುದ್ದಿಯಿಂದಾಗಿ ಸಲ್ಮಾನ್- ಕತ್ರಿನಾರ ಪ್ರೇಮ ಬೂದಿಯೊಳಗೆ ಕೆಂಡ ಇನ್ನೂ ಇದೆಯೋ ಎಂಬ ಸಂಶಯವನ್ನೂ ಹುಟ್ಟಿಹಾಕಿದೆ. ಅತ್ತ ಸಲ್ಮಾನ್ ಮನದನ್ನೆ ಎಂದೇ ಬಿಂಬಿತವಾದ ಜರ್ಮನ್ ಬಿಚ್ಚುಗಾತಿ ಮಾಡೆಲ್ ಕ್ಲಾಡಿಯಾ ಕೂಡಾ, ಸಲ್ಮಾನ್‌ನ ಗರ್ಲ್‌ಫ್ರಂಡ್ ನಾನಲ್ಲ. ಕತ್ರಿನಾಳೇ ಆತನ ಮನದನ್ನೆ ಎಂದು ಮಾತನಾಡಿದ್ದು, ಈ ಸಂಶಯಕ್ಕೆ ಇನ್ನೂ ಪುಷ್ಟಿ ನೀಡಿದೆ.

ಸುದ್ದಿ ಏನಪ್ಪಾ ಅಂದರೆ, ಅಮೃತಶಿಲೆಯಂತೆ ಬೆಳ್ಳಗಿರುವ ನೀಲ್ ನಿತಿನ್ ಮುಖೇಶ್ ಎಂಬ ಬಾಲಿವುಡ್ಡಿನ ನವತರುಣ ಇತ್ತೀಚೆಗೆ ಕತ್ರಿನಾಳನ್ನು ಸ್ವೀಟ್‌ಹಾರ್ಟ್ ಅಂತ ಕರೆದಿದ್ದು, ಸಲ್ಮಾನ್‌ಗೆ ಯದ್ವಾತದ್ವಾ ಸಿಟ್ಟು ಬಂದಿದೆ. ನೀಲ್‌ಗೆ ಇನ್ನೊಬ್ಬರ ಗರ್ಲ್‌ಫ್ರೆಂಡ್‌ಗಳನ್ನು ಯಾಕೆ ಸ್ವೀಟ್‌ಹಾರ್ಟ್ ಅಂತ ಕರೀತೀಯಾ? ಅಂತ ಸಲ್ಮಾನ್ ಧಮಕಿಯೂ ಹಾಕಿದ್ದಾನಂತೆ.

ಸಲ್ಮಾನ್ ಹಳೆಕಥೆ ಗೊತ್ತಿಲ್ಲದವರಿಲ್ಲ. ಅವತ್ತು ಶಾರುಖ್ ಜತೆ ಐಶ್ ನಟಿಸುತ್ತಿರುವಾಗ ಶೂಟಿಂಗ್‌ ಸ್ಥಳಕ್ಕೇ ಹೋಗಿ ರದ್ದಾಂತ ಮಾಡಿದ್ದು ಎಲ್ಲರಿಗೂ ಗೊತ್ತು. ನಂತರ ಶಾರುಖ್ ಇನ್ನು ಐಶ್ ಜತೆ ನಟಿಸುವುದೇ ಇಲ್ಲಪ್ಪ ಅಂತ ಉಸ್ಸಂತ ಕುಳಿತದ್ದೂ ಗೊತ್ತು. ಐಶ್ ಮನೆ ಮುಂದೆ ಕುಡಿದು ರಂಪ ಮಾಡಿ, ಮುಂಬೈ ಬೀದಿಯಲ್ಲಿ ಯದ್ವಾತದ್ವಾ ಕಾರು ಓಡಿಸಿ ಹಲವರ ಸಾವಿಗೆ ಕಾರಣನಾದ ಸಲ್ಮಾನ್‌ನ ನಾಮ ಒಂದೇ ಆದರೂ, ರೂಪ ಹಲವು.

ಏನೇ ಇರಲಿ. ಆಗಿದ್ದೇನಪ್ಪಾ ಅಂದರೆ, ಇತ್ತೀಚೆಗೆ ಕತ್ರೀನಾಳನ್ನು ವಿಮಾನ ನಿಲ್ದಾಣದಿಂದ ಕರೆತರಲು ನಿಲ್ದಾಣಕ್ಕೆ ಸಲ್ಮಾನ್ ಹೋಗಿದ್ದನಂತೆ. ಆಗ ಕತ್ರಿನಾ ಜತೆಗೆ ಬರುತ್ತಿರುವಾಗ ಇದ್ದಕ್ಕಿದ್ದಂತೆ ಆಕೆಯ ಕೈಯಿಂದ ಮೊಬೈಲ್ ತೆಗೆದು ಅದರಲ್ಲಿ ನೀಲ್ ನಿತಿನ್ ಮುಖೇಶ್ ಹೆಸರಿಗೆ ಡಯಲ್ ಮಾಡಿದನಂತೆ.

Salman Khan
IFM
ಕತ್ರಿನಾಳ ಜತೆ ನ್ಯೂಯಾರ್ಕ್ ಚಿತ್ರದಲ್ಲಿ ಅಭಿನಯಿಸಿದ ನಂತರ ನೀಲ್ ಹಾಗೂ ಕತ್ರಿನಾ ಫ್ರೆಂಡ್ಸ್ ಆಗಿದ್ದಾರೆ. ಕತ್ರಿನಾ ಜತೆಗೆ ಸಲುಗೆಯಿರುವ ನೀಲ್ ನಿತಿನ್ ಮುಖೇಶ್‌ಗೆ ಒಂದು ತಮಾಷೆಯ ಅಭ್ಯಾಸವಿದೆಯಂತೆ. ಅದೇನಪ್ಪಾ ಅಂದರೆ, ತಾನಿಷ್ಟಪಡುವ ತನ್ನ ಗೆಳೆಯ ಗೆಳತಿಯರನ್ನು ಆತ ಸ್ವೀಟ್‌ಹಾರ್ಟ್ ಅಂತಲೇ ಕರೆಯೋದು.

ಕತ್ರಿನಾಳ ಫೋನ್ ಕಾಲ್ ಎಂದು ಭಾವಿಸಿ ನೀಲ್ ನಿತಿನ್ ಕಾಲ್ ರಿಸೀವ್ ಮಾಡಿ 'ಹಲೋ ಸ್ವೀಟ್‌ಹಾರ್ಟ್' ಅಂತ ನೀಲ್ ನೇರವಾಗಿ ಹೇಳಿಬಿಟ್ಟಿದ್ದಾನೆ. ಸಿಟ್ಟು ನೆತ್ತಿಗೇರಿದ ಸಲ್ಮಾನ್ 'ದಿಸ್ ಈಸ್ ನಾಟ್ ಯುವರ್ ಸ್ವೀಟ್‌ಹಾರ್ಟ್' (ಇದು ನಿನ್ನ ಸ್ವೀಟ್‌ಹಾರ್ಟ್ ಅಲ್ಲ) ಅಂತ ಫೋನಿನಲ್ಲಿ ಅಬ್ಬರಿಸಿಯೇ ಬಿಟ್ಟ ಸಲ್ಮಾನ್. ಆಗ ನೀಲ್‌ಗೆ ಗೊತ್ತಾಯಿತು, ಕತ್ರಿನಾಳ ಫೋನ್‌ನಿಂದ ಮಾತನಾಡುತ್ತಿರುವುದು ಸಲ್ಮಾನ್ ಅಂತ. ತಕ್ಷಣ, ಆತ ಸಹಜವಾಗಿಯೇ, 'ಐ ಆಮ್ ಸಾರಿ ಸರ್' ಅಂತ ಸಾರಿ ಕೇಳಿದನಂತೆ. ಆದರೂ, ಸಮಾಧಾನವಾಗದ ಸಲ್ಮಾನ್‌ ಖಾನ್ ನಂತರ ನೀಲ್‌ಗೆ, 'ಇನ್ನೊಬ್ಬರ ಗರ್ಲ್‌ಫ್ರೆಂಡ್‌ಗಳನ್ನೆಲ್ಲ ಸ್ವೀಟ್‌ಹಾರ್ಟ್ ಅಂತ ಕರೀಬೇಡ' ಅಂತ ಧಮಕಿ ಹಾಕಿ ಫೋನಿಟ್ಟನಂತೆ.

ಈ ಘಟನೆ ನಡೆದ ಮೇಲೆ ನೀಲ್‌ಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಸಲ್ಮಾನ್ ಎಲ್ಲಾದರೂ ಕಾಣಸಿಕ್ಕರೆ ಆತ ನನ್ನನ್ನು ಏನು ಮಾಡಿಯಾನು, ಆತನ ಪ್ರತಿಕ್ರಿಯೆ ಹೇಗಿರಬಹುದಪ್ಪಾ ಅಂತ ಆತ ಯೋಚಿಸುತ್ತಿರುವಾಗಲೇ ಸಮಾರಂಭವೊಂದರಲ್ಲಿ ಸಲ್ಮಾನ್ ಭೇಟಿಯಾಯಿತು. ವಿಚಿತ್ರವೆಂದರೆ, ನೀಲ್ ಜತೆಗೆ ಸಲ್ಮಾನ್ ಭಾರೀ ಚೆನ್ನಾಗೇ ಮಾತಾಡಿದನಂತೆ. ಇದನ್ನು ಕಂಡು ನೀಲ್‌ಗೆ ಇದು ಕನಸೋ, ನನಸೋ ಅಂತಲೇ ಅರ್ಥವಾಗಿಲ್ಲ. ಸಲ್ಮಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀಲ್‌ ತುಂಬ ಇಷ್ಟಪಡುವ ತನ್ನ ಚಾರಿಟಿ ಸಂಸ್ಥೆಯ 'ಬೀಯಿಂಗ್ ಹ್ಯೂಮನ್' ಎಂಬ ಬರಹದ ಶರ್ಟ್‌ಗಳನ್ನು ಗಿಫ್ಟ್ ನೀಡಿದನಂತೆ. ಹಳೆಯ ಫೋನ್ ವಿಷಯವನ್ನು ಮಾತನಾಡಲೇ ಇಲ್ಲವಂತೆ.

ಇಷ್ಟೆಲ್ಲಾ ನಡೆದ ಮೇಲೆ ನೀಲ್ ಹೇಳುವಂತೆ, 'ಮೊಬೈಲ್‌ನಲ್ಲಿ ಅಂಥದ್ದೊಂದು ಘಟನೆ ನಡೆದುದು ನಿಜ. ಆದರೆ, ಸಲ್ಮಾನ್ ಭೇಟಿಯಾದ ಮೇಲೆ ನಾನು ಅವರ ಫ್ಯಾನ್ ಆಗಿಬಿಟ್ಟೆ. ಆತನನ್ನು ತುಂಬ ಇಷ್ಟವಾಯಿತು. ಈಗ ಕತ್ರಿನಾಳನ್ನು ಮಾತ್ರ ಸ್ವೀಟ್‌ಹಾರ್ಟ್ ಅಂತ ಕರೆಯೋದಿಲ್ಲ. ಕತ್ರಿನಾ ಸಲ್ಮಾನ್ ಇಬ್ಬರನ್ನೂ ಸೇರಿ ಸ್ವೀಟ್‌ಹಾರ್ಟ್ಸ್ ಅಂತ ಕರೆಯುತ್ತೇನೆ' ಅಂತ ಮತ್ತೆ ತಮಾಷೆಯ ನಗೆ ಚಿಮ್ಮಿಸುತ್ತಾರೆ.

ಇವೆಲ್ಲಾ ನಡೆದರೂ, ಕತ್ರಿನಾಗೆ ಕೇಳಿದರೆ, ಆಕೆ ಮಾತ್ರ 'ವಾಟ್ ರಬ್ಬಿಶ್!, ಇಂಥದ್ದೆಲ್ಲ ನಡೆದೇ ಇಲ್ಲ' ಅಂತ ಹೇಳಿದ್ದಾಳಂತೆ!!!
Katrina Kaif, Niel Nitin Mukesh
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಕತ್ರಿನಾ ಕೈಫ್, ನೀಲ್ ನಿತಿನ್ ಮುಖೇಶ್, ಕ್ಲಾಡಿಯಾ