ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮತ್ತೆ ಅಪ್ಪ ಆಗಲಿರುವ ಅಮೀರ್ ಖಾನ್! (Aamir Khan | Kiran Rao | Breach Candy Hospital | Reena Dutta)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಅಮೀರ್ ಖಾನ್ ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಅಪ್ಪನಾಗಲಿದ್ದಾರೆ. ಇದರಲ್ಲೇನಿದೆ ವಿಶೇಷ ಅಂತೀರಾ? ಅಮೀರ್ ಈ ಹಿಂದೆ ಎರಡು ಮಕ್ಕಳನ್ನು ಹೊಂದಿದ್ದರೂ, ಈಗ ಅಪ್ಪನಾಗುತ್ತಿರುವುದು ಎರಡನೇ ಮದುವೆಯಾದ ಮೇಲೆ.

ಲಗಾನ್ ಚಿತ್ರದ ವೇಳೆ ಸಹ ನಿರ್ದೇಶಕಿಯಾಗಿದ್ದ ಕಿರಣ್ ರಾವ್ ಜತೆ ಪ್ರೀತಿಯಲ್ಲಿ ಬಿದ್ದ ಅಮೀರ್‌ಖಾನ್ 2002ರಲ್ಲಿ ತನ್ನ ಪತ್ನಿ ರೀನಾ ದತ್ತಾಗೆ ವಿಚ್ಛೇದನ ನೀಡಿ 2005ರಲ್ಲಿ ಕಿರಣ್ ರಾವ್ ಕೈಹಿಡಿದಿದ್ದರು. ಈಗ ಕಿರಣ್ ರಾವ್ ಗರ್ಭಿಣಿಯಂತೆ. ಮೂರು ತಿಂಗಳೂ ಆಗಿದೆಯಂತೆ. ಅಮೀರ್ ಖಾನ್ ಅಂತೂ ಫುಲ್ ಖುಷ್.

ಈ ಹಿಂದೆಯೇ ಕಿರಣ್ ರಾವ್ ಗರ್ಭಿಣಿ ಎಂಬ ವದಂತಿ ಹಬ್ಬಿಕೊಂಡರೂ ಅದು ಅಧಿಕೃತವಾಗಿರಲಿಲ್ಲ. ಈಗ ಅದು ಅಧಿಕೃತಗೊಂಡಿದೆ. ಮೂಲಗಳ ಪ್ರಕಾರ ಮೇ 31ರಂದು ಕಿರಣ್ ರಾವ್‌ ಜ್ವರದ ಕಾರಣದಿಂದ ದಕ್ಷಿಣ ಮುಂಬೈನಲ್ಲಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯ ವೇಳೆ ಕಿರಣ್ ರಾವ್‌ ಮೂರು ತಿಂಗಳ ಗರ್ಭಿಣಿ ಎಂದು ದೃಢಪಟ್ಟಿದೆಯಂತೆ. ಆಸ್ಪತ್ರೆ ಮೂಲಗಳ ಪ್ರಕಾರ ಒಂದು ಒಂದು ವಾರ ಕಾಲ ಕಿರಣ್ ಆಸ್ಪತ್ರೆಯಲ್ಲೇ ಇದ್ದು ಈಗಷ್ಟೆ ಮನೆಗೆ ಮರಳಿದ್ದಾರಂತೆ.

ವಿಚಿತ್ರವೆಂದರೆ 2005ರಿಂದಲೇ ಆಗಾಗ ಕಿರಣ್ ರಾವ್ ಗರ್ಭಿಣಿಯಂತೆ ಎಂಬ ಗಾಸಿಪ್ಪುಗಳು ಸುಳಿದಾಡುತ್ತಿತ್ತು. ಆದರೆ, ಅದು ನಿಜವಾಗಿರಲಿಲ್ಲ. ಆದರೆ ಈ ಬಾರಿಯ ಗಾಸಿಪ್ ಮಾತ್ರ ನಿಜವಾಗಿದೆ.

ಅಮೀರ್ ಖಾನ್ ಕೂಡಾ ತುಂಬ ಖುಷಿಯಾಗಿದ್ದಾರಂತೆ. ಒಂದು ವಾರ ಕಿರಣ್ ರಾವ್ ಇದ್ದ ಆಸ್ಪತ್ರೆಗೆ ದಿನವೂ ರಾತ್ರಿ ಒಂಭತ್ತರ ನಂತರವೇ ಅಮೀರ್ ಖಾನ್ ಭೇಟಿಯಾಗುತ್ತಿದ್ದರಂತೆ. ಜನರಿಂದ ಹಾಗೂ ಗಾಸಿಪ್ಪುಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದರು ಎನ್ನಲಾಗಿದೆ.

ಏನೇ ಆಗಲಿ, ಕಳೆದ ವರ್ಷ ತಾರೇ ಜಮೀನ್ ಪರ್ ಆದರೆ, ಮುಂದೆ ಅಮೀರ್‌ಗೆ ಪಾಪು ಜಮೀನ್ ಪರ್ ಆಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್, ಬಾಲಿವುಡ್