ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕಂಗನಾ- ಅಧ್ಯಾಯನ್ ಪ್ರೇಮ ಅಧ್ಯಾಯಕ್ಕೆ ಪೂರ್ಣವಿರಾಮ! (Kangana Ranaut | Adhyayan Suman | Shekhar Suman | Raaz)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕಂಗನಾ ಎಂಬ ಬಾಲಿವುಡ್ ಅಂಗನೆ ಹಾಗೂ ಅಧ್ಯಾಯನ್ ಸುಮನ್ ಎಂಬ ಬಾಲಿವುಡ್ ನವತರುಣನ ಮಧ್ಯೆಯೂ ಇದ್ದ ಪ್ರೇಮದ ಅಧ್ಯಾಯ ಖತಂ ಆಗಿದೆ. ಅಧ್ಯಾಯನ್ ಜತೆಗೆ ಸಹನಾ ಗೋಸ್ವಾಮಿ, ಅಂಜನಾ ಸುಖಾನಿ ಎಂಬ ಸಾಲು ಸಾಲು ಹೆಸರು ಕೇಳಿಬರುತ್ತಲೇ ಈ ಇಬ್ಬರ ಸಂಬಂಧದ ಗೋಡೆಯಲ್ಲಿ ಗೆದ್ದಲು ಹರಿದಾಡಲು ಆರಂಭವಾಗಿತ್ತು. ಈಗ ಆ ಗೋಡೆ ದೊಪ್ಪನೆ ಕುಸಿದು ಬೀಳುವ ಮೂಲಕ ಕಂಗನಾ ರಾಣಾವತ್ ಎಂಬ ಫ್ಯಾಷನ್ ಬೆಡಗಿಯ ಪ್ರೇಮಸೌಧ ಕಳಚಿದೆ. ಮತ್ತೆ ಅದೇ ಗೋಡೆಯನ್ನು ರಿಪೇರಿ ಮಾಡುವ ಯೋಚನೆಯೂ ಈ ಇಬ್ಬರಿಗೂ ಇಲ್ಲವಂತೆ..! ಯಾಕೆಂದರೆ, ಪ್ರೇಮಸೌಧವನ್ನು ಇಬ್ಬರೂ ಕೂತು ಮಾತನಾಡಿಯೇ ಉರುಳಿಸಿದ್ದಂತೆ!!!

ರಾಝ್-2 ಚಿತ್ರದಲ್ಲಿ ಆರಂಭವಾಗಿದ್ದ ಕಂಗನಾ ಹಾಗೂ ಅಧ್ಯಾಯನ್ ಸಂಬಂಧ ಬಾಲಿವುಡ್‌ನಲ್ಲಿ ಅವರಿಬ್ಬರೇ ಖುಲ್ಲಂಖುಲ್ಲಾ ಆಗಿ ಅಧಿಕೃತಗೊಳಿಸಿದ್ದರು. ಅಷ್ಟೇ ಅಲ್ಲ, ಯದ್ವಾತದ್ವಾ ಬೇಡಿಕೆ ಕುದುರಿಸಿಕೊಂಡಿರುವ ಕಂಗನಾ ತನ್ನ ಜತೆ ಅಧ್ಯಾಯನ್‌ನನ್ನು ಹೀರೋ ಮಾಡಿದರೆ ಮಾತ್ರ ತಾನು ನಟಿಸುವುದು ಎಂಬ ಹೊಸ ಶರತ್ತನ್ನು ನಿರ್ಮಾಪಕ ನಿರ್ದೇಶಕರಿಗೆ ಹಾಕಿದ್ದಳು. ಆದರೆ ಹೇಳಿಕೊಳ್ಳುವಂತಹ ಪ್ರತಿಭಾನ್ವಿತನಾಗಿರದ ಅಧ್ಯಾಯನ್ ಸುಮನ್‌ನನ್ನು ನಾಯಕನಾಗಿ ತೆಗೆದುಕೊಳ್ಳಲು ಹಲವರಿಗೆ ಇಷ್ಟವಾಗದೆ ಬಂದದಾರಿಗೆ ಸುಂಕ ನೀಡದೆ ಹೊರಟುಹೋಗಿದ್ದರು.

ಈಗ ಅದೇ ಕಂಗನಾ ತನ್ನ ಹಾಗೂ ಅಧ್ಯಾಯನ್ ನಡುವೆ ಇನ್ನೂ ಏನೇನೂ ಇರುವುದಿಲ್ಲ ಎಂದು ಅಧಿಕೃತಗೊಳಿಸಿದ್ದಾಳೆ. ಜತೆಗೆ ತಾವಿಬ್ಬರೂ ಗಂಭೀರವಾಗಿ ಬೇರೆಬೇರೆಯಾಗುವ ಬಗ್ಗೆ ಗಂಟೆಗಟ್ಟಲೆ ಕೂತು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಹೈದರಾಬಾದ್‌ನಲ್ಲಿ ಶೂಟಿಂಗ್‌ಗೆಂದು ಹೋದ ಕಂಗನಾ ಅಲ್ಲಿ ಅಧ್ಯಾಯನ್ ಜತೆಗೆ ರಾತ್ರಿ ಊಟಕ್ಕಾಗಿ ಭೇಟಿಯಾಗಿ, ಜತೆಗೇ ಉಂಡು, ಬೇರೆಬೇರೆಯಾಗಿ ಬಂದಿದ್ದಾರೆ ಎಂದೂ ಮೂಲಗಳು ಹೇಳಿವೆ.

IFM
ಅಂದಹಾಗೆ, ಕಂಗನಾಳ ಆಪ್ತ ಮೂಲಗಳ ಪ್ರಾರ, ಕಂಗನಾಗೆ ಇನ್ನೂ ಹೃದಯಾಂತರಾಳದಲ್ಲಿ ಅಧ್ಯಾಯನ್ ಬಗ್ಗೆ ಪ್ರೀತಿಯಿದೆಯಂತೆ. ಅಷ್ಟೇ ಅಲ್ಲ, ಅಧ್ಯಾಯನ್ ಜತೆಗೆ ಸಂಬಂಧ ಕಡಿದುಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ. ಆದರೆ ಅಧ್ಯಾಯನ್ ಸುಮನ್‌ಗೆ ಕಂಗನಾ ಜತೆಗೆ ಸಂಬಂಧ ಮುರಿದು ಬೇರೆಯಾಗಲು ಹೆಚ್ಚು ಆಸೆಯಿದ್ದುದರಿಂದ ಅವರಿಬ್ಬರೂ, ಕೂತು ಮಾತನಾಡಿ ಬೇರೆಬೇರೆಯಾದರು ಎಂದು ಮೂಲಗಳ ವಿವರಣೆ.

ಸರಿ. ಬೇರೆಯಾದುದೇನೂ ನಿಜ. ಇಬ್ಬರೂ ಕೂತು ಮಾತನಾಡಿ ಬೇರೆಯಾಗಲು ನಿರ್ಧರಿಸಿದ ಹಿಂದಿರುವ ಕಾರಣವೇನಪ್ಪಾ ಅಂದರೆ, ಅಂಧ್ಯಾಯನ್ ತಣ್ಣನೆ, ನಾವಿಬ್ಬರೂ ನಮ್ಮ ನಮ್ಮ ಕೆರೆಯರ್ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕೆಂದು ನಿರ್ಧರಿಸಿದ್ದೇವೆ. ಹಾಗಾಗಿ ಇಂಥ ಒಂದು ಗಂಭೀರ ಸಂಬಂಧ ಮುಂದುವರಿಸುವುದು ಈ ಹಂತದಲ್ಲಿ ಸರಿಯಲ್ಲ ಎಂದು ನಿರ್ಧರಿಸಿದೆವು. ನಾವಿನ್ನೂ ಸಾಕಷ್ಟು ಕಲಿಯಬೇಕಿದೆ. ಇಬ್ಬರೂ ಅದಕ್ಕೆ ಒತ್ತು ನೀಡುತ್ತೇವೆ ಎನ್ನುತ್ತಾನೆ.

ಅಬ್ಬಾ...! ಎಂಥಾ ಪ್ರೌಢತೆಯಪ್ಪಾ... ಅಂತೀರಾ? ಇಷ್ಟಕ್ಕೇ ಮುಗಿದಿದ್ದರೆ, ಹೀಗೆ ಹೇಳಬಹುದು. ಆದರೆ ಕಥೆ ಇನ್ನೂ ಇದೆ. ಕಂಗನಾ ಜತೆ ಪ್ರೇಮ ಸಂಬಂಧ ಕಡಿದುಕೊಳ್ಳಲು ಆಸೆಪಟ್ಟ ಅಧ್ಯಾಯನ್ ಸುಮನ್ ಹಿಂದೆ ಇರುವ ಕಾಣದ ಕೈ ಯಾರು ಎಂಬ ಪ್ರಶ್ನೆ ಕೇಳಿದರೆ ಧುತ್ತಂತ ಎದುರು ನಿಲ್ಲುವುದು ಅಧ್ಯಾಯನ್ ಸುಮನ್‌ರ ಅಪ್ಪ ರಾಜಕಾರಣಿ ಹಾಗೂ ಖ್ಯಾತ ಟಿವಿ ನಿರೂಪಕ ಶೇಖರ್ ಸುಮನ್!

ಅಪ್ಪ ಶೇಖರ್‌ ಸುಮನ್‌ಗೆ ಮಗ ಕಂಗನಾ ಜತೆ ತಿರುಗಾಡುವುದು ಇಷ್ಟವಿರಲಿಲ್ಲವಾದ್ದರಿಂದ ಅಪ್ಪನ ಒತ್ತಡಕ್ಕೆ ಮಣಿದು ಅಧ್ಯಾಯನ್ ಹಾಗೆ ಮಾಡಿದ್ದಾರೆಂಬ ಗುಲ್ಲೂ ಇದೆ. ಆದರೆ, ಶೇಖರ್ ಸುಮನ್ ಮಾತ್ರ, ಇದು ಸಂಪೂರ್ಣ ನನ್ನ ಮಗನ ನಿರ್ಧಾರ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ. ಆತನ ನನ್ನ ಮಗನಾದರೂ, ಆತನ ಖಾಸಗಿ ವಿಷಯದಲ್ಲಿ ನಾನು ತಲೆಹಾಕುವುದಿಲ್ಲ ಎನ್ನುತ್ತಾರೆ. ಜತೆಗೆ, ಅಧ್ಯಾಯನ್ ಇನ್ನೂ ಸಣ್ಣ ಮಗು. ಮದುವೆ, ಸಂಬಂಧ ಎಲ್ಲಾ ಇನ್ನೂ 12 ವರ್ಷದ ನಂತರವೇ. ಯಾಕೆಂದರೆ, ಅವನಿಗಿನ್ನೂ 21ರ ವಯಸ್ಸು ಎನ್ನುತ್ತಾರೆ ಅಪ್ಪ ಶೇಖರ್ ಸುಮನ್.

ಹೋಗಲಿ ಬಿಡಿ. ಅಪ್ಪ- ಮಗನ ವಿಷಯ ಹಾಗಿರಲಿ. ಇತ್ತ ಕಂಗನಾಳನ್ನು ಕೇಳಿದರೆ, ನಾವಿಬ್ಬರೂ, ಕೂತು ಮಾತನಾಡಿ ಬೇರೆಯಾಗಲು ನಿರ್ಧರಿಸಿದ್ದೇನೋ ನಿಜ. ಆದರೆ, ಮೊದಲು ಈ ನಿರ್ಧಾರ ಬಂದಿದ್ದು, ಅಧ್ಯಾಯನ್‌ ಕಡೆಯಿಂದ. ಆತ ಬೇರೆಯಾಗಲು ಇಷ್ಟಪಟ್ಟ. ನನಗಿದು ಶಾಕ್ ತರುವ ವಿಚಾರವಾಗಿತ್ತು. ಆದರೆ, ಆತನಿಗೆ ಹಾಗನಿಸಿದರೆ ಅದರ ವಿರುದ್ಧ ನಾನು ಹೋಗುವುದಿಲ್ಲ. ಆತ ಇಷ್ಟಪಟ್ಟಂತೆ ಬೇರೆಯಾಗಲು ಒಪ್ಪಿಗೆಕೊಟ್ಟೆ. ಆತನಿಗೆ ಒಳ್ಳೆಯದಾಗಲಿ ಎನ್ನುತ್ತಾಳೆ ಈ ನಶೆಯೇರಿಸುವ ಕನ್ಯೆ ಕಂಗನಾ.

ಅಂದಹಾಗೆ, ಕಂಗನಾ ಈಗ ಜುಹು ಬೀಚ್‌ನಲ್ಲಿ ಬಾಟಲಿ ಹಿಡಿದು ಗುಂಗುರು ಕೂದಲ ಸುರುಳಿನಲ್ಲಿ ನಶೆಯೇರಿಸಿ ಕೂತು... 'ತೂಹಿ ಮೇರಾ ಶಬ್ ಹೆ...' ಅಂತ ಹಾಡುತ್ತಿದ್ದಾಳೋ ಅಂತ ಹಲವರಿಗೆ ಸಂಶಯ. ಆದರೆ ಅಧಿಕೃತವಾಗಿ ಆಕೆ ಶೂಟಿಂಗ್‌ನಲ್ಲಿ ಬ್ಯುಸಿಯಂತೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಂಗನಾ ರಾಣಾವತ್, ಅಧ್ಯಾಯನ್ ಸುಮನ್, ಶೇಖರ್ ಸುಮನ್, ರಾಝ್