ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬರಲಿದೆ ವರ್ಮಾರ ತ್ರೀಡಿ 'ವಾರ್ನಿಂಗ್'! (Ram Gopal Varma | 3D | Warning | Riteish Deshmukh)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಪ್ರತಿಭೆಗಿಂತಲೂ ಹೆಚ್ಚು ತನ್ನ ಹುಚ್ಚುತನಗಳಿಂದಲೇ ವಿವಾದಗಳ ಪರಮಾವಧಿಯಲ್ಲಿ ಸಿಲುಕಿರುವುದನ್ನೇ ಖುಷಿಪಡುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಇದೀಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಊರ್ಮಿಳಾನ್ನು ಹಾಕಿಕೊಂಡು ಭೂತ್‌ನಲ್ಲಿ ಹೆದರಿಸಿದ್ದಾಯಿತು. ಫೂಂಕ್‌ನಲ್ಲಿ ಗಾಬರಿಗೊಳಿಸಿದ್ದೂ ಆಯಿತು. ಈಗ ವರ್ಮಾ ರಿತೇಶ್ ದೇಶ್‌ಮುಖ್‌ರನ್ನು ಬಳಸಿಕೊಂಡು ಪ್ರೇಕ್ಷಕರಲ್ಲಿ ಭಾರೀ ನಡುಕ ಹುಟ್ಟಿಸಲಿದ್ದಾರೆ.

ಇದೂ ಕೂಡಾ ರಾಮ್‌ಗೋಪಾಲ್ ವರ್ಮಾರ ಹುಚ್ಚುತನ ಎಂದು ಅಪಹಾಸ್ಯ ಮಾಡಬೇಡಿ. ಈ ಬಾರಿ ಅವರು ಪ್ರೇಕ್ಷಕರನ್ನು ಹೆದರಿಸಲು ಹೊರಟಿರುವುದು ಮಾಮೂಲಿ ಚಿತ್ರದಿಂದ ಅಲ್ಲ. ಬದಲಾಗಿ 3ಡಿ ಚಿತ್ರದ ಮೂಲಕ. ರಾಮ್ ಗೋಪಾಲ್ ವರ್ಮಾ ಇದೇ ಮೊದಲ ಬಾರಿಗೆ 3ಡಿ ಹಾರರ್ ಚಿತ್ರವೊಂದನ್ನು ತಯಾರಿಸಲು ಹೊರಟಿದ್ದಾರೆ. ಚಿತ್ರದ ಹೆಸರು 'ವಾರ್ನಿಂಗ್'. ಚಿತ್ರಕ್ಕೆ ನೀಡಿರುವ ಟ್ಯಾಗ್‌ಲೈನ್ 'ಯು ಮೈಟ್ ಡೈ..!'

ಇವಿಷ್ಟಲ್ಲದೆ, ನೀವು ಎಲ್ಲ ಅನುಭವ ಪಡೆದಿದ್ದೀರಿ ಎಂದು ಭಾವಿಸುವುದಾದರೆ, ನೀವಿನ್ನೂ ಭಯದ ಅನುಭವ ಪಡೆದುಕೊಳ್ಳಬೇಕು. ವಾರ್ನಿಂಗ್‌ಗಾಗಿ ಕಾಯಿರಿ ಎಂದು ಈಗಲೇ ಇದಕ್ಕೆ ಪೂರಕ ಸ್ಲೋಗನ್ ಕೂಡ ವರ್ಮಾ ಕೊಟ್ಟಿದ್ದಾರೆ. ವಾರ್ನಿಂಗ್ ಎಂದು ಹೆಸರು ಎಂದು ಹೇಳುತ್ತಲೇ ಪ್ರೇಕ್ಷಕರಿಗೆ ಚೆನ್ನಾಗೇ ವಾರ್ನಿಂಗ್ ಕೊಟ್ಟಿದ್ದಾರೆ ವರ್ಮಾ. ವರ್ಮಾ ಹೇಳುವಂತೆ ಇದೊಂದು ನಾಲ್ಕು ಡಯಮೆನ್ಶನ್ 4ಡಿ ಪರಿಣಾಮ ನೀಡುತ್ತದೆ. ನಾಲ್ಕನೇ ಡಯಮೆನ್ಶನ್ ಎಂದರೆ ಡೆತ್ ಅರ್ಥಾತ್ ನೀವು ಸಾಯಲೂಬಹುದು ಎಂದು ಹೆದರಿಸಿದ್ದಾರೆ ವರ್ಮಾ.

ಚಿತ್ರಕ್ಕೆ ಹೆಸರು ಮಾತ್ರ ಇಡಲಾಗಿದೆ. ಇನ್ನೂ ಪಾತ್ರವರ್ಗ ಆಯ್ಕೆಯಾಗಿಲ್ಲ. ಕೇವಲ ರಿತೇಶ್ ದೇಶ್‌ಮುಖ್ ಒಬ್ಬರೇ ಆಯ್ಕೆ ಮಾಡಲಾಗಿದೆ. ಶೀಘ್ರವೇ ಪಾತ್ರಗಳಿಗೆ ಸೂಕ್ತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವರ್ಮಾ ಹೇಳಿದ್ದಾರೆ.

IFM
ಹಾರರ್ ಚಿತ್ರಗಳನ್ನು 3ಡಿ ರೂಪದಲ್ಲಿ ತರುವುದು ಸುಲಭದ ಸವಾಲೇನೂ ಅಲ್ಲ. ವಾರ್ನಿಂಗ್ ಹೊರಬಂದರೆ, ಇದು ವರ್ಮಾರ ಮೊದಲ 3ಡಿ ಹಾರರ್ ಚಿತ್ರವಾಗುತ್ತದೆ. ಆದರೆ ಅದಕ್ಕಾಗಿ ವರ್ಮಾ ಸಾಕಷ್ಟು ಪೂರ ತಯಾರಿಗಳನ್ನು ಮಾಡಲೇಬೇಕು.

ಅದೇನೇ ಇರಲಿ. ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದರೂ, ಸಿನಿಮಾ ರಂಗದಲ್ಲಿ ವಿಶಿಷ್ಟ ಪ್ರಯೋಗಗಳಿಗೆ ಹೆಸರಾದ ವರ್ಮಾ ಭಯಾನಕತೆಯನ್ನು ತೆರೆಯ ಮೇಲೆ ತರುವಲ್ಲಿ ಸಾಕಷ್ಟು ಪಳಗಿದ್ದಾರೆ. ಈ ಹಿಂದೆ ಹಲವು ಹಾರರ್ ಚಿತ್ರಗಳನ್ನು ಹೊರತಂದಿರುವ ವರ್ಮಾ ಈ ಬಾರಿಯ 3ಡಿ ಹಾರರ್‌ಗೆ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

ಆದರೂ 3ಡಿ ಹಾರರ್ ಚಿತ್ರ ತರಲು ವರ್ಮಾ ಸಾಕಷ್ಟು ಸವಾಲುಗಳನ್ನು ಎದುರಿಸಲೇಬೇಕು. ಇತರ ಚಿತ್ರಗಳಲ್ಲಿ ಮಾಡುವಂತೆ ನೆರಳಿನಲ್ಲಿಯೂ ಇದರ ಶೂಟಿಂಗ್ ಸಲ್ಲುವುದಿಲ್ಲ. ಬೆಳಕಿನ ಪ್ರಖರತೆ ಬೇಕೇ ಬೇಕು. ಸಾಕಷ್ಟು ಬೆಳಕಿದ್ದಾಗಲೇ ಶೂಟಿಂಗ್ ನಡೆಸಬೇಕು. ಅಷ್ಟೇ ಅಲ್ಲ. 3ಡಿ ಚಿತ್ರವನ್ನು ಭಾರತೀಯ ನೆಲೆಗಟ್ಟಿನಲ್ಲಿ ಥಿಯೇಟರ್‌ಗೆ ತರುವುದೂ ಅಂತಸ ಸುಲಭವೇನಲ್ಲ. ವರ್ಮಾ ಇರೋದೇ ವಿವಾದಗಳನ್ನು ಸವಾಲುಗಳನ್ನು ಎದುರಿಸುವುದಕ್ಕೆ ಎಂಬ ಅನ್ವರ್ಥವೇ ವರ್ಮಾರಿಗಿರುವಾಗ ವರ್ಮಾ ಇದಕ್ಕೆಲ್ಲ ಹೆದರಲಿಕ್ಕಿಲ್ಲ.

ವಿವಾದಿತ ರಣ್‌‌ಗೆ ಕಾದಂತೆ ವಾರ್ನಿಂಗ್‌ಗೂ ಕಾಯೋಣ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಮ್ ಗೋಪಾಲ್ ವರ್ಮಾ, ವಾರ್ನಿಂಗ್, 3ಡಿ, ರಿತೇಶ್ ದೇಶ್ಮುಖ್