ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅತ್ಯಾಚಾರ: ಬಾಲಿವುಡ್ ನಟ ಶೈನಿ ಅಹುಜಾ ಬಂಧನ (Shiney Ahuja | Shiney Ahuja | Andheri | Maid.)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ಉದಯೋನ್ಮುಖ ನಟ ಶೈನಿ ಅಹುಜಾರನ್ನು ತನ್ನ ಪರಿಚಾರಿಕೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಭಾನುವಾರ ರಾತ್ರಿ ಬಂಧಿಸಲಾಗಿದೆ. ನಟನ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷ ವಯಸ್ಸಿನ ಕೆಲಸದಾಕೆಯು ಶೈನಿ ವಿರುದ್ಧ ಅಂಧೇರಿ(ಪಶ್ಚಿಮ)ದ ಓಶಿವಾರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು ಭಾನುವಾರ ಸಂಜೆ ನೀಡಿದ್ದು, ಪೊಲೀಸರು ಅಹುಜಾರನ್ನು ಪ್ರಶ್ನಿಸುವುದಕ್ಕಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ತನಿಖೆ ಇನ್ನೂ ನಡೆಯುತ್ತಿರುವಾಗಲೇ ಶೈನಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಧೇರಿಯ ಕೋರ್ಟ್‌ಗೆ ಸೋಮವಾರ ಬೆಳಿಗ್ಗೆ ಹಾಜರುಪಡಿಸಲಾಗುವುದು. ವರದಿಗಳ ಪ್ರಕಾರ, ಪರಿಚಾರಿಕೆಯು ಅಹುಜಾ ನಿವಾಸದಲ್ಲಿ ಒಂದು ವರ್ಷದವರೆಗೆ ಕೆಲಸ ಮಾಡುತ್ತಿದ್ದಳು. ಮನೆಕೆಲಸಕ್ಕಾಗಿ ಅಹುಜಾ ಫ್ಲಾಟ್‌ಗೆ ಬಂದಿದ್ದಾಗಿ ಪರಿಚಾರಿಕೆ ಪೊಲೀಸರಿಗೆ ತಿಳಿಸಿದ್ದಾಳೆ.

ನಟನ ಪತ್ನಿ ಮನೆಯಲ್ಲಿಲ್ಲದ ವೇಳೆಯಲ್ಲಿ ತನ್ನ ಕೋಣೆಗೆ ಒಯ್ದು ಅತ್ಯಾಚಾರ ಮಾಡಿದನೆಂದು ಅವಳು ದೂರಿದ್ದಾಳೆಂದು ಎಫ್‌ಐಆರ್‌ನಲ್ಲಿ ಅವಳು ತಿಳಿಸಿದ್ದಾಳೆ. ಈ ಘಟನೆಯ ಬಳಿಕ ಆಘಾತಕ್ಕೆ ಒಳಗಾಗಿ ತನ್ನ ಸಂಬಂಧಿ ಮನೆಗೆ ತೆರಳಿ ಅವರ ಜತೆ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾಳೆ.

ದೂರು ದಾಖಲಾದ ಕೂಡಲೇ ನಾಗಪದಾ ಆಸ್ಪತ್ರೆಯಲ್ಲಿ ಯುವತಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆರಂಭಿಕ ಪರೀಕ್ಷೆಯು ಅತ್ಯಾಚಾರ ದೃಢಪಡಿಸಿದ್ದು, ತನಿಖಾಧಿಕಾರಿಗಳು ಯುವತಿಯ ವಯಸ್ಸನ್ನು ಇನ್ನೂ ದೃಢಪಡಿಸಿಕೊಳ್ಳಬೇಕಾಗಿದೆ. ಪರಿಚಾರಿಕೆಯ ಸಮ್ಮತಿ ಬಳಿಕ ಲೈಂಗಿಕ ಸಂಬಂಧ ಹೊಂದಿದ್ದಾಗಿ ಅಹುಜಾ ಹೇಳಿದ್ದು, ಯುವತಿ ಮಾತ್ರ ತನ್ನ ಮೇಲೆ ಬಲಾತ್ಕಾರ ಮಾಡಲಾಯಿತೆಂದು ದೂರಿದ್ದಾಳೆ.

36ರ ಹರೆಯದ ಶೈನಿ ಅಹುಜಾ ಸೈನ್ಯಕ್ಕೆ ಸೇರಬೇಕೆಂದಿದ್ದರೂ, ನಾಟಕದ ಗೀಳು ಅವರನ್ನು ಬಾಲಿವುಡ್‌ವರೆಗೂ ಎಳೆದುತಂದಿತ್ತು. 2005ರಲ್ಲಿ ಹಜಾರೋಂ ಖ್ವಾಯಿಶೇಂ ಐಸೀ ಅನ್ನುವ ಮೊದಲ ಸಿನಿಮಾ ಶೈನಿಯ ನಟನೆಗೆ ಹಲವು ಪ್ರಶಸ್ತಿಯ ಗರಿ ತಂದುಕೊಟ್ಟಿತ್ತು. ನಂತರ ಮಹೇಶ್ ಭಟ್ ಅವರ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಕಂಗನಾ ರಾಣಾವತ್ ಜತೆಗೆ ನಟಿಸಿದ ಶೈನಿ ಬಾಲಿವುಡ್ಡಿನಲ್ಲಿ ಗಟ್ಟಿಯಾಗಿ ತಳವೂರಿದರು. ಗ್ಯಾಂಗ್‌ಸ್ಟರ್ ಚಿತ್ರ ಭರ್ಜರಿ ಯಶಸ್ಸು ಗಳಿಸುವುದರೊಂದಿಗೆ ಉತ್ತಮ ನಟ ಪ್ರಶಸ್ತಿಯನ್ನೂ ತಂದಿತು. ನಂತರ ಮಹೇಶ್ ಭಟ್ ಪರ್ವೀನ್ ಬಾಬಿ ಅವರ ನೈಜ ರೊಮ್ಯಾಂಟಿಂಕ್ ಕಥನ ಆಧರಿಸಿದ ಒ ಲಮ್ಹೇ ಚಿತ್ರವೂ ಯಶಸ್ಸು ತಂದರೆ, ಝಿಂದಗಿ ರಾಕ್ಸ್ ಚಿತ್ರ ಕೈಕೊಟ್ಟಿತ್ತು. ಆಮೇಲೆ ಲೈಫ್ ಇನ್ ಮೆಟ್ರೋ ಚಿತ್ರ ಮತ್ತೆ ಉತ್ತಮ ಪ್ರಶಂಸೆ ಗಳಿಸುವ ಮೂಲಕ ಹಿಟ್ ಆಯಿತು. ಇವರ ಭೂಲ್‌ಬುಲಯ್ಯಾ, ಖೋಯಾ ಖೋಯಾ ಚಾಂದ್ ಚಿತ್ರಗಳಿಗೂ ಇವರ ನಟನೆಗೆ ಉತ್ತಮ ನಟ ಪ್ರಶಸ್ತಿ ದೊರೆತಿತ್ತು. ಅನುಮಪ್ ಅಹುಜಾರನ್ನು ವಿವಾಹವಾಗಿರುವ ಇವರಿಗೆ ಒಬ್ಬ ಮಗಳೂ ಇದ್ದಾಳೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಬಾಲಿವುಡ್, ಪರಿಚಾರಿಕೆ, ಬಂಧನ