ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶೈನಿ ಮಾಡಿದ್ದು ಪ್ರೀಪ್ಲಾನ್ ಅತ್ಯಾಚಾರವೇ!? (Shiney Ahuja | Anupam Ahuja | Rape Case | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಪೊಲೀಸರು ನೀಡುವ ವಿವರಗಳಿಂದ ಬಾಲಿವುಡ್ ನಟ ಶೈನಿ ಅಹುಜಾ ಮೊದಲೇ ಪ್ಲಾನ್ ಮಾಡಿ ಈ ಅತ್ಯಾಚಾರ ನಡೆಸಿದ್ದರೇ ಎಂಬ ಸಂಶಯ ಈಗ ಎದ್ದಿದೆ.

ಭಾನುವಾರ ಸಂಜೆ ಕೆಲಸದಾಕೆ ಶೈನಿ ಅಹುಜಾ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಳು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೈನಿ ತನ್ನನ್ನು ಬೆಡ್‌ರೂಂಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದಿರುವ ಕೆಲಸದಾಕೆ, ಶನಿವಾರವೇ ಶೈನಿ ತನಗೆ ಕೆಲವು ಆಮಿಷಗಳನ್ನೂ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ ಶೈನಿ ಅಹುಜಾ, ತಾನು ಅತ್ಯಾಚಾರ ಮಾಡಿದ ವಿಚಾರವನ್ನು ಹೊರಗೆ ಹೇಳಿದರೆ ನಿನ್ನನ್ನು ಕೊಲ್ಲುತ್ತೇನೆ ಎಂದೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಶೈನಿ ಅವರ ಪತ್ನಿ ಅನುಪಮ್ ಕಳೆದ ಒಂದು ತಿಂಗಳ ಹಿಂದೆ ಈ ಹೊಸ ಕೆಲಸದಾಕೆಯನ್ನು ನೇಮಿಸಿದ್ದರು. ಆದರೆ, ಈ ಪ್ರಕರಣ ನಡೆದಾಗ ಪತ್ನಿ ಅನುಪಮ್ ಮುಂಬೈಯಲ್ಲಿ ಇರಲಿಲ್ಲ. ಜತೆಗೆ ಅಡುಗೆ ಕೆಲಸದವರು ಹಾಗೂ ಇಡೀದಿನದ ಕೆಲಸ ಮಾಡುವವರೂ ಆ ಸಂದರ್ಭ ಇರಲಿಲ್ಲ. ಜತೆಗೆ ದೂರಿನಲ್ಲಿ ಕೆಲಸದಾಕೆ, ಈ ಪ್ರಕರಣದಿಂದ ನನಗೆ ಆಘಾತವಾಗಿದೆ. ಹೀಗಾಗಿ ತಾನು ತನ್ನ ಬಂಧುಗಳ ಮನೆಗೆ ನಡೆದ ಘಟನೆಯನ್ನು ವಿವರಿಸಿದ್ದೇನೆ ಎಂದು ಕೆಲಸದಾಕೆ ಹೇಳಿದ್ದಾಳೆ.

ಅಲ್ಲದೆ, ಶನಿವಾರವೇ ಶೈನಿ ಅಹುಜಾ ತನಗೆ ಮುಂಗಡವಾಗಿ ಹಣ ನೀಡಿದ್ದರು. ಆದರೆ ತಾನು ಅದನ್ನು ನಿರಾಕರಿಸಿದ್ದೆ ಎಂದಿರುವ ಕೆಲಸದಾಕೆ, ಭಾನುವಾರ ಎಂದಿನಂತೆ ಕೆಲಸಕ್ಕೆ ಬಂದಿದ್ದೆ. ಆಗ ಶೈನಿ ತಮ್ಮ ರೂಮಿನಿಂದ ನೀರು ಬೇಕೆಂದು ಕೇಳಿದರು. ನಾನು ಲೋಟದಲ್ಲಿ ನೀರು ಕೊಡಲು ಹೋದಾಗ ಅವರ ಕೋಣೆಯ ಚಿಲಕ ಹಾಕಿ ನಾನು ಹೊರಗೆ ಹೋಗದಂತೆ ತಡೆದರು. ಜತೆಗೆ ನನ್ನನ್ನು ತನ್ನ ಬೆಡ್ಡಿಗೆ ಎಳೆದು ಅತ್ಯಾಚಾರ ಮಾಡಿದ್ದಾರೆ. ಸುಮಾರು ಮೂರು ಗಂಟೆಗೆ ಹೀಗೆ ಚಿಲಕ ಹಾಕಿದ ಶೈನಿ ಅವರು ನನ್ನನ್ನು ಹೊರಹೋಗಲು ಬಿಟ್ಟಿದ್ದು ಐದು ಗಂಟೆಗೆ ಎಂದು ಆಕೆ ಹೇಳಿದ್ದಾಳೆ.

ಶೈನಿ ಮನೆಯಿಂದ ತಾನು ಅಳುತ್ತಾ ಹೊರಹೋದಾಗ ಪಕ್ಕದ ಮನೆಯವರು ಏನಾಯಿತೆಂದು ಕೇಳಿದ್ದಾರೆ. ಅವರಿಗೆ ಅಲ್ಪಸ್ವಲ್ಪ ಕಥೆಯನ್ನು ಆಕೆ ಹೇಳಿ ಹೊರ ನಡೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ತನ್ನ ನೆಂಟರ ಮನೆಗೆ ಹೋದ ಕೆಲಸದಾಕೆ ತನ್ನ ಅನುಭವ ಹೇಳಿದ್ದಾಳೆ. ಜತೆಗೆ ಅವರ ಸಹಾಯದಿಂದ ಓಶಿವಾರ ಪೊಲೀಸ್ ಠಾಣೆಗೆ ಹೋಗಿ ಸುಮಾರು ಸಂಜೆ ಏಳು ಗಂಟೆಯ ಹೊತ್ತಿಗೆ ದೂರು ದಾಖಲಿಸಿದ್ದಾಳೆ. ದೂರಿನ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಲು ಶೈನಿ ಅವರ ಮನೆಗೆ ಸುಮಾರು 8.30ರ ವೇಳೆಗೆ ಪೊಲೀಸರು ಬಂದಿದ್ದಾರೆ. ಆಗ ಶೈನಿ ತನ್ನ ಗೆಳೆಯರನ್ನು ತನ್ನ ಮನೆಗೆ ಇಂಗ್ಲೀಷ್ ಚಿತ್ರ ವೀಕ್ಷಿಸಲು ಕರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ವಿಭಾಗೀಯ ಪೊಲೀಸ್ ಉಪ ಆಯುಕ್ತ ನಿಕೇತ್ ಕೌಶಿಕ್ ಹೇಳುವಂತೆ, ಶನಿವಾರವೇ ಶೈನಿ ಅಹುಜಾ ಕೆಲಸದಾಕೆಯ ಮೇಲೆ ಕೆಲವು ಅನುಚಿತ ವರ್ತನೆ ತೋರಿದ್ದಾರೆ. ಆದರೆ ಕೆಲಸದಾಕೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಭಾನುವಾರ ಮನೆಯಲ್ಲಿ ಆಕೆ ಒಬ್ಬಳೇ ಸಿಗುವಂತೆ ಮಾಡಿದ್ದಾರೆ. ಇಡೀದಿನ ಕೆಲಸ ಮಾಡುವ ಕೆಲಸಗಾರರಿಬ್ಬರನ್ನೂ ಈ ಅತ್ಯಾಚಾರಕ್ಕೂ ಎರಡು ಗಂಟೆ ಮೊದಲು ಚರ್ಚ್‌ಗೆ ಕಳುಹಿಸಿದ್ದಾರೆ. ಮನೆಯಲ್ಲಿ ಈಕೆ ಒಬ್ಬಳೇ ಇರುವುದರಿಂದ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸುತ್ತಾರೆ.

ಸದ್ಯ ಪೊಲೀಸರು ಉಳಿದ ಇಬ್ಬರು ಕೆಲಸಗಾರರನ್ನು ಸಾಕ್ಷಿಯಾಗಿ ಬಳಿಕೊಳ್ಳಲಿದ್ದಾರೆ. ಶೈನಿ ಅವರ ಫ್ಲ್ಯಾಟನ್ನು ಸದ್ಯ ಪೊಲೀಸರು ಬೀಗಮುದ್ರೆ ಹಾಕಿದ್ದು, ಮನೆಯ ಮೇಲೆ ತನಿಖೆ ಸಂಪೂರ್ಣವಾದ ನಂತರ ಶೈನಿ ಕುಟುಂಬಕ್ಕೆ ನೀಡಲಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ತನಿಖೆ ನಡೆಯಲಿದೆ.

ಶೈನಿ ಅವರು ವಿಚಾರಣೆ ಸಂದರ್ಭ ಮೊದಲು ತಾನು ಏನೂ ಮಾಡಿಲ್ಲ ಎಂದು ಹೇಳಿದ್ದರು. ಹಲವು ಪ್ರಶ್ನಾವಳಿಯ ನಂತರ ಶೈನಿ ತಲೆತಗ್ಗಿಸಿ ಕಣ್ಣೀರು ಸುರಿಸಿ, ಘಟನೆ ನಡೆದುದು ಹೌದು. ಆದರೆ ತಾನು ಬಲಾತ್ಕಾರ ಮಾಡಿಲ್ಲ. ಆಕೆಯ ಸಮ್ಮತಿಯಿಂದ ಲೈಂಗಿಕ ಸಂಪರ್ಕ ನಡೆಸಿದ್ದೇನೆ ಎಂದು ಹೇಳಿದ್ದರು.

ಪೊಲೀಸರ ಪ್ರಕಾರ, ಶೈನಿ ಅವರು ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮ್ಮ ವಿಚಾರಣಾ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನೇ ಅವರು ನೀಡುತ್ತಿಲ್ಲ. ನಮಗೆ ಅವರು ಸರಿಯಾದ ಸಹಕಾರ ತೋರುತ್ತಿಲ್ಲ ಎಂದು ನಿಕೇತ್ ಕೌಶಿಕ್ ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಇನ್ನೂ ಹಲವು ವೈದ್ಯಪರೀಕ್ಷೆಗಳ ವರದಿ ಬರಲು ಕಾಯಲಾಗುತ್ತಿದೆ. ಈವರೆಗಿನ ವೈದ್ಯ ಪರೀಕ್ಷೆಗಳಿಂದ ಕೆಲಸದಾಕೆ ಅಪ್ರಾಪ್ತೆ (17 ವರ್ಷ) ಎಂಬು ದೃಢಪಟ್ಟಿದೆ. ಹೀಗಾಗಿ ಇದು ಇನ್ನೂ ಹಲವು ಸಂದಿಗ್ಧಗಳನ್ನು ಹುಟ್ಟಿಹಾಕಿದೆ. ಕೆಲಸದಾಕೆಯ ಮೇಲೆ ಬಲಾತ್ಕಾರ ನಡೆದಿರುವುದು ವೈದ್ಯ ಪರೀಕ್ಷೆಯ ವೇಳೆ ದೃಢಪಟ್ಟಿರುವುದರಿಂದ ಬಾಲಿವುಡ್ ನಟ ಶೈನಿ ಅಹುಜಾರನ್ನು ಇನ್ನೂ ನಾಲ್ಕು ದಿನಗಳ ಕಾಲ ಪೊಲೀಸ್ ಬಂಧನದಲ್ಲಿರಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅನುಪಮ್ ಅಹುಜಾ, ಬಾಲಿವುಡ್, ಅತ್ಯಾಚಾರ