ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶೈನಿ ಅಷ್ಟು ಸುಲಭವಾಗಿ ಹೊರಬರಲು ಸಾಧ್ಯವೇ ಇಲ್ಲ? (Shiney Ahuja | Anupam Ahuja | Rape Case | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಬಾಲಿವುಡ್ ನಟ ಶೈನಿ ಅಹುಜಾ ಮೇಲೆ ದಾಖಲಾದ ಅತ್ಯಾಚಾರ ಕೇಸಿನಿಂದ ತಪ್ಪಿಸಿಕೊಳ್ಳಲು ಶೈನಿಗೆ ಅಷ್ಟು ಸುಲಭವಾಗಿ ಸಾಧ್ಯವೇ ಇಲ್ಲ. ಅತ್ಯಾಚಾರ ಕೇಸು ಒಬ್ಬ ಪುರುಷನಿಗೆ ಮೆತ್ತಿಕೊಂಡರೆ ಅದೊಂದು ಭಯಂಕರ ಕೇಸೇ ಸರಿ. ಹೀಗಾಗಿ ಶೈನಿ ಅತ್ಯಾಚಾರ ಮಾಡಿದ್ದು ಹೌದೆಂದರೆ ಆತನಿಗೆ ಕನಿಷ್ಟವೆಂದು ಏಳು ವರ್ಷ ಜೈಲು ಶಿಕ್ಷೆ ಖಂಡಿತ ಎಂದು ಹಿರಿಯ ವಕೀಲರು ಭವಿಷ್ಯ ನುಡಿದಿದ್ದಾರೆ.

ಶೈನಿ ಅಹುಜಾ ವಿರುದ್ಧ ಈಗ ಸೆಕ್ಷನ್ 376ರಡಿ ಅತ್ಯಾಚಾರ ಎಂದು ದಾಖಲಾಗಿದೆ. ಜತೆಗೆ ಕೆಲಸದಾಕೆಯನ್ನು ಕೊಲ್ಲುವ ಬೆದರಿಕೆ ಹಾಕಿದ್ದಕ್ಕಾಗಿ ಈ ಕೇಸಿನ ಜತೆಗೆ ಐಪಿಸಿ ಸೆಕ್ಷನ್ 506ರಡಿ ಕೊಲೆಬೆದರಿಕೆ ಪ್ರಕರಣವೂ ದಾಖಲಾಗಿದೆ. ಸೆಕ್ಷನ್ 376ರಡಿ ಆರೋಪಿಗೆ ಕನಿಷ್ಟ ಏಳು ವರ್ಷಗಳ ಜೈಲು ಶಿಕ್ಷೆ ಸಿಗುವ ಸಂಭವವಿದೆ. ಅಲ್ಲದೆ, ಇದು 10 ವರ್ಷಗಳಿಗೆ ಮುಂದುವರಿಯುವ ಸಾಧ್ಯತೆಗಳೂ ಇವೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಯಾಗಲು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಸಾಕ್ಷಿಯೇ ಸಾಕು ಎನ್ನುತ್ತಾರೆ ವಕೀಲ ಸತೀಶ್ ಮಾನೆಶಿಂದೆ. ಇದು ರೇಪ್ ಅಲ್ಲ. ಒಮ್ಮತದ ಲೈಂಗಿಕ ಸಂಪರ್ಕ ಎಂದು ವಾದಿಸಿ ಸಾಧಿಸುವುದು ತುಂಬ ಕಷ್ಟ. ಒಂದು ವೇಳೆ ಅತ್ಯಾಚಾರಕ್ಕೆ ಒಳಗಾದವರ ವೈದ್ಯ ಪರೀಕ್ಷೆಯಲ್ಲಿ ಅತ್ಯಾಚಾರದ ಗಾಯ, ಗುರುತುಗಳು ಸಿಗದಿದ್ದರೂ, ಬಲಾತ್ಕಾರ ಕಾಣಿಸದೆ, ಅದು ಒಮ್ಮತದ ಲೈಂಗಿಕ ಸಂಪರ್ಕದಂತೆ ಕಂಡರೂ ಅದೊಂದನ್ನೇ ಪ್ರಮುಖ ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಒಮ್ಮತದ ಲೈಂಗಿಕ ಸಂಪರ್ಕ ಎಂದು ಸಾಧಿಸಬೇಕಿದ್ದರೆ, ದೂರವಾಣಿ ಕರೆಗಳ ದಾಖಲೆಗಳು ಬೇಕಾಗುತ್ತದೆ. ಅದರಲ್ಲೂ ಅತ್ಯಾಚರಕ್ಕೆ ಒಳಗಾಗಿದ್ದೇನೆ ಎಂದು ಹೇಳುವವರು, ಸಮಾಜದ ದುರ್ಬಲ ವರ್ಗದವರು ಹಾಗೂ ಬಡವರು ಎಂದಾದರೆ ಯಾವಾಗಲೂ ನ್ಯಾಯ ಅವರ ಕಡೆಗೇ ವಾಲುತ್ತದೆ. ಇಷ್ಟೇ ಅಲ್ಲ. ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳುವ ವ್ಯಕ್ತಿ ವೇಶ್ಯೆಯಾಗಿದ್ದರೂ, ಅದನ್ನು ಒಮ್ಮತದ ಲೈಂಗಿಕ ಸಂಪರ್ಕ ಎಂದು ಒಪ್ಪಿಕೊಳ್ಳಲು ನ್ಯಾಯಾಂಗದಲ್ಲಿ ಆಸ್ಪದಗಳೇ ಇಲ್ಲ ಎನ್ನುತ್ತಾರೆ ಸತೀಶ್.

ವಕೀಲ ಶ್ರೀಕಾಂತ್ ಭಟ್ ಹೇಳುವಂತೆ, ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡರೆ ಪುರುಷರು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಮಹಿಳೆಯರಿಗೇ ಅನುಕೂಲಗಳು ಜಾಸ್ತಿ. ಸೆಕ್ಷನ್ 114ಎಯ ಸಾಕ್ಷಿ ಕಾಯಿದೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಳ್ಳುವ ಮಹಿಳೆ ಕೋರ್ಟಿನಲ್ಲಿ ಇದು ತನ್ನ ಸಮ್ಮತಿ ಪಡೆಯದೆ ನಡೆಸಿದ ಲೈಂಗಿಕ ಸಂಪರ್ಕ ಎಂದು ಹೇಳುವ ಒಂದೇ ಸಾಕ್ಷಿಯಿಂದ ನ್ಯಾಯಾಲಯ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದೇ ಅಂಗೀಕರಿಸುತ್ತದೆ. ಹೀಗಾಗಿ ಕೆಲವೊಮ್ಮೆ ಇದರಿಂದ ಮುಗ್ಧ ಪುರುಷನೂ ಅತ್ಯಾಚಾರದ ಕೇಸಿನಲ್ಲಿ ಸಿಕ್ಕಿಕೊಳ್ಳುವ ಉದಾಹರಣೆಗಳಿವೆ. ಇಂಥ ಸಂದರ್ಭ, ದೂರು ನೀಡಿದ ಮಹಿಳೆ ಹಿಂದೆ ನಡೆಸಿದ ಲೈಂಗಿಕ ಸಂಪರ್ಕಗಳೂ ಕೂಡಾ ತನಿಖೆಗೆ ಒಳಪಡುವುದಿಲ್ಲ ಎನ್ನುತ್ತಾರೆ.

ಐಪಿಸಿ ಸೆಕ್ಷನ್ 375ರಡಿ, ಮಹಿಳೆಗೆ ಇಷ್ಟವಿಲ್ಲದಿದ್ದರೆ, ಆಕೆಯ ಸಮ್ಮತಿ ಪಡೆಯದಿದ್ದರೆ, ಆಕೆಯ ಮೇಲೆ ಒತ್ತಡ ಹಾಗೂ ಬೆದರಿಕೆಯೊಡ್ಡಿ ಆಕೆಯ ಸಮ್ಮತಿ ಪಡೆದು ಲೈಂಗಿಕ ಸಂಪರ್ಕ ನಡೆಸಿದರೆ, ತಾನು ಆಕೆಯ ಗಂಡನಲ್ಲ ಎಂದು ಗೊತ್ತಿದ್ದೂ ಆಕೆ ಮಾತ್ರ ಈತ ನನಗೆ ಗಂಡನಾಗುತ್ತಾನೆ ಎಂದು ತಿಳಿದು ಲೈಂಗಿಕ ಸಂಪರ್ಕಕ್ಕೆ ಸಹಮತ ವ್ಯಕ್ತಪಡಿಸಿದ್ದರೆ, ಮಾದಕ ವಸ್ತು ನೀಡಿ, ಅಥವಾ ವಶೀಕರಣ ಮತ್ತಿತರ ಕ್ರಿಯೆಗಳಿಂದ ಆಕೆಯಿಂದ ಸಮ್ಮತಿ ಪಡೆದರೆ ಅದೆಲ್ಲವನ್ನೂ ನ್ಯಾಯಾಲಯ ಅತ್ಯಾಚಾರ ಎಂದೇ ಪರಿಗಣಿಸುತ್ತದೆ.
Shiney Ahuja
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅನುಪಮ್ ಅಹುಜಾ, ಬಾಲಿವುಡ್, ಅತ್ಯಾಚಾರ