ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನನ್ನಿಂದ ತಪ್ಪಾಯಿತು, ಕ್ಷಮಿಸಿ: ಅತ್ತು ಗೋಗರೆದ ಶೈನಿ (Shiney Ahuja | Bollywood | Housemaid | Rape)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಬಾಲಿವುಡ್ ನಟ ಶೈನಿ ಅಹುಜಾ ಬಂಧಿತರಾದಾಗಿನಿಂದಲೂ ಸಣ್ಣ ಮಕ್ಕಳಂತೆ ಜೋರಾಗಿ ಅಳುತ್ತಿದ್ದಾರಂತೆ. ಪೊಲೀಸ್ ಮೂಲಗಳ ಪ್ರಕಾರ, ಶೈನಿ ನನ್ನಿಂದ ತಪ್ಪಾಗಿದೆ. ದಯವಿಟ್ಟು ನನ್ನನ್ನು ಮರೆತುಬಿಡಿ ಎಂದು ಕಾಲಿಗೆ ಬಿದ್ದು ಗೋಗರೆಯುತ್ತಿದ್ದಾರೆ ಎನ್ನಲಾಗಿದೆ.

ಆ ಕೆಲಸದಾಕೆಯ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ನನ್ನಲ್ಲಿರಲಿಲ್ಲ. ಆದರೆ ಅದೊಂದು ಆಕ್ಸಿಡೆಂಟ್. ನನ್ನಿಂದ ತಪ್ಪಾಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ಪೊಲೀಸ್ ವಿಚಾರಣೆ ವೇಳೆ ಶೈನಿ ಗೊಳೋ ಎಂದು ಅತ್ತಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಶೈನಿ ಅವರನ್ನು ವೈದ್ಯ ಪರೀಕ್ಷೆಗೆ ಕರೆದುಕೊಂಡು ಹೋಗುವಾಗಲೂ ಶೈನಿ ತೀವ್ರವಾಗಿ ಅಳುತ್ತಿದ್ದರು. ಹಾಗೂ ಪೊಲೀಸರ ಬಳಿ ನನ್ನನ್ನು ಬಿಟ್ಟುಬಿಡಿ. ನನ್ನನ್ನು ದಯವಿಟ್ಟು ಮರೆತುಬಿಡಿ ಎಂದು ಪುಟ್ಟ ಮಗುವಿನ ಹಾಗೆ ಅಳುತ್ತಾ ಗೋಗರೆಯುತ್ತಿದ್ದರು. ಕೆಲಸದಾಕೆಯ ಬಳಿ ತಾನು ಕ್ಷಮೆ ಕೇಳುತ್ತೇನೆ ಎಂದು ಕೋರುತ್ತಿರುವ ಶೈನಿ, ಅಕ್ಷರಶಃ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದು ನನ್ನನ್ನು ಈ ಪ್ರಕರಣದಿಂದ ಮುಕ್ತ ಮಾಡಿ ಎಂದು ಗೋಗರೆಯುತ್ತಿದ್ದರು ಎನ್ನಲಾಗಿದೆ.

ತಪ್ಪು ಮಾಡಿದ್ದು ಹೌದು: ಶೈನಿ ತಾನು ತಪ್ಪು ಮಾಡಿದ್ದು ಹೌದು ಎಂದು ಒಪ್ಪಿಕೊಂಡಿದ್ದರೂ, ಅದು ಕೆಲಸದಾಕೆಯ ಸಮ್ಮತಿಯಿಂದ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ತಾನು ಆಕೆಯ ಮೇಲೆ ಲೈಂಗಿಕ ಸಂಬಂಧ ನಡೆಸಿದ್ದು ಬಹುಶಃ ಕುಡಿದ ಅಮಲಿನಲ್ಲಿರಬೇಕು. ಆದರೆ ನಾನು ಆಕೆಯೊಂದಿಗೆ ದೈಹಿಕ ಸಂಬಂಧ ನಡೆಸಿದ್ದು ಹೌದು ಎಂದು ಒಪ್ಪಿಕೊಂಡಿದ್ದಾಗಿಯೂ ಪೊಲೀಸರು ಹೇಳಿದ್ದಾರೆ.

ಆಕೆಯ ಸಮ್ಮತಿಯಿಂದ ಆಕೆಯ ಜತೆಗೆ ಸಂಪರ್ಕ ಮಾಡಿದೆ ಎಂಬುದಕ್ಕೆ ಪೊಲೀಸರು, ಹಾಗಾದರೆ ಆಕೆಯೇಕೆ ಪೊಲೀಸ್ ದೂರು ದಾಖಲಿಸಿದ್ದಾಳೆ ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಶೈನಿ ಮೌನರಾಗುತ್ತಾರೆ. ಜತೆಗೆ ಪದೇಪದೇ ಈ ಪ್ರಶ್ನೆ ಕೇಳಿದರೆ, ನನಗೆ ಗೊತ್ತಿಲ್ಲ ಎಂದು ಉತ್ತರಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೇಳುವಂತೆ, ಶೈನಿ ಅವರು ಕೆಲಸದಾಕೆ ಪೊಲೀಸು ಮೆಟ್ಟಿಲು ಹತ್ತುತ್ತಾಳೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಹೀಗಾಗಿ ಪೊಲೀಸರು ಅವರ ಮನೆಗೆ ಹೋದಾಗಲೂ ಅವರು ತುಂಬ ಆರಾಮವಾಗಿ ಮನೆಯಲ್ಲಿ ಗೆಳೆಯರ ಜತೆಗೆ ನಗುತ್ತಾ ಟಿವಿ ನೋಡುತ್ತಿದ್ದರು. ಆದರೆ ಪೊಲೀಸರು ಯಾಕೆ ಬಂದಿದ್ದಾರೆಂದು ಅರ್ಥವಾಗುವಾಗ ಶೈನಿ ಭಯದಿಂದ ಗಡಗಡ ನಡುಗಲಾರಂಭಿಸಿದ್ದರು.

ಮುಂಬೈ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಹೇಳುವಂತೆ, ಶೈನಿ ವಿರುದ್ಧ ಈ ಹಿಂದೆ ಯಾವುದೇ ದೂರುಗಳು ಇಲ್ಲ. ಅವರ ಹಿಂದಿನ ಚರಿತ್ರೆಯನ್ನು ಈಗ ಪೊಲೀಸರು ಕೆದಕುತ್ತಿದ್ದು, ಈವರೆಗೆ ಶೈನಿ ಇಂತಹ ಅಥವಾ ಇನ್ನಾವುದೇ ಆರೋಪ ಹೊತ್ತಿರುವುದು ಕಂಡುಬಂದಿಲ್ಲ ಎಂದರು.

ಅಲ್ಲದೆ ಶೈನಿ ಅವರು ಕೆಲಸದಾಕೆಯೊಂದಿಗೆ ಶನಿವಾರವೇ ಸ್ವಲ್ಪ ಅನುಚಿತವಾಗಿ ಫ್ಲರ್ಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಕೆಲಸದಾಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ತಾನು ಸ್ವಲ್ಪ ಮುಂದುವರಿದರೂ ಈಕೆಗೆ ಯಾವುದೇ ತೊಂದರೆಯಿಲ್ಲ ಎಂದು ಶೈನಿ ಅಂದುಕೊಂಡು ಭಾನುವಾರ ಮುಂದುವರಿದರು. ಹಾಗಂತ ಶೈನಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶೈನಿ ಅವರಿಗೆ ಇದೀಗ ತಮ್ಮ ಮನೆಯ ಆಹಾರವನ್ನೇ ಬೇಡುತ್ತಿದ್ದು, ತನ್ನ ಗೆಳೆಯರು ಹಾಗೂ ಬಂಧುಗಳನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಆದರೂ, ವಿಚಾರಣೆ ವೇಳೆ ಶೈನಿ ಅವರಿಗೆ ಎಸಿ ರೂಮಿನ ವಿಐಪಿ ಆತಿಥ್ಯ ನೀಡಲಾಗಿತ್ತು. ಹಾಗೂ ಅವರಿದ್ದ ಕೋಣೆಗೆ ಗೆಳೆಯರು ಹಾಗೂ ಆತ್ಮೀಯ ಕುಟುಂಬವರ್ಗವನ್ನು ಒಳಕ್ಕೆ ಬಿಡಲಾಗಿತ್ತು.

ಶೈನಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಕೆಲಸದವರು ಮಾತ್ರ ಶೈನಿ ಉತ್ತಮ ಮನುಷ್ಯ ಎಂದು ಹೇಳುವ ಮೂಲಕ ಶೈನಿ ಪರ ನಿಂತಿದ್ದಾರೆ.

ಶೈನಿ ಅಹುಜಾರ ಮೇಲೆ ಇನ್ನೂ ಯಾವುದೇ ಆರೋಪಪಟ್ಟಿ ದಾಖಲಿಸಿಲ್ಲ. ಇದು ದಾಖಲಾದ ಮೇಲೆ ಸೂಕ್ತ ಕ್ರಮ ನಾವು ಕೈಗೊಳ್ಳುತ್ತೇವೆ ಎಂದು ಶೈನಿ ಪರ ವಕೀಲ ಶ್ರೀಕಾಂತ್ ಶಿವೇಡ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಅತ್ಯಾಚಾರ, ಬಾಲಿವುಡ್