ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರಾಖಿ ಸಾವಂತ್‌ಗೆ ಎಲ್ಲರನ್ನೂ ಮದುವೆಯಾಗುವಾಸೆಯಂತೆ! (Draupadi | Rakhi Sawant | Rakhi Sawant ka Swayamvar | NDTV Imagine)
ಸುದ್ದಿ/ಗಾಸಿಪ್
Feedback Print Bookmark and Share
 
Rakhi Sawant
IFM
ರಾಖಿ ಸಾವಂತ್‌ಗೆ ಅದೇನಾಗಿದೆಯೋ ಗೊತ್ತಿಲ್ಲ. ಏನೆಲ್ಲಾ ಕಿತಾಪತಿಗಳನ್ನು ಬೇಕಂತಲೇ ಮಾಡಿ ಪ್ರಚಾರ ಗಿಟ್ಟಿಸುವ ವಿವಾದಗಳ ರಾಣಿ, ಐಟಂ ಗರ್ಲ್ ರಾಖಿಯ ಸ್ವಯಂವರ ಅರ್ಥಾತ್ 'ವರನ ಬೇಟೆ' ಇದೇ ಜೂ.29ರಿಂದ ಎನ್‌ಡಿಟಿವಿ ಇಮ್ಯಾಜಿನ್ ಚಾನಲ್‌ನಲ್ಲಿ ಪ್ರಸಾರವಾಗುತ್ತಿದೆ. ಟಿವಿಯ ರಿಯಾಲಿಟಿ ಶೋನಲ್ಲೇ ಮದುವೆಯಾಗುತ್ತೇನೆಂದು ಸ್ವಯಂವರಕ್ಕೆ ಅಣಿಯಾದದ್ದು ಹಳೇ ಕಥೆಯಾದರೂ, ಈಗ ನಾನು ಈ ಸ್ವಂಯಂವರಕ್ಕೆ ಆಯ್ಕೆಯಾದ ಎಲ್ಲರಲ್ಲೂ ಮದುವೆಯಾಗಲು ರೆಡಿ ಎಂದು ಅಣಿಮುತ್ತು ಉದುರಿಸಿದ್ದಾಳೆ!!!

ಇತ್ತೀಚೆಗೆ ರಾಖೀ ಕಾ ಸ್ವಯಂವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಟಂ ಗರ್ಲ್ ರಾಖಿ ಸಾವಂತ್, ತಾನು ಮಹಾಭಾರತದ ದ್ರೌಪದಿಯಂತೆ ಎಲ್ಲರನ್ನೂ ಮದುವೆಯಾಗಲು ಇಷ್ಟಪಡುತ್ತೇನೆ. ಆಯ್ಕೆಯಾಗುವ 16 ಮಂದಿಯೆಲ್ಲರೂ ದೊಡ್ಡ ವ್ಯಕ್ತಿಗಳೇ. ಅವರೆಲ್ಲರೂ ಬುದ್ಧಿವಂತರು. ಅವರೆಲ್ಲರೂ ನನಗೆ ತುಂಬ ಇಷ್ಟವಾಗಿದ್ದಾರೆ. ಹಾಗಾಗಿ ಅವರೆಲ್ಲರನ್ನೂ ನಾನು ಮದುವೆಯಾಗಲು ನಾನು ಬಯಸುತ್ತೇನೆ ಎಂದು ಹೇಳಿದ್ದಾಳೆ. ಆಯ್ಕೆಯಾದ 16 ಮಂದಿ ಯಾರೆಂದು ಬಹಿರಂಗಪಡಿಸಲು ಇಚ್ಛಿಸದ ರಾಖಿ ಸಾವಂತ್‍‌ಗೆ, ಈಗ ಆ ಹದಿನಾರೂ ಮಂದಿಯಲ್ಲಿ ಯಾರನ್ನೂ ಬಿಡಲು ಇಷ್ಟವಿಲ್ಲವೆಂದು ತೋರುತ್ತದೆ!

ರಾಖಿಯ ಸ್ವಯಂವರದಲ್ಲಿ ರಾಖಿಗೆ ಸೂಕ್ತ ವರನನ್ನು ಆರಿಸಲು ಸಹಾಯ ಮಾಡುವುದು ರಾಮ್ ಕಪೂರ್. ಖ್ಯಾತ ಟಿವಿ ಸ್ಟಾರ್ ಆಗಿರುವ ರಾಮ್ ಕಪೂರ್ ರಾಖಿ ಕಾ ಸ್ವಯಂವರದಲ್ಲೂ ನಿರೂಪಕರೇ ಆದರೂ, ಇವರು ಸೂಕ್ತ ವರನನ್ನು ರಾಖಿ ಆಯ್ದುಕೊಳ್ಳಲು ನೆರವಾಗುತ್ತಾರೆ. ಜತೆಗೆ ಕಾರ್ಯಕ್ರಮದಲ್ಲಿ ಒಬ್ಬ ಕ್ಲಿನಿಕಲ್ ಸೈಕಾಲಜಿಸ್ಟ್‌ ಕೂಡಾ ರಾಖಿಯ ಸೂಕ್ತ 'ವರನ ಬೇಟೆ'ಗೆ ಗೈಡ್ ಮಾಡಲಿದ್ದಾರಂತೆ.

Rakhi Sawant
IFM
ಅಂದಹಾಗೆ ಈ ಕಾರ್ಯಕ್ರಮ ರಾಜಸ್ಥಾನದ ಉದಯಪುರದ ಭವ್ಯ ಹೊಟೇಲ್ ಫತೇಘರ್ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಅಲ್ಲಿ ಸ್ವಯಂವರದ ಮೂಲಕ ವರನನ್ನು ಆಯ್ಕೆ ಮಾಡುವುದರಿಂದ ರಾಖಿಗೆ ತಾನು ರಾಣಿಯಂತೆ ಅನಿಸಿದೆಯಂತೆ. ನಾನೀಗ ಉದಯಪುರದ ರಾಣಿಯಂತೆ ಅನಿಸುತ್ತಿದೆ ಎಂದೂ ಹೇಳಿದ್ದಾರೆ.

ರಾಖಿ ಸಾವಂತ್ ಈ ಸ್ವಯಂವರಕ್ಕೆ ಬಂದಿದ್ದ 12,515 ಅರ್ಜಿಗಳ ಪೈಕಿ 16 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಅಂತಿಮವಾಗಿ ಆಯ್ಕೆಯಾಗಿರುವ 16 'ವರ' ಮಹಾಶಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಿಯಾದರೆ, ಸ್ವತಃ ರಾಖಿಯೇ ಗಿಫ್ಟ್. ಸೋತರೂ ಕಾರ್ಯಕ್ರಮದಲ್ಲಿ ರಾಖಿಯೊಂದಿಗೆ ಟಿವಿಯಲ್ಲಿ ಕಾಣಿಸಿಕೊಂಡ ಭರ್ಜರಿ ಪ್ರಚಾರ. ಯಾರಿಗುಂಟು ಯಾರಿಗಿಲ್ಲ!!!

ಒಟ್ಟಾರೆ ಭಾರೀ ಕುತೂಹಲ ಹುಟ್ಟುಹಾಕಿರುವ ಈ ರಾಖೀಯ ಸ್ವಯಂವರದಿಂದಾಗಿ ಎನ್‌ಡಿಟಿವಿ ಇಮ್ಯಾಜಿನ್‌ ಭರ್ಜರಿ ಟಿಆರ್‌ಪಿ ಪಡೆಯುವುದಂತೂ ನಿಜ. ರಾಖಿಯ ಮದುವೆಗೆ ನೀವೂ ರೆಡಿಯಾಗಿ. ಜೂ.29ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ರಾಖಿಯ ಮದುವೆ ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ಪ್ರಸಾರವಾಗಲಿದೆ.

ರಾಖಿಯೇನೋ, 16 ಮಂದಿಯನ್ನು ಮದುವೆಯಾಗಲು ಇಚ್ಛೆಪಟ್ಟಿದ್ದೇನೋ ನಿಜ, ಆದರೆ ಆ 16 ಮಂದಿ ರಾಖಿಯನ್ನು ಜತೆಯಾಗಿ ಮದುವೆಯಾಗಲು ಇಚ್ಛೆಪಟ್ಟಿದ್ದಾರೋ ಗೊತ್ತಿಲ್ಲ!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ರಾಖೀ ಕಾ ಸ್ವಯಂವರ್, ದ್ರೌಪದಿ