ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅತ್ಯಾಚಾರ ಸಂದರ್ಭ ಶೈನಿ ಅಮಲಿನಲ್ಲಿರಲಿಲ್ಲ: ವೈದ್ಯಪರೀಕ್ಷೆ (Shiney Ahuja | DNA | Alcohol | Drugs | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Shiney Ahuja
IFM
ಕೆಲಸದಾಕೆಯ ಮೇಲೆ ಅತ್ಯಾಚಾರದ ಆರೋಪ ಹೊತ್ತಿರುವ ಬಾಲಿವುಡ್ ನಟ ಶೈನಿ ಅಹುಜಾ ಘಟನೆ ನಡೆದ ವೇಳೆ ಯಾವುದೇ ಅಮಲು ಪದಾರ್ಥ ಸೇವಿಸಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಗಳ ವರದಿಗಳು ತಿಳಿಸಿವೆ.

20ರ ಹರೆಯದ ಕೆಲಸದಾಕೆಯ ಮೇಲೆ ಜೂ.14ರಂದು ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಟ ಶೈನಿ ಅಹುಜಾರನ್ನು ಬಂಧಿಸಲಾಗಿತ್ತು. ಶೈನಿ ಅತ್ಯಾಚಾರ ನಡೆಸಿದ ಸಂದರ್ಭದಲ್ಲಿ ಆಲ್ಕೋಹಾಲ್ ಅಥವಾ ಇನ್ನಾವುದೇ ಡ್ರಗ್ಸ್ ಸೇವನೆಗೆ ಒಳಗಾಗಿದ್ದರೇ ಎಂದು ತಿಳಿಯಲು ಅವರ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಲಾಗಿತ್ತು. ಈಗ ಆ ವರದಿಗಳು ಹೊರಬಿದ್ದಿದ್ದು, ಅತ್ಯಾಚಾರ ನಡೆಸಿದ ಸಂದರ್ಭ ಶೈನಿ ಅಮಲು ಪದಾರ್ಥಗಳ ಸೇವನೆಗೆ ಒಳಗಾಗಿರಲಿಲ್ಲ. ಸಹಜ ಸ್ಥಿತಿಯಲ್ಲೇ ಇದ್ದರು ಎಂದು ತಿಳಿದುಬಂದಿದೆ.

ಶೈನಿ ಅತ್ಯಾಚಾರ ನಡೆಸಿದರು ಎಂದು ಹೇಳಲಾದ ಸಂದರ್ಭದಲ್ಲಿ ಸಂಪೂರ್ಣ ಸಹಜ ಸ್ಥಿತಿಯಲ್ಲೇ ಇದ್ದರು. ಅವರು ಅಮಲು ಪದಾರ್ಥಗಳ ಪರಿಣಾಮದಿಂದ ಹಾಗೆ ವರ್ತಿಸಿಲ್ಲ. ಸದ್ಯದಲ್ಲೇ ಡಿಎನ್‌ಎ ವರದಿಯೂ ಬರಲಿದ್ದು, ಈ ವರದಿ ತನಿಖೆಯ ದೃಷ್ಟಿಯಲ್ಲಿ ಪರಿಣಾಮಕಾರಿಯಾಗಿರಲಿದೆ ಎಂದು ಪೊಲೀಸ್ ಆಯುಕ್ತ ದಿಲೀಪ್ ಸೂರ್ಯವಂಶಿ ಹೇಳಿದ್ದಾರೆ.

ಅಲ್ಲದೆ, ಈಗಾಗಲೇ ಅತ್ಯಾಚಾರಕ್ಕೆ ಒಳಗಾಗಿರುವ ಕೆಲಸದಾಕೆಯ ಉಗುರಿನ ಸ್ಯಾಂಪಲ್‌ಗಳನ್ನೂ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ, ಶೈನಿ ಅವರ ವೈದ್ಯ ಪರೀಕ್ಷೆಯಲ್ಲಿ ಅವರ ಬಲಗೈಯಲ್ಲಿ ಕೆಲವು ಒರಟು ಗಾಯಗಳಿದ್ದು, ಮತ್ತೆಲ್ಲೂ ದೇಹದಲ್ಲಿ ಗಾಯಗಳು ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಜು.2ರವರೆಗೂ ನ್ಯಾಯಾಂಗ ಬಂಧನದಲ್ಲಿರುವ ಶೈನಿ ಅಹುಜಾ ತಮ್ಮ ನ್ಯಾಯವಾದಿಯ ಮೂಲಕ ಜಾಮೀನಿನ ಮೇಲೆ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಶೈನಿ ಪ್ರಕರಣಕ್ಕೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಜತೆಗೆ ಮಹಿಳಾ ಆಯೋಗವೂ ಈ ನಿಟ್ಟಿನಲ್ಲಿ ಪ್ರಕರಣಕ್ಕೆ ಬೇಗ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾದಕ ವ್ಯಸನ, ಅತ್ಯಾಚಾರ, ಶೈನಿ ಅಹುಜಾ, ಬಾಲಿವುಡ್