ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಪ್ಪ ನೋಡದಿದ್ದರೆ ಬಿಕಿನಿ ಧರಿಸ್ತೇನೆ: ಶ್ರುತಿ ಹಾಸನ್! (Kamal Haasan | Shruti Haasan | Imran Khan | Luck | Bikini)
ಸುದ್ದಿ/ಗಾಸಿಪ್
Feedback Print Bookmark and Share
 
Shruti Haasan
IFM
ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಬಿಕಿನಿ ಧರಿಸಲು ಸಿದ್ಧವಂತೆ. ಆದರೆ ಅಪ್ಪ ಕಮಲ್ ಇದ್ದರೆ ಬಿಕಿನಿ ಧರಿಸಿ ನಟಿಸಲು ನಾಚಿಕೆಯಾಗುತ್ತೆ ಅಂತಾಳೆ ಈ ಸುಂದರಿ.

ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಹಿನ್ನೆಲೆ ಸಂಗೀತಕಾರಳಾಗಿ ಹೆಸರು ಮಾಡಿದ್ದ ಶ್ರುತಿ ಹಾಸನ್ ಈಗ ಬಾಲಿವುಡ್ ನಟಿಯಾಗಿ ಎಂಟ್ರಿ ಪಡೆದಿದ್ದಾರೆ. ಸಂಜಯ್ ದತ್, ಇಮ್ರಾನ್ ಖಾನ್ ತಾರಾಬಳಗವಿರುವ 'ಲಕ್' ಚಿತ್ರದ ಮೂಲಕ ಬಾಲಿವುಡ್ಡಿಗೆ ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ಇದೇ ಮೊದಲು.

ಇಂತಿಪ್ಪ ಶ್ರುತಿ, ತಾನು ಬಿಕಿನಿ ಧರಿಸಲು ಕೂಡಾ ಸಿದ್ಧ ಎಂದಿದ್ದಾಳೆ. ತೆರೆಯ ಮೇಲೆ ಈವರೆಗೆ ಬಾಲಿವುಡ್ಡಿನಲ್ಲಿ ನಾನು ನೋಡಿದ ಬಿಕಿನಿ ದೃಶ್ಯಗಳೆಲ್ಲವೂ ಚೆನ್ನಾಗಿಯೇ ಮೂಡಿಬಂದಿದೆ. ತೆಳ್ಳನೆಯ ಉತ್ತಮ ಮೈಕಟ್ಟಿದ್ದರೆ, ಬಿಕಿನಿ ಧರಿಸುವುದರಲ್ಲಿ ಅಡ್ಡಿಯಿಲ್ಲ. ನನಗನಿಸುವ ಹಾಗೆ ನಾನು ಬಿಕಿನಿಯಲ್ಲೂ ಸುಂದರವಾಗಿ ಕಾಣಬಲ್ಲೆ. ಹಾಗಾಗಿ ಅಂತಹ ದೃಶ್ಯದ ಅಗತ್ಯವಿದ್ದರೆ ನಾನು ನಟಿಸುತ್ತೇನೆ ಅಂತಾಳೆ ಶ್ರುತಿ. ಆದರೆ, ಅಪ್ಪನ ಎದುರು ಬಿಕಿನಿ ಧರಿಸಲು ನಾಚಿಕೆಯಾಗುತ್ತದೆ. ಅಪ್ಪ ಎದುರು ಇಲ್ಲದಿದ್ದರೆ ಬಿಕಿನಿಯಲ್ಲಿ ನಟಿಸಲು ಸಿದ್ಧ ಎಂದು ನಾಲಿಗೆ ಕಚ್ಚಿಕೊಳ್ಳುತ್ತಾಳೆ ಈ ಬೆಡಗಿ.

ಇಷ್ಟೇ ಅಲ್ಲ, ಶ್ರುತಿಗೆ ತನ್ನ ಅಪ್ಪ ತನ್ನ ಅಭಿನಯ ನೋಡಲು ಶೂಟಿಂಗ್‌ಗೆ ಬಂದರೂ ಆಗುವುದಿಲ್ಲ. ಮಗಳ ತಾಕೀತಿಗೆ ಅಪ್ಪ ಕಮಲ್ ಲಕ್ ಚಿತ್ರದ ಶೂಟಿಂಗ್‌ಗೆ ಒಮ್ಮೆಯೂ ಬಂದಿಲ್ಲ. ಮಗಳು ಶ್ರುತಿ ಅಪ್ಪನಿಗೆ ತಾಕೀತು ಮಾಡಲು ಕೂಡಾ ಕಾರಣವಿದೆ. ಯಾಕೆಂದರೆ, ಅಪ್ಪ ಬಂದರೆ ನನಗೆ ನಟಿಸಲು ತುಂಬಾ ನರ್ವಸ್ ಆಗುತ್ತದೆ. ಹಾಗಾಗಿ ನೀವು ಶೂಟಿಂಗ್‌ಗೆಲ್ಲಾ ಬರಬೇಡಿ. ಚಿತ್ರೀಕರಣ ಮುಗಿದ ಮೇಲೆ ಚಿತ್ರ ಬಿಡುಗಡೆಯಾದಾಗಲೇ ನೀವು ನನ್ನ ಅಭಿನಯ ನೋಡಿದರೆ ಸಾಕು ಅಂತ ಅಪ್ಪನಿಗೆ ಶ್ರುತಿ ತಾಕೀತು ಮಾಡಿದ್ದಾಳಂತೆ.

23ರ ಹರೆಯದ ಶ್ರುತಿ ಹಾಸನ್, 'ಜಾನೇ ತೂ...' ಹುಡುಗ ಇಮ್ರಾನ್ ಖಾನ್ ಇಬ್ಬರೂ ಬಾಲ್ಯದಲ್ಲಿ 'ಚಡ್ಡಿ ದೋಸ್ತ್‌'ಗಳು. ಈಗ ಆ ಇಬ್ಬರು ಗೆಳೆಯರೂ ಕೂಡಾ 'ಲಕ್' ಚಿತ್ರದಲ್ಲಿ ಡ್ಯುಯೆಟ್ ಹಾಡುತ್ತಿದ್ದಾರೆ. ಇಮ್ರಾನ್ ನನಗೆ ಬಾಲ್ಯದ ಗೆಳೆಯ. ಆತ ನನ್ನನ್ನು ಈವರೆಗೆ ಒಬ್ಬ ಪುಟ್ಟ ತಂಗಿಯಂತೆ ನೋಡುತ್ತಿದ್ದ. ಅಣ್ಣ ತಂಗಿಯಂತೆ ನಾವಿದ್ದೆವು. ಆದರೆ ತೆರೆಯಲ್ಲಿ ಜೋಡಿಗಳಾಗಿ ನಟಿಸಿದ್ದೇವೆ. ಆತನನ್ನು ಅಣ್ಣನಂತೆ ನೋಡುತ್ತಿದ್ದ ನನಗೆ ಚಿತ್ರಕ್ಕಾಗಿ ರೊಮ್ಯಾನ್ಸ್ ಮಾಡಲು ಅಂಥ ನಾಚಿಕೆಯೇನೂ ಆಗಲಿಲ್ಲ ಎನ್ನುತ್ತಾಳೆ ಶ್ರುತಿ.

Shruti Haasan
IFM
ತಮಿಳಿನಲ್ಲಿ ಹಿಂದಿಯ ಎ ವೆಡ್‌ನೆಸ್‌ ಡೇ ಚಿತ್ರದ ರಿಮೇಕ್ ಉನ್ನೈಪೋಳ್ ಒರುವನ್ ಮಾಡುವಲ್ಲಿ ನಿರತರಾಗಿರುವ ಅಪ್ಪ ಕಮಲ್ ಹಾಸನ್‌ಗೆ ಈಗ ಶ್ರುತಿ ಸಾಥ್ ನೀಡುತ್ತಿದ್ದಾರೆ. ಹಿಂದಿಯಲ್ಲಿ ನಾಸಿರುದ್ದೀನ್ ನಿರ್ವಹಿಸಿದ ಪಾತ್ರವನ್ನು ತಮಿಳಿನಲ್ಲಿ ಕಮಲ್ ನಿರ್ವಹಿಸಲಿದ್ದಾರೆ. ಹಿಂದಿಯ ಹಿನ್ನೆಲೆ ಸಂಗೀತ ತಮಿಳಿನಲ್ಲಿ ಬಳಸಲಾಗಿಲ್ಲ. ಶ್ರುತಿ ಇದಕ್ಕಾಗಿ ತಾನೇ ಸಂಗೀತ ಕಂಪೋಸ್ ಮಾಡುತ್ತಿದ್ದಾಳೆ. ಅಪ್ಪನ ಜತೆಗೆ ಕೆಲಸ ಮಾಡುವುದು ನಿಜಕ್ಕೂ ಚಾಲೆಂಜಿಂಗ್ ಅನ್ನುತ್ತಾಳೆ ಶ್ರುತಿ.

ಅಪ್ಪ ಕಮಲ್‌ಗಂತೂ ಮಗಳು ಶ್ರುತಿ ಮೇಲೆ ಬಹಳ ಹೆಮ್ಮೆ. ಆಕೆ ಚೆನ್ನಾಗಿ ನಟಿಸುತ್ತಾಳೆಂದು ನನಗೆ ಧೈರ್ಯವಿದೆ. ಆಕೆ ಅಪ್ಪನಾದರೂ, ನಾನು ಒಬ್ಬ ವೀಕ್ಷಕನಂತೆ ಹೇಳುತ್ತೇನೆ. ಆಕೆ ಪ್ರತಿಭಾನ್ವಿತೆ. ಆಕೆಯ ಆಡಿಶನ್ ಪ್ರದರ್ಶನ ನಾನು ವೀಕ್ಷಿಸಿದೆ. ನನಗೇ ಆಶ್ಚರ್ಯವಾಯಿತು. ಆಕೆ ಅಷ್ಟು ಚೆನ್ನಾಗಿ ನಟಿಸುತ್ತಾಳೆಂದು ಅಂದುಕೊಂಡಿರಲಿಲ್ಲ. ಹಾಗಾಗಿ ನನಗೆ ಆಕೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎನ್ನುತ್ತಾರೆ ಕಮಲ್ ಹಾಸನ್.

ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯುಸಿಶಿಯನ್ಸ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಸಂಗೀತದ ಹೆಚ್ಚಿನ ಅಧ್ಯಯನ ಮಾಡಿದ ಶ್ರುತಿ, 10ನೇ ತರಗತಿವರೆಗೆ ಚೆನ್ನೈಯಲ್ಲಿ ಹಾಗೂ ನಂತರ ಮುಂಬೈಯಲ್ಲಿ ಸೈಕಾಲಜಿ ಓದಿದ್ದಾಳೆ. ತನ್ನ ಆರನೇ ವಯಸ್ಸಿಗೇ ಅಪ್ಪ ಕಮಲ್ ಹಾಸನ್‌ರ ಚಿತ್ರ ತೇವರ್ ಮಗನ್‌ಗೆ ಇಳಯರಾಜ ಸಂಗೀತ ನಿರ್ದೇಶನದಲ್ಲಿ ಹಾಡಿದ ಶ್ರುತಿ ನಂತರ ಹಿಂದಿಯಲ್ಲಿ ಚಾಚಿ 420 ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್ಡಿಗೆ ಎಂಟ್ರಿ ಪಡೆದಳು. ನಂತರ ಹೇ ರಾಮ್ ಚಿತ್ರಕ್ಕಾಗಿ ಹಿಂದಿ ಹಾಗೂ ತಮಿಳಿನಲ್ಲೂ ಹಾಡಿ ಹೆಸರು ಪಡೆದಳು. ಹೇ ರಾಮ್‌ನಲ್ಲಿ ಒಂಭತ್ತು ವರ್ಷದ ಹಿಂದೆ ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡಿದ್ದಳು. ಸದ್ಯ ಈಕೆ ಹಾಡಿದ ಹಾಡುಗಳು ವಾರಣಂ ಆಯಿರಂ ಎಂಬ ತಮಿಳು ಚಿತ್ರಕ್ಕಾಗಿ.

ಸದ್ಯದಲ್ಲೇ ಈಕೆಯೇ ಸಂಗೀತ ನಿರ್ದೇಶನ ಮಾಡಿದ, ಹಾಡಿದ ಹಾಗೂ ಬರೆದ ಮ್ಯೂಸಿಕ್ ಆಲ್ಬಂ ಹೊರಬರಲಿದೆ. ಅದೇ ಸಂದರ್ಭ ಆಕೆಯ ಚಿತ್ರ ಲಕ್ ಕೂಡಾ ತೆರೆ ಕಾಣಲಿದೆ. ಜತೆಗೆ, ಶ್ರುತಿ ಸಂಗೀತ ನೀಡಿರುವ ಎ ವೆಡ್‌ನೆಸ್‌ ಡೇ ಚಿತ್ರದ ರಿಮೇಕ್ ಕೂಡಾ ತೆರೆಕಾಣಲಿದೆ. ಒಟ್ಟಾರೆ ಮೂರು ಕೂಡಾ ಕೇವಲ ಕೆಲವೇ ದಿನಗಳ ಅಂತರದಲ್ಲಿ ನಡೆಯುವುದರಿಂದ ನನಗೆ ವಿಪರೀತ ಟೆನ್ಶನ್ ಆಗಿದೆ. ಏನೋಗುತ್ತೋ ನೋಡಬೇಕು ಎಂದಿದ್ದಾಳೆ ಶ್ರುತಿ.

ತೆಳ್ಳಗೆ, ಬೆಳ್ಳಗೆ ಚೆಂದಕ್ಕಿರುವ ಶ್ರುತಿಗೆ ಮಾಡೆಲಿಂಗ್‌ನಲ್ಲೂ ಈ ಹಿಂದೆ ಕೈಯಾಡಿಸಿದ ಅನುಭವವಿದೆ. ಸದ್ಯ ಈಕೆ ನನಗೆ ಸಿನಿಮಾ ಹಾಗೂ ಸಂಗೀತ ಎರಡೂ ಬೇಕೆಂದು ಪರಿಶ್ರಮ ಪಡುತ್ತಿದ್ದಾಳೆ. ಸಂಗೀತದಲ್ಲಿ ಈಗಾಗಲೇ ತನ್ನ ಅದ್ಭುತ ಪ್ರತಿಭೆ ಪ್ರದರ್ಶಿಸಿರುವ ಶ್ರುತಿಗೆ ಈಗ ನಟನೆಯಲ್ಲೂ ಲಕ್ಕು ಖುಲಾಯಿಸುತ್ತಾ ಅಂತ ನೋಡಬೇಕು.
Shruti Haasan
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ ಹಾಸನ್, ಕಮಲ್ ಹಾಸನ್, ಇಮ್ರಾನ್ ಖಾನ್, ಲಕ್