ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕುಕು': 'ಎ' ಫಿಲಂ ಬೈ ಉಪೇಂದ್ರ! (Upendra | Kuku | Kannada Film | London Gowda)
ಸುದ್ದಿ/ಗಾಸಿಪ್
Feedback Print Bookmark and Share
 
Upendra
MOKSHENDRA
ಇತ್ತೀಚಿನ ದಿನಗಳಲ್ಲಿ ಕೆಲವು ಟಿವಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ ಕುಕು ಚಿತ್ರದ ಟ್ರೈಲರ್ ಈಗಾಗಲೇ ಎಲ್ಲರೂ ನೋಡಿರಬೇಕು. ಅದರಲ್ಲೂ ಎ ಫಿಲಂ ಬೈ ಉಪೇಂದ್ರ ಅಂತಾ ನೋಡಿದ ಮೇಲಂತೂ ಉಪ್ಪಿ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷವಾಗಿರಬಹುದು. ಅಂತೂ ಇಂತೂ ಭಾರಿ ದಿನಗಳ ನಂತರ ನಿರ್ದೇಶನ ಮಾಡುತ್ತಿರುವ ಚಿತ್ರ ನೋಡುವ ಭಾಗ್ಯ ದೊರೆತಿದೆ ಎಂದೆಲ್ಲ ಖುಷಿ ಪಡುವ ಮುನ್ನ ಈ ತಣ್ಣೀರೆರಚುವ ಸುದ್ದಿ ಕೇಳಿ.

ಟಿವಿ ಚಾನೆಲ್‌ಗಳಲ್ಲಿ ಮೂಡಿ ಬರುತ್ತಿರುವ ಕುಕು ಟ್ರೈಲರ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಉಪ್ಪಿ ಸ್ಪಷ್ಟಪಡಿಸಿದ್ದಾರೆ. ಉಪ್ಪಿ ಚಿತ್ರ ನಿರ್ದೇಶನ ಮಾಡುವುದಕ್ಕೆ ಸ್ವಲ್ಪ ಟೈಮ್ ಬೇಕಂತೆ. ಸದ್ಯ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸುತ್ತಿರುವ ಲಂಡನ್ ಗೌಡ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ನಿರ್ದೇಶನಕ್ಕೆ ಕೈಹಾಕುವುದಿಲ್ಲ ಎಂದಿದ್ದಾರೆ.

ಹಾಗಾದರೆ ಈ ಚಿತ್ರ ಯಾರದ್ದು? ಕುಕು ಚಿತ್ರದಲ್ಲಿ ಉಪೇಂದ್ರ ಪೋಟೋ ಇದೆ. ಇವರೆ ನಿರ್ದೇಶಕರು ಎಂದು ಹೆಸರು ಕೂಡ ಇದೆ. ಆದರೆ ಇದ್ಯಾರೋ ಬೇರೆ ಉಪೇಂದ್ರರ ಕೆಲಸವಂತೆ. ನನಗೂ ಈ ಕುಕು ಚಿತ್ರಕ್ಕೂ ಸಂಬಂಧವೇ ಇಲ್ಲ. ಚಿತ್ರವನ್ನು ನಿರ್ದೇಶಿಸುತ್ತಿರುವುದು ಯಾರು ಅಂತಾನೆ ಗೊತ್ತಿಲ್ಲ. ಇದರಿಂದ ನನಗೆ ಸಿಕ್ಕಾಪಟ್ಟೆ ಫೋನ್ ಕಾಲ್ ಬರುತ್ತಿದೆ. ನನಗೆ ತುಂಬಾ ತೊಂದರೆಯಾಗುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ ಉಪೇಂದ್ರ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಕುಕು, ಲಂಡನ್ ಗೌಡ