ಮುದ್ದು ಮುಖದ ಸುಂದರಿ ಛಾಯಾಸಿಂಗ್ ಎಲ್ಲರಿಗೂ ಗೊತ್ತೆ ಇರತ್ತೆ ಬಿಡಿ. ಇವರ ಬಗ್ಗೆ ಒಂದು ಹೊಸ ಸುದ್ದಿ ಗಾಂಧಿನಗರದಲೆಲ್ಲಾ ಗುಲ್ಲಾಗಿದೆ. ಆದೇನೆಂದರೆ ಛಾಯಾ ನಿರ್ದೇಶಕಿಯಾಗಲು ಹೊರಟಿದ್ದಾರೆ. ಇವರ ಅಭಿನಯದ ಯಾವ ಚಿತ್ರವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಾಧ್ಯವಾಗಿಲ್ಲ. ಮತ್ತೆ ಇವರಿಗೆ ಹೇಳಿಕೊಳ್ಳುವಂತ ಆಫರ್ ಕೂಡ ದೊರೆಯುತ್ತಿಲ್ಲ.
ಛಾಯಾಸಿಂಗ್‌ಗೆ ನಟನೆ ಅಷ್ಟು ಕೈ ಹಿಡಿಯಲಿಲ್ಲ. ಇದರಿಂದ ಬೇಸತ್ತ ಇವರು ನಿರ್ದೇಶನದ ಕಡೆ ಮುಖ ಮಾಡಿದ್ದಾರೆ. ಈ ಹಿಂದೆ ಜೀ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕುಣಿಯೋಣ ಬಾರಾ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದರು. ಈಗ ತಾವು ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದು ಗಾಂಧಿನಗರದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿ ಗಾಂಧಿನಗರ ಮಂದಿಗೆ ಆಶ್ಚರ್ಯ ಮೂಡಿಸಿದ್ದಾರೆ.
ಇವರು ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಗಾಂಧಿನಗರ ಎಂದು ಹೆಸರಿಟ್ಟಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ಚಿತ್ರ ಕನ್ನಡದಲ್ಲಷ್ಟೆ ಅಲ್ಲದೆ ತಮಿಳು, ತೆಲುಗು ಮತ್ತು ಬೋಜ್ಪುರಿ ಭಾಷೆಯಲ್ಲೂ ತಯಾರಾಗುತ್ತಿದೆ ಅಂತೆ. ಚಿತ್ರದ ಮುಹೂರ್ತ ಮತ್ತು ಚಿತ್ರೀಕರಣ ಯಾವಾಗ ನಡೆಯಲಿದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಚಿತ್ರದ ನಾಯಕ ಹಾಗೂ ನಾಯಕಿ ಯಾರು ಎಂಬುದು ಇನ್ನೂ ತಿಳಿಯಬೇಕಿದೆ. ಏನೇ ಆಗಲಿ ಛಾಯಾಸಿಂಗ್‌ಗೆ ಆಲ್ ದ ಬೆಸ್ಟ್ ಹೇಳೋಣ.