ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಬರಲಿದ್ದಾನೆ ಯೋಧ (Yodha | Kannada Film | Darshan | Om Prakash Rao)
ಸಿನಿಮಾ ಮುನ್ನೋಟ
Feedback Print Bookmark and Share
 
Darshan
MOKSHENDRA
ಚಿತ್ರ: ಯೋಧ
ನಿರ್ದೇಶಕ: ಓಂ ಪ್ರಕಾಶ್ ರಾವ್
ತಾರಾಬಳಗ: ದರ್ಶನ್, ನಿಖಿತಾ

ಬಹು ನಿರೀಕ್ಷೆಯ ಓಂ ಪ್ರಕಾಶ್ ರಾವ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯೋಧ ಚಿತ್ರ ಈ ವಾರ ಬಿಡುಗಡೆ ಕಾಣುತ್ತಿದೆ. ಯೋಧ ತಮಿಳಿನ ಯಶಸ್ವಿ ಚಿತ್ರ ಬೋಸ್‌ನ ರಿಮೇಕ್ ಆಗಿದೆ.

ಯೋಧ ಚಿತ್ರದಲ್ಲಿ ದರ್ಶನ್ ದೇಶ ಭಕ್ತ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ನಿಖಿತಾ ಅಭಿನಯಿಸುತ್ತಿದ್ದಾರೆ. ಚಿತ್ರದ ಹಲವು ದೃಶ್ಯಗಳಲ್ಲಿ ದರ್ಶನ್ ಯೋಧನ ಡ್ರೆಸ್ನಲ್ಲೇ ಕಾಣಿಸಿಕೊಂಡಿದ್ದಾರಂತೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ದೇಶ ಭಕ್ತಿ ಎತ್ತಿ ಹೇಳುವಂತಹ ಸಂಭಾಷಣೆ ಅದ್ಬುತವಾಗಿ ಮೂಡಿ ಬಂದಿದೆಯಂತೆ. ಜತೆಗೆ ಖಂಡಿತವಾಗಿ ಅಭಿಮಾನಿಗಳಿಗೆ ಈ ಬಾರಿ ನಿರಾಸೆಗೊಳಿಸಲ್ಲ ಎನ್ನುವ ನಂಬಿಕೆಯನ್ನು ದರ್ಶನ್ ಹೊಂದಿದ್ದಾರೆ.

ದೇಶಭಕ್ತಿಯಿರುವ ಕುಟುಂಬದಿಂದ ಬಂದ ಇವರು ಕಮಾಂಡೋ ಪಾತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ತರಹದ ಪಾತ್ರದಲ್ಲಿ ದರ್ಶನ್ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಅಭಿಪ್ರಾಯಕ್ಕೆ ದರ್ಶನ್ ಕಾಯುತ್ತಿದ್ದಾರಂತೆ. ಕಲಾಸಿಪಾಳ್ಯ, ಮಂಡ್ಯ ಹಾಗೂ ಅಯ್ಯ ಚಿತ್ರದ ನಂತರ ದರ್ಶನ್ ಓಂ ಪ್ರಕಾಶ್ ರಾವ್ ನಿರ್ದೇಶನದ ಯೋಧ ಚಿತ್ರದಲ್ಲಿ ನಟಿಸಿದ್ದಾರೆ. ನಾಯಕಿ ನಿಖಿತಾ ಕೂಡ ಉತ್ತಮವಾಗಿ ಸಾಥ್ ನೀಡಿದ್ದಾರೆ ಅಂತಾರೆ ನಿರ್ದೇಶಕ ಪ್ರಕಾಶ್. ಹಾಡುಗಳು ಕೂಡ ಚಿತ್ರದ ಹೈಲೈಟ್ ಅಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಧ, ದರ್ಶನ್, ಓಂಪ್ರಕಾಶ್ ರಾವ್, ಬೋಸ್