ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ | | | ನವದೆಹಲಿ , ಗುರುವಾರ, 19 ಮಾರ್ಚ್ 2009( 12:55 IST ) | | | |
| | |
| ಕಳೆದ ವಾರ ಹಣದುಬ್ಬರ ದದ ಶೇ.2.43ರಷ್ಟಿದ್ದು, ಮಾರ್ಚ್ 7 ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.0.44ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಸಗಟು ಸೂಚ್ಯಂಕ ದರ ಏರಿಳಿಕೆಯ ಮೇಲೆ ಹಣದುಬ್ಬರವನ್ನು ಅಳೆಯಲಾಗುತ್ತಿದ್ದು, ಮೂಲ ದರಗಳ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಹಿಂದಿನ ವಾರದಲ್ಲಿ 227.7 ರಷ್ಟಿದ್ದ ಸಗಟು ಸೂಚ್ಯಂಕ ದರ, ಪ್ರಸಕ್ತ ವಾರದಲ್ಲಿ 226.7ಕ್ಕೆ ಇಳಿಕೆಯಾಗಿ ಹಣದುಬ್ಬರ ಶೇ.0.44ಕ್ಕೆ ಕುಸಿತಗೊಂಡಿದೆ. ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ ಮಾರ್ಚ್ 7ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ದರ ಶೇ.0.89ಕ್ಕೆ ಇಳಿಕೆಯಾಗಲಿದೆ. ಪ್ರಾಥಮಿಕ ಅಗತ್ಯ ವಸ್ತುಗಳ ದರಗಳು ಶೇ.1.04 ರಷ್ಟು ಇಳಿಕೆಯಾಗಲಿದ್ದು,ಇಂಧನ, ವಿದ್ಯುತ್ ದರಗಳು ಶೇ.0.77ಕ್ಕೆ ಇಳಿಕೆಯಾಗಲಿದೆ ಎಂದು ವರದಿ ಮಾಡಿದ್ದವು.ಕೇಂದ್ರದ ವಾಣಿಜ್ಯ ಕಾರ್ಯದರ್ಶಿ ಜಿ.ಕೆ ಪಿಳ್ಳೈ ಮಾತನಾಡಿ, ಅಲ್ಪ ಹಣದುಬ್ಬರ ಕುಸಿತದಿಂದಾಗಿ ಬೇಡಿಕೆ ದುರ್ಬಲವಾಗುವುದಿಲ್ಲ. ಮೂಲ ದರಗಳ ಮೇಲೆ ಬೀರಿದ ಪ್ರಭಾವದಿಂದಾಗಿ ಹಣದುಬ್ಬರ ಶೇ.1ರಷ್ಟು ಕುಸಿತವಾದಲ್ಲಿ ಹಣದುಬ್ಬರ ಕುಸಿತವೆಂದು ಕಂಡುಬರುವುದಿಲ್ಲ ಎಂದು ಹೇಳಿದ್ದಾರೆ. |
| |
|