| ಹಣದುಬ್ಬರ ಕುಸಿತದ ಓಟ ಮುಂದುವರಿಕೆ | | | ಮುಂಬೈ, ಗುರುವಾರ, 11 ಜೂನ್ 2009( 13:00 IST ) | | | |
| | |
| ಭಾರತದ ಹಣದುಬ್ಬರದಲ್ಲಿನ ಕುಸಿತದ ಓಟ ಮುಂದುವರಿದಿದ್ದು, ಹಣದುಬ್ಬರ ದರ ಮೇ 30ಕ್ಕೆ ವಾರಾಂತ್ಯಗೊಂಡಂತೆ ಹಿಂದಿನ ವಾರ ಶೇ.0.48 ಇಳಿಕೆಯಾಗಿತ್ತು. ಪ್ರಸಕ್ತ ಗುರುವಾರ ಬಿಡುಗಡೆಗೊಂಡ ಅಂಕಿ-ಅಂಶದ ಪ್ರಕಾರ ಶೇ.0.13ಕ್ಕೆ ಕುಸಿದಿದೆ.ಕಳೆದ ವಾರಾಂತ್ಯದಲ್ಲಿ ಹಣದುಬ್ಬರ ಹಿಂದಿನ ವಾರದಲ್ಲಿದ್ದ ಶೇ.0.61ರಿಂದ ಶೇ.0.48ಕ್ಕೆ ಇಳಿಕೆ ಕಂಡಿತ್ತು. ಇದೀಗ ಹಣದುಬ್ಬರದಲ್ಲಿ ಮತ್ತಷ್ಟು ಕುಸಿತ ಕಂಡಿದ್ದು, 0.13ಕ್ಕೆ ಇಳಿಕೆ ಕಂಡಿದೆ. ಅಗತ್ಯ ದಿನಸಿ ವಸ್ತುಗಳು ಹಣ್ಣು ಟೀ ,ದ್ವಿದಳ ಧಾನ್ಯಗಳ ದರಗಳಲ್ಲಿ ಏರಿಕೆಯಾಗಿದ್ದರೂ ಹಣದುಬ್ಬರ ದರ ಮಾತ್ರ ಕುಸಿತದ ಓಟ ಮುಂದುರಿಯುತ್ತಲೇ ಇದೆ. ಹಣದುಬ್ಬರ ದರ ಆಧಾರಿತ ಸಗಟು ಸೂಚ್ಯಂಕ ದರ ಕಳೆದ ವರ್ಷದ ಮೇ ತಿಂಗಳಲ್ಲಿ ಶೇ.8.90 ರಷ್ಟಾಗಿತ್ತು. ಪ್ರಸಕ್ತ ವಾರದಲ್ಲಿ ಮೆಕ್ಕೆ ಜೋಳ ,ಮಸಾಲೆ ಪದಾರ್ಥಗಳು ಮತ್ತು ಹಣ್ಣು ದರಗಳಲ್ಲಿ ಏರಿಕೆಯಾಗಿದ್ದು, ಟೆಕ್ಸ್‌ಟೈಲ್, ರಬ್ಬರ್, ಪ್ಲ್ಯಾಸ್ಟಿಕ್, ಮೆಟಲ್, ಹಾಗೂ ಮೆಷಿನರಿ ಎಕ್ಯುಪ್‌ಮೆಂಟ್ ದರಗಳಲ್ಲಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. |
| |
| | |
| | | |
|
| | | | | |
|
|
| |
|  | |